• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸದನದಲ್ಲಿ ಕ್ಷಮೆಯಾಚಿಸಿದ ಕೇಂದ್ರ ಸಚಿವ ಅನುರಾಗ್‌ ಠಾಕುರ್‌

by
September 18, 2020
in ದೇಶ
0
ಸದನದಲ್ಲಿ ಕ್ಷಮೆಯಾಚಿಸಿದ ಕೇಂದ್ರ ಸಚಿವ ಅನುರಾಗ್‌ ಠಾಕುರ್‌
Share on WhatsAppShare on FacebookShare on Telegram

ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಮಂತ್ರಿ ಅನುರಾಗ್‌ ಠಾಕುರ್‌ ಅವರ ನೆಹರೂ ಮತ್ತು ಗಾಂಧಿ ಕುಟುಂಬ ವಿರುದ್ದ ಹೇಳಿಕೆಯಿಂದ ಉಂಟಾದ ಗದ್ದಲದ ಕಾರಣಕ್ಕಾಗಿ, ಲೋಕಸಭೆಯನ್ನು ಶುಕ್ರವಾರದಂದು ನಾಲ್ಕು ಬಾರಿ ಮುಂದೂಡಲಾಯಿತು. ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ಸದನದ ಕ್ಷಮೆಯನ್ನೂ ಕೇಳಿದ್ದಾರೆ.

ADVERTISEMENT

ತೆರಿಗೆ ಮತ್ತು ಇತರ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸಮಯದಲ್ಲಿ PM-CARES ಕುರಿತು ಅನುರಾಗ್‌ ಠಾಕುರ್‌ ಮಾತನಾಡಿದಾಗ, ವಿಪಕ್ಷಗಳು ಪಿಎಂ-ಕೇರ್ಸ್‌ ನಿಧಿಯ ಪಾರದರ್ಶಕತೆಯ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ್ದ ಠಾಕುರ್‌, ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದಾಗ, ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ದುರ್ಬಳಕೆ ಮಾಡಲಾಗಿತ್ತು ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ, ನೆಹರೂ ಮತ್ತು ಗಾಂಧಿ ಕುಟುಂಬದ ಹೆಸರನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಅವರು ಈ ದೇಶವನ್ನು ಹಾಳುಗೆಡವಿದ್ದಾರೆ, ಎಂದು ಠಾಕುರ್‌ ಹೂಂಕರಿಸಿದ್ದರು.

“ಹೈಕೋರ್ಟ್‌ನಿಂದ ಸುಪ್ರಿಂ ಕೋರ್ಟ್‌ವರೆಗೆ ಎಲ್ಲಾ ಕೋರ್ಟ್‌ಗಳು ಪಿಎಂ-ಕೇರ್ಸ್‌ ನಿಧಿಯನ್ನು ಅಂಗೀಕರಿಸಿವೆ. ಸಣ್ಣ ಮಕ್ಕಳು ಕೂಡಾ ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ನೆಹರೂ ರೂಪಿಸಿದ ಪರಿಹಾರ ನಿಧಿ, ಈವರೆಗೂ ಅಧಿಕೃತವಾಗಿ ನೋಂದೀಕೃತವಾಗಿಲ್ಲ. ಕಾಂಗ್ರೆಸ್‌ನವರು ತಮ್ಮ ಕುಟುಂಬದ ಉದ್ದಾರಕ್ಕಾಗಿ ಟ್ರಸ್ಟ್‌ ಸ್ಥಾಪಿಸಿ ಅದಕ್ಕೆ ಸೋನಿಯಾ ಗಾಂಧಿ ಅವರನ್ನು ಚೇರ್ಮನ್‌ ಆಗಿ ಮಾಡಿದ್ದಾರೆ. ಈ ಕುರಿತು ತನಿಖೆಯಾಗಬೇಕು,” ಎಂದು ಅನುರಾಘ್‌ ಠಾಕುರ್‌ ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಉತ್ತರ ನೀಡಿದ ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿ, “ಯಾರಿದು ಹಿಮಾಚಲ ಪ್ರದೇಶದ ಹುಡುಗ? ನೆಹರೂ ಪ್ರಸ್ತಾಪ ಈ ಚರ್ಚೆಯಲ್ಲಿ ಯಾಕೆ ಬಂತು? ನಾವು ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸಿದ್ದೇವಾ?. ಪಿಎಂ-ಕೇರ್ಸ್‌ಗೆ ಚೀನಾ ಮೂಲದ ಕಂಪೆನಿಗಳಿಂದಲೂ ದೇಣಿಗೆ ಬಂದಿದೆ. ಅದನ್ನು ಕೂಡಾ ತನಿಖೆಗೆ ಒಳಪಡಿಸಬೇಕು,” ಎಂದು ಅನುರಾಗ್‌ ಠಾಕುರ್‌ ವಿರುದ್ದ ಕಿಡಿಕಾರಿದ್ದಾರೆ.

ನಂತರ ಅನುರಾಗ್‌ ಠಾಕುರ್‌ ಅವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಸದನದಿಂದ ಹೊರ ನಡೆದಿದ್ದಾರೆ. ಈ ನಡುವೆ, ಸಭಾಧ್ಯಕ್ಷರಾದ ಓಮ್‌ ಬಿರ್ಲಾ ಅವರು ಬಿಜೆಪಿ ಸದಸ್ಯರ ಪರ ವಹಿಸುತ್ತಾ ಇದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ವೇಳೆ ಸದಸ್ಯರಿಗೆ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಪಾಲಿಸಲು ಆದೇಶ ನೀಡಿದ ಸಭಾಧ್ಯಕ್ಷರು, ಮಾಸ್ಕ್‌ ಹಾಕಿಕೊಳ್ಳದ ಸದಸ್ಯರ ಹೆಸರುಗಳನ್ನು ಹೇಳಿ ಅವರನ್ನು ಸದನದಿಂದ ಹೊರ ಹಾಕಲಾಗುವುದು ಎಂದು ಹೇಳಿದ್ದಾರೆ. “ಯಾರಾದರು ಮಾತನಾಡಲು ನಿಂತುಕೊಂಡರೆ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ.ಅವರನ್ನು ಸದನದಿಂದ ಹೊರಗಿಡಲಾಗುತ್ತದೆ. ಇದು ಮಂತ್ರಿಗಳೂ ಸೇರಿದಂತೆ ಎಲ್ಲಾ ಸದಸ್ಯರಿಗೆ ಅನ್ವಯವಾಗುತ್ತದೆ,” ಎಂದು ಹೇಳಿದ್ದಾರೆ.

ನಂತರ ಸದನವನ್ನು 30 ನಿಮಿಷಗಳಿಗೆ ಅಂದರೆ 4.20PM ಮುಂದೂಡಲಾಗಿದೆ.

ಮತ್ತೆ ಸದನ ಆರಂಭವಾದಾಗ, ನಿರ್ಮಲಾ ಸೀತಾರಾಮನ್‌ ಅವರು ಮಸೂದೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಗೌರವ್‌ ಗೊಗೋಯ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಅನುರಾಗ್‌ ಠಾಕುರ್‌ ಅವರು ಕ್ಷಮೆಯಾಚಿಸಬೇಕೆಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಸದನದ ಅಧ್ಯಕ್ಷರಾಗಿ ಕುಳಿತಿದ್ದ ರಮಾ ದೇವಿ ಅವರು, ಚೌಧರಿ ಅವರಿಗೆ ಮಸೂದೆಯ ಕುರಿತು ಮಾತನಾಡಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, ಮೊದಲು ಸದನವು ಶಾಂತವಾಗಬೇಕು ಎಂದರು. ನಂತರ ಅನುರಾಗ್‌ ಠಾಕುರ್‌ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದರು.

ಅಷ್ಟರಲ್ಲಿ ʼಅನುರಾಗ್‌ ಠಾಕುರ್‌ ಮಾಫಿ ಮಾಂಗೊʼ (ಅನುರಾಗ್‌ ಠಾಕುರ್‌ ಕ್ಷಮೆ ಕೇಳಿ) ಎಂದು ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸದನವನ್ನು ಮತ್ತೆ 30 ನಿಮಿಷಗಳ ಕಾಲ ಅಂದರೆ ಸಂಜೆಯ 5ಗಂಟೆಯವರೆಗೆ ಮುಂದೂಡಲಾಯಿತು.

ಅದಾದ ಬಳಿಕವೂ ಕಾಂಗ್ರೆಸ್‌ ಸದಸ್ಯರು ತಮ್ಮ ಪಟ್ಟು ಬಿಡದ ಕಾರಣಕ್ಕೆ ಸದನವನ್ನು ಮತ್ತೆ 30 ನಿಮಿಷಗಳ ಕಾಲ ಎರಡು ಬಾರಿ ಸಂಜೆ 6 ಗಂಟೆಯವರೆಗೆ ಮುಂದೂಡಲಾಯಿತು.

ಕೊನೆಗೂ ಕ್ಷಮೆ ಕೇಳಿದ ಅನುರಾಗ್‌ ಠಾಕುರ್‌

ನಾಲ್ಕು ಬಾರಿ ಸದನ ಮುಂದೂಡಿದ ಬಳಿಕ ಮತ್ತೆ ಸದನ ಪುನರಾರಂಭಗೊಂಡಾಗ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರ ಸೂಚನೆಯ ಮೇರೆಗೆ ಠಾಕುರ್‌ ಸದನದಲ್ಲಿ ಕ್ಷಮೆಯಾಚಿಸಿದರು. “ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ, ನನಗೂ ನೋವಾಗಿದೆ,” ಎಂದು ಅವರು ಹೇಳಿದ್ದಾರೆ.

Tags: Anurag ThakurGandhi FamilynehruParliamentಕಾಂಗ್ರೆಸ್ಕೇಂದ್ರ ಸಚಿವ ಅನುರಾಗ್‌ ಠಾಕುರ್‌ಗಾಂಧಿ ಕುಟುಂಬನೆಹರೂ
Previous Post

ದಿಢೀರ್ ಬಾದಲ್ ಬಂಡಾಯಕ್ಕೆ ಕಾರಣವಾಯಿತೇ ಕುಸಿದುಬಿದ್ದ ಮೋದಿ ವರ್ಚಸ್ಸು?

Next Post

ಕರ್ನಾಟಕ: 5 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಕರ್ನಾಟಕ: 5 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

ಕರ್ನಾಟಕ: 5 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada