ಬೆಂಗಳೂರಿಗರಿಗೆ BMRCL ಗುಡ್ ನ್ಯೂಸ್ ಕೊಟ್ಟಿದೆ. ಹಳದಿ ಮಾರ್ಗದ ಮೆಟ್ರೋ ಸಂಚಾರ ಎಂದಿನಿಂದ ಎಂದು ಕಾದಿದ್ದ ಬೆಂಗಳೂರಿಗರಿಗೆ ಈಗೊಂದು ಅಪ್ಡೇಟ್ ಸಿಕ್ಕಿದೆ. ಹಳದಿ ಮಾರ್ಗದ ಸಂಚಾರಕ್ಕೆ ಸಂಬಂಧಪಟ್ಟಂತೆ ಸದ್ಯ ಈಗಾಗಲೆ ೩೭ ಟೆಸ್ಟಿಂಗ್ ನಡೆದಿದ್ದು , ಇನ್ನು ಹಲವು ಹಂತಗಳ ಟೆಸ್ಟಿಂಗ್ ನಂತರ ಶೀಘ್ರದಲ್ಲೇ ಜನರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು BMRCL ತಿಳಿಸಿದೆ.
ವಿಶೇಷ ಅಂದ್ರೆ ಈಗಾಗಲೇ ಚಾಲ್ತಿಯಲ್ಲಿರುವ ನೇರಳೆ ಮತ್ತು ಹಸಿರು ಮಾರ್ಗಕಿಂತ ಹಳದಿ ಮಾರ್ಗ ವಿಭಿನ್ನವಾಗಿ ಕಾರ್ಯ ನಿರ್ವಹಿಸಲಿದೆ ಎಂದು BMRCL ತಿಳಿಸಿದೆ.
ಹಳದಿ ಮಾರ್ಗಕ್ಕಾಗಿ ವಿಶೇಷವಾದ ಬೋಗಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದು ಈ ಬೋಗಿಗಳು ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ಹಳದಿ ಬೋಗಿಗಳು ಸ್ವಯಂ ಚಾಲಿತ ಬೋಗಿಗಳಿದ್ದು, ಯಾವುದೇ ಡ್ರೈವರ್ ಸಹಾಯವಿಲ್ಲದೆ ಚಲಿಸಬಹುದಾದ ತಂತ್ರಜ್ಞಾನ ಹೊಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಳದಿ ಮಾರ್ಗದ ಮೆಟ್ರೋ ಸಂಚಾರ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಈ ಬೋಗಿಗಳ ಟ್ರಯಲ್ ರನ್ ಶುರುವಾಗಿದ್ದು ೪ ತಿಂಗಳಲ್ಲಿ ಬರೋಬ್ಬರಿ ೩೭ ಬಾರಿ ಪರೀಕ್ಷೆ ಮಾಡಲಾಗಿದೆ. ಸ್ವಯಂ ಚಾಲಿತವಾಗಿರೋದ್ರಿಂದ ಬಹಳಷ್ಟು ಮುಂಜಾಗ್ರತೆ ವಹಿಸಬೇಕಾಗಿದೆ. ಹೀಗಾಗಿ ಇನ್ನು ಹಲವು ಸುತ್ತಿನ ಟೆಸ್ಟಿಂಗ್ ಬಾಕಿ ಇದ್ಯಂತೆ. ಹಾಗಾಗಿ ಇನ್ನು ೨-೩ ತಿಂಗಳ ಕಾಲಾವಕಾಶ ಬೇಕಾಗಬಹುದು, ಆ ನಂತರವಷ್ಟೇ ಜನಬಳಕೆಗೆ ಲಭ್ಯವಾಗಲದೆ ಎಂದು BMRCL ಹೇಳಿದೆ.
ಈ ಮುಂಚೆ ಹೇಳಿದ್ದ ಪ್ರಕಾರ ಇಷ್ಟೊತ್ತಿಗೆಲ್ಲಾ ಹಳದಿ ಮಾರ್ಗದ ಮೆಟ್ರೋ ಸಂಚಾರ ಆರಂಭವಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿದ್ದು, ಆದಷ್ಟು ಬೇಗ ಮೆಟ್ರೋ ಸಂಚಾರ ಆರಂಭವಾದ್ರೆ ಟ್ರಾಫಿಕ್ ದಟ್ಟಣೆಯಿಂದ ಮುಕ್ತಿ ಹೊಂದಬಹುದು ಅಂತ ಜನ ಕಾತುರರಾಗಿದ್ದಾರೆ.