• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸರ್ಕಾರದ ವಿರುದ್ಧದ ಹೋರಾಟಗಳನ್ನೇ ಅಪರಾಧಿಕರಿಸುತ್ತಿರುವ ಕೇಂದ್ರ ಸರಕಾರ

by
May 7, 2020
in ದೇಶ
0
ಸರ್ಕಾರದ ವಿರುದ್ಧದ ಹೋರಾಟಗಳನ್ನೇ ಅಪರಾಧಿಕರಿಸುತ್ತಿರುವ ಕೇಂದ್ರ ಸರಕಾರ
Share on WhatsAppShare on FacebookShare on Telegram

ಕರೋನಾ ಪ್ರಸ್ತುತ ಇಡೀ ವಿಶ್ವದ ಎದುರು ದೊಡ್ಡ ಸವಾಲೊಂದನ್ನು ಎಸೆದಿದೆ. ಇಡೀ ವಿಶ್ವದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಒಂದೆಡೆ ಬಡತನ, ಹಸಿವು ಮತ್ತು ನಿರುದ್ಯೋಗ ಕಾಡುತ್ತಿದ್ದರೆ, ಮತ್ತೊಂದೆಡೆ ಇದರ ವಿರುದ್ಧ ಹೋರಾಟಕ್ಕೆ ಇಡೀ ವಿಶ್ವ ಸಜ್ಜಾಗಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಮಾತ್ರ ಕರೋನಾ ಕಾಲದ ಲಾಕ್ಡೌನ್ ಸಹ ಸಹಕಾರಿಯಾಗಿ ಬದಲಾಗಿರುವುದು ವಿಪರ್ಯಾಸ.

ADVERTISEMENT

ಲಾಕ್ಡೌನ್ ಸಮಯದಲ್ಲಿ ಎಲ್ಲಾ ದೇಶಗಳು ಕರೋನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿದ್ದರೆ, ಭಾರತದಲ್ಲಿ ಮಾತ್ರ ಈ ಅವಧಿಯಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನೇ ಹತ್ತಿಕ್ಕುತ್ತಿರುವುದು ಮತ್ತು ಸರ್ಕಾರದ ವಿರುದ್ಧದ ಎಲ್ಲಾ ದ್ವನಿಗಳನ್ನು ಅಡಗಿಸಲು ಬಳಸುತ್ತಿರುವುದು ಅತ್ಯಂತ ಖೇದಕರ ಮತ್ತು ಬೇಜವಾಬ್ದಾರಿತನ.

2019ರ ಆಗಸ್ಟ್ ತಿಂಗಳಿನಿಂದ ಇಡೀ ರಾಷ್ಟ್ರವ್ಯಾಪಿ NRC-NPR ಮತ್ತು CAA ಕಾಯ್ದೆಯ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ದೆಹಲಿಯಲ್ಲಂತು JNU ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಆರಂಭದಿಂದಲೂ ಈ ಹೋರಾಟದ ಮುಂಜೂಣಿಯಲ್ಲಿದ್ದರು. ಅಲ್ಲದೆ, ಇಲ್ಲಿನ ಶಾಹೀನ್ ಬಾಗ್ ಎಂಬ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಸತತವಾಗಿ ಈ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದರು.

ಭಾರತದ ಮಟ್ಟಿಗೆ ಅಣ್ಣಾ ಅಜಾರೆ ನೇತೃತ್ವದಲ್ಲಿ ನಡೆದ ಜನ ಲೋಕಪಾಲ್ ಮತ್ತು ಭ್ರಷ್ಟಚಾರ ವಿರೋಧಿ ಆಂದೋಲನದ ನಂತರ ನಡೆದ ಬಹುದೊಡ್ಡ ಹೋರಾಟ ಇದಾಗಿತ್ತು. ಕೇಂದ್ರ ಸರ್ಕಾರ ಏನೇ ಮಾಡಿದರೂ ಈ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗಲೇ ಇಲ್ಲ. ಈ ಸಂದರ್ಭ ಕೇಂದ್ರ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಅನೇಕ ಕಸರತ್ತುಗಳನ್ನು ನಡೆಸಿದ್ದು ಸುಳ್ಳಲ್ಲ.

ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಪುಂಡರ ಆರ್ಭಟ:

ಸಿಎಎ ಕಾಯ್ದೆಯ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಬಲಗೊಂಡಂತೆ ಪೊಲೀಸರಿಗೆ ಮೊದಲು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯಕ್ಕೆ ದಾಳಿ ಇಡುವಂತೆ ನಿರ್ದೇಶನ ನೀಡಲಾಗಿತ್ತು. ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ನುಗ್ಗಿದ್ದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದರು. ಪರಿಣಾಮ ಹಲವಾರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು.

ಇನ್ನೂ ಕೆಲವು ಗೂಂಡಾಗಳು JNU ವಿಶ್ವವಿದ್ಯಾಲಯದ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ JNU ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಶೆ ಘೋಷ್ ತಲೆ ಪೆಟ್ಟಾಗಿ ಆಕೆ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೆ ಬದುಕಿ ಬಂದಿದ್ದಳು. ಆದರೆ, ಆನಂತರ ಆಕೆಯ ಮೇಲೆ ಕೇಸು ದಾಖಲಿಸಲಾಗಿತ್ತು.

ಆದರೆ, ಸರ್ಕಾರ ಏನೇ ಮಾಡಿದರೂ ಸಹ ಈ ಹೋರಾಟವನ್ನು ಹತ್ತಿಕ್ಕುವುದು ಸಾಧ್ಯವಾಗಿರಲಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರಕವಾದ ಕರೋನಾ ಭಾರತಕ್ಕೆ ಹಾವಳಿ ಇಡುತ್ತಿದ್ದಂತೆ, ಈ ಹೋರಾಟವನ್ನು ಹತ್ತಿಕ್ಕಲು ಕೇಂದ್ರಕ್ಕೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿತ್ತು. ಲಾಕ್ಡೌನ್ ಸಂದರ್ಭದಲ್ಲೂ ಸದ್ದಿಲ್ಲದೆ ಸಾಲು ಸಾಲು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ.

ಲಾಕ್ಡೌನ್ ಮತ್ತು ಹೋರಾಟಗಾರರ ಬಂಧನ:

ದೇಶದಾದ್ಯಂತ ಕರೋನಾ ಲಾಕ್ಡೌನ್ ಜಾರಿಯಾಗಿದೆ. ಸಿಎಎ ವಿರೋಧಿ ಆಂದೋಲನ ಇದೀಗ ಜನ ಸಾಮಾನ್ಯರ ಸ್ಮೃತಿ ಪಟಲದಿಂದ ಬಹುತೇಕ ಮರೆಯಾಗಿದೆ. ಮಾಧ್ಯಮಗಳಿಗೂ ಕರೋನಾ ಸುದ್ದಿಯೇ ಸಾಕಾಗಿದೆ. ಸಿಎಎ ವಿರೋಧಿ ಆಂದೋಲನವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರಕ್ಕೆ ಇಷ್ಟು ಸಾಕಾಗಿತ್ತು. ಆದರೆ, ಇದನ್ನೂ ದಾಟಿ ಕೇಂದ್ರ ಮಾಡುತ್ತಿರುವುದು ಮಾತ್ರ ಅಕ್ಷಮ್ಯ.

ಇಡೀ ದೇಶದ ಜನ ಮತ್ತು ಮಾಧ್ಯಮ ಕರೋನಾ ಕುರಿತು ಸದ್ದುಗದ್ದಲದಲ್ಲಿ ಮರೆಯಾಗಿರುವಾಗ ಕೇಂದ್ರ ಸರ್ಕಾರ ಹೋರಾಟಗಾರರ ವಿರುದ್ಧ ಸೇಡಿಗೆ ಮುಂದಾಗಿದೆ. ಈಗಾಗಲೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಫೂರ ಜಾರ್ಗರ್ ಮತ್ತು ಮೀರನ್ ಹೈದರ್ ಎಂಬ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಜಾಮಿಯಾ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿಫಾ-ಉರ್-ರೆಹಮಾನ್ ನನ್ನು ಬಂಧಿಸಲಾಗಿದೆ.

ಅಷ್ಟೇ ಅಲ್ಲ ಸಂಶೋಧನಾ ವಿದ್ಯಾರ್ಥಿ ಸಫೂರ ಜರ್ಗರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಆಕೆಯ ಬಂಧನದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮೇಲೆ ಕೆಟ್ಟ ವೈಯಕ್ತಿಕ ದಾಳಿ ನಡೆಯುತ್ತಿದೆ.

ಮುಜಾಫರ್‌ಪುರದ ಬಿಜೆಪಿ ಸದಸ್ಯ ಎಂದು ಗುರುತಿಸಿಕೊಂಡಿರುವ ಮನೋಜ್ ಕುಮಾರ್ ಆಜಾದ್ ಅವರು ಆಕೆಯ ಕುರಿತು ಮೇ 4 ರಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ “ಶಾಹೀನ್‌ ಬಾಗ್‌ನಲ್ಲಿ ದಂಗೆ ಮಾಡಿದ ನಂತರ ಅವಿವಾಹಿತ ಜಾಮಿಯಾ ಕಾನೂನು ವಿದ್ಯಾರ್ಥಿನಿ ಸಫೂರಾ ಜಾರ್ಗರ್ ಗಲಭೆಗಳನ್ನು ಪ್ರಚೋದಿಸಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಆಕೆಯನ್ನು ಕರೋನವೈರಸ್ ಪರೀಕ್ಷೆಗೆ ಒಳಪಡಿಸಿದಾಗ, ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಹಂಚಿಕೊಂಡಿದ್ದರು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ನಂತರ ದೃಢಪಡಿಸಲಾಗಿತ್ತು.

ಪ್ರತಿಭಟನೆಯನ್ನೇ ಅಪರಾಧಿಕರಿಸುತ್ತಿರುವ ಸರ್ಕಾರ:

ಇತ್ತೀಚೆಗೆ ದೇಶದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದೇ ಅಪರಾಧ ಎಂಬಂತಹ ಮನಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ. ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರು ಪೂರ್ವಾಗ್ರಹ ಪೀಡಿತ ಕ್ರಮಗಳನ್ನು ಜರುಗಿಸಲು ಮುಂದಾಗಿದೆ.

ವಿಪರ್ಯಾಸವೆಂದರೆ ಪೌರತ್ವ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ನಡೆದ ಶಾಂತಿಯುತ ಚಳುವಳಿಯನ್ನು, ದೆಹಲಿಯ ಗಲಭೆಯ ಜೊತೆಗೆ ಜೋಡಿಸಲು ಆ ಮೂಲಕ ಹೋರಾಟಗಾರರ ವಿರುದ್ಧ ಸೇಡಿಗೆ ಕೇಂದ್ರ ಮುಂದಾಗಿದೆ.

ಆದರೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಶಾಂತಿಯುತ ಚಳುವಳಿಯಾಗಿದ್ದು, ಭಾರತದ ಪೌರತ್ವ ಕಾನೂನುಗಳನ್ನು ಕೋಮುಗೊಳಿಸುವ ಪ್ರಯತ್ನಗಳನ್ನು ವಿರೋಧಿಸುವ ಮತ್ತು ಆ ಮೂಲಕ ಭಾರತೀಯ ಜಾತ್ಯತೀತತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮಗಳ ವಿರುದ್ಧ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಗಮನಾರ್ಹ ಹಿನ್ನಡೆ ಎನ್ನದೆ ಬೇರೆ ವಿಧಿ ಇಲ್ಲ.

Tags: ‌ ಕೇಂದ್ರ ಸರಕಾರ‌ ದೆಹಲಿ ಪೊಲೀಸ್Anti CAA NRC NPRCentral GovtCovid 19Delhi Policesafoora zargaarಎನ್‌ಆರ್‌ಸಿಎನ್‌ಪಿಆರ್‌ಕೋವಿಡ್-19ಸಫೂರಾ ಝರ್ಗಾರ್ಸಿಎಎ
Previous Post

ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

Next Post

ನಗರದ ಬೀದಿಗಳ ʼಸ್ಯಾನಿಟೈಸ್‌ʼನಿಂದ ನಿಜಕ್ಕೂ ಕರೋನಾ ದೂರವಾಗುವುದೇ?

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
ಶೋಬಾ ಕರಂದ್ಲಾಜೆ ಕಾರು ಡಿಕ್ಕಿಯಾಗಿ ವ್ಯಕ್ತಿ ಬಲಿಯಾಗಿರುವ ಘಟನೆ

ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

March 30, 2026
Next Post
ನಗರದ ಬೀದಿಗಳ ʼಸ್ಯಾನಿಟೈಸ್‌ʼನಿಂದ ನಿಜಕ್ಕೂ ಕರೋನಾ ದೂರವಾಗುವುದೇ?

ನಗರದ ಬೀದಿಗಳ ʼಸ್ಯಾನಿಟೈಸ್‌ʼನಿಂದ ನಿಜಕ್ಕೂ ಕರೋನಾ ದೂರವಾಗುವುದೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada