ಕಲಬುರಗಿ: ಜಿಲ್ಲಾ ಕೇಂದ್ರದಿಂದ ಯಾದಗಿರಿ, ರಾಯಚೂರು, ಮಂತ್ರಾಲಯ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕಲಬುರಗಿ-ಶಹಾಬಾದ್ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಯು ಸಾವಿನ ಹೆದ್ದಾರಿಯಾಗಿದ್ದು, ಜನರನ್ನು ಬಲಿ ತೆಗೆದುಕೊಳ್ಳಲು ಕಾದು ನಿಂತಿದೆ.ಈ ರಸ್ತೆಯ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.ಸಚಿವರು, ಶಾಸಕರು, ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಕಲಬುರಗಿಯಿಂದ-ಭಂಕೂರ ಕ್ರಾಸ್ ಸಮೀಪ ಸುಮಾರು 25 ಕಿ.ಮೀ. ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.ನಗರದ ಹೊರವಲಯದ ಶಹಾಬಾದ್ ಕ್ರಾಸ್‌ನಿಂದ ಸ್ವಲ್ಪ ಮುಂಚೆ ಸಾಗಿದರೆ ಶೆಟ್ಟಿ ಕಾಲೇಜು, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೆನ್‌ಬ್ರಿಡ್ಜ್ ಸ್ಕೂಲ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬರುತ್ತವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಕೆಟ್ಟ ರಸ್ತೆಯನ್ನು ಬಳಸಿಕೊಂಡು ಸಂಚರಿಸಬೇಕಿದೆ. ಜೊತೆಗೆ, ನಂದೂರು-ಕೆಸರಟಗಿ ಕೈಗಾರಿಕಾ ಪ್ರದೇಶವೂ ಇಲ್ಲಿರುವುದರಿಂದ ನಿತ್ಯ ನೂರಾರು ಲಾರಿಗಳು ಲೋಡ್ ತುಂಬಿಕೊಂಡು ಇಲ್ಲಿಗೆ ಬರುತ್ತವೆ.ಕೆಲ ತಿಂಗಳ ಹಿಂದೆ ಶುರುವಾಗಿರುವ ಕಲಬುರಗಿ-ಮಂತ್ರಾಲಯ-ಬೆಂಗಳೂರು ವೋಲ್ವೊ ಮಲ್ಟಿ ಆಯಕ್ಸೆಲ್ ಬಸ್ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳ ಬೆಲೆಬಾಳುವ ಬಸ್‌ಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಇಂತಹ ಕೆಟ್ಟ ರಸ್ತೆಯಲ್ಲಿ ಐಷಾರಾಮಿ ಬಸ್ ಓಡಿಸುವುದರಿಂದ ಬೇಗನೇ ದುರಸ್ತಿಗೆ ಬರುತ್ತಿವೆ. ಅಲ್ಲದೇ, ರಸ್ತೆ ತೀವ್ರವಾಗಿ ಹದಗೆಟ್ಟಿರುವುದರಿಂದ ನಿಗದಿತ ಸ್ಥಳವನ್ನು ತಲುಪಲು ತಡವಾಗುತ್ತಿದ್ದು, ಪ್ರಯಾಣಿಕರಿಂದ ನಿಂದನೆಗೆ ಒಳಗಾಗಬೇಕಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು.ನಂದೂರು ಕೈಗಾರಿಕಾ ಪ್ರದೇಶ ದಾಟುತ್ತಿದ್ದಂತೆಯೇ ಅಲ್ಲಲ್ಲಿ ದೊಡ್ಡ ತಗ್ಗುಗಳು ಎದುರಾಗುತ್ತವೆ. ಅವೈಜ್ಞಾನಿಕ ರೋಡ್ ಹಂಪ್‌ಗಳು ಪ್ರಯಾಣಿಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತವೆ.
ಅಧಿವೇಶನದ ಬಳಿಕ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
"ಪೌರಕಾರ್ಮಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ. ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಐಪಿಡಿ ಸಾಲಪ್ಪ...
Read moreDetails