ದೆಹಲಿ ಗಲಭೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಜಾಮಿಯಾ ಮಿಲಿಯಾ ಯೂನಿವರ್ಸಿಟಿಯ ಗರ್ಭಿಣಿ ವಿದ್ಯಾರ್ಥಿನಿ ಸಫೂರ ಝರ್ಗಾರ್‌ಗೆ ಕೊನೆಗೂ ಜಾಮೀನು ಲಭಿಸಿದೆ. ಐದು ತಿಂಗಳ ಗರ್ಭಿಣಿಯಾಗಿರುವ ಸಫೂರರನ್ನು ʼಮಾನವೀಯತೆಯ ಆಧಾರʼದ ಮೇಲೆ ಜಾಮೀನು ನೀಡಲು ದೆಹಲಿ ಪೊಲೀಸರು ಅಡ್ಡಿ ಪಡಿಸಲಿಲ್ಲ.
Also Read: ಗರ್ಭಿಣಿ ಸಫೂರಾ ಝರ್ಗಾರ್ ಇನ್ನೆಷ್ಟು ದಿನಗಳ ಕಾಲ ತಿಹಾರ್ ಜೈಲಿನಲ್ಲಿ!?
ಸಿಎಎ ವಿರುದ್ದದ ಹೋರಾಟದ ಸಂದರ್ಭದಲ್ಲಿ ಫೆಬ್ರವರಿಯಲ್ಲಿ ಜರುಗದಂತಹ ದೆಹಲಿ ಗಲಭೆಯ ವಿಚಾರದಲ್ಲಿ 27 ವರ್ಷದ ಅಫೂರ ಅವರನ್ನು ಏಪ್ರಿಲ್ 10ರಂದು ಬಂಧಿಸಲಾಗಿತ್ತು. ಅವರಿಗೆ ಆಗಲೇ ಜಾಮೀನು ಲಭಿಸಿತ್ತಾದರೂ, ಯುಎಪಿಎ ಕಾಯ್ದೆಯಡಿಲ್ಲಿ ಮತ್ತಷ್ಟು ಕಠಿಣ ಆರೋಪಗಳನ್ನು ದೆಹಲಿ ಪೊಲೀಸರು ಸಫೂರ ಮೇಲೆ ಹೊರಿಸಿದ್ದರಿಂದ ಜೈಲಿನಿಂದ ಹೊರಬರಲಾಗಿರಲಿಲ್ಲ.
Also Read: CAA ವಿರೋಧಿ ಹೋರಾಟಗಾರ್ತಿ ಸಫೂರಾ ಝರ್ಗಾರ್ ಬಂಧನಕ್ಕೆ ಲಂಡನ್ ಮೂಲದ 90 ವಿದ್ವಾಂಸರ ಕಳವಳ
ಈಗ ಶರತ್ತುಬದ್ದ ಜಾಮೀನು ವಿಧಿಸಿರುವ ದೆಹಲಿ ಹೈಕೋರ್ಟ್ ವಿಚಾರಣೆಯ ದಿಕ್ಕು ತಪ್ಪಿಸುವಂತಹ ಯಾವುದೇ ಚಟುವಟಿಗಳನ್ನು ಮಾಡದಂತೆ ಹಾಗೂ ಅನುಮತಿಯಿಲ್ಲದೇ ದೆಹಲಿ ಬಿಟ್ಟು ಬೇರೆಲ್ಲಿಯೂ ಹೋಗದಂತೆ ಸೂಚಿಸಿದೆ. ಇನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿಯೊಂದಿಗೆ ಕನಿಷ್ಟ 15 ದಿನಗಳಿಗೊಮ್ಮೆ ಫೋನ್ ಮೂಲ ಸಂಪರ್ಕವನ್ನು ಇಟ್ಟುಕೊಳ್ಳಬೇಕು ಹಾಗೂ ರೂ. 10,000ದ ವೈಯಕ್ತಿಕ ಬಾಂಡ್‌ಅನ್ನು ಭರಿಸಬೇಕು ಎಂದು ಹೇಳಿದೆ.
Also Read: ತಿಹಾರ್ ಜೈಲಿನಿಂದಲೇ ʼರಂಝಾನ್ʼ ಆರಂಭಿಸುವಂತಾದ CAA ವಿರೋಧಿ ಗರ್ಭಿಣಿ ಹೆಣ್ಣು ಮಗಳು!
ಈ ಹಿಂದಿನ ಜಾಮೀನು ಅರ್ಜಿಗಳಿಗೆ ದೆಹಲಿ ಪೊಲೀಸರು ಬಹಳಷ್ಟು ವಿರೋಧ ವ್ಯಕ್ತಪಡಿಸಿದ್ದರು. ʼಸಫೂರ ಅವರ ವಿರುದ್ದ ದಾಖಲಾಗಿರುವ ಆರೋಪಗಳು ಬಹಳ ಗಂಭೀರವಾದಂತಹವು,ʼ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು.
ಇನ್ನು ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯ ಜೈಲುಗಳಲ್ಲಿ 39 ಹೆರಿಗೆಗಳು ನಡೆದಿವೆ. ಕರೋನಾ ಸೋಂಕು ಸಫೂರಾಗೆ ಹರಡದಂತೆ ವಿಶೇಷ ಕೋಣೆಯ ವ್ಯವಸ್ಥೆಯನ್ನೂ ಮಾಡಿದ್ದೇವೆಂದು ಹೇಳಿದ್ದರು.
ಜಾಫ್ರಾಬಾದ್‌ನಲ್ಲಿ ನಡೆದಂತಹ ಗಲಭೆಗಳಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಬೀದಿಗಿಳಿಸಿ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಾಗಿಸಿದ ಆರೋಪ ಸಫೂರ ಅವರ ಮೇಲಿತ್ತು.