• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಚಿವ ಸುಧಾಕರ್‌ ಕಾಳಜಿ ಟ್ವಿಟರ್‌ಗಷ್ಟೇ ಸೀಮಿತವಾಯಿತೇ..?

by
August 2, 2020
in ಕರ್ನಾಟಕ
0
ಸಚಿವ ಸುಧಾಕರ್‌ ಕಾಳಜಿ ಟ್ವಿಟರ್‌ಗಷ್ಟೇ ಸೀಮಿತವಾಯಿತೇ..?
Share on WhatsAppShare on FacebookShare on Telegram

ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಚಿವರಲ್ಲೊಬ್ಬರು. ಆದರೆ ಖಾಸಗಿ ಆಸ್ಪತ್ರೆಗಳ ಹಾವಳಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸತತವಾಗಿ ಟ್ವೀಟ್‌ ಮೂಲಕ ಎಚ್ಚರ ನೀಡುತ್ತಿರುವ ಸಚಿವರು ಶಿಸ್ತು ಕ್ರಮ ಕೈಗೊಳ್ಳಲು ಗಂಭೀರ ಕ್ರಮಗಳು ತೆಗೆದುಕೊಂಡಂತೆ ಕಾಣುವುದಿಲ್ಲ.

ಇತ್ತೀಚಿಗೆ ನಟಿ ಸುಧಾರಾಣಿಗೆ ಅಪೋಲೋ ಆಸ್ಪತ್ರೆಯಲ್ಲಿ ಆದ ತೊಂದರೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಚಿವ ಸುಧಾಕರ್ “ನಟಿ ಸುಧಾರಾಣಿ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು” ಎಂದು ಟ್ವೀಟ್‌ ಮಾಡಿದ್ದರು. ಆದರೆ ಯಾವ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಬಹಿರಂಗಗೊಂಡಿಲ್ಲ.

ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್‌ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್‌ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು 1/2 pic.twitter.com/hoWD1JRfxU

— Dr Sudhakar K (@mla_sudhakar) July 29, 2020


“ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್‌ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್‌ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು” ಎಂದು ಜುಲೈ 29 ಕ್ಕೆ ಟ್ವೀಟ್‌ ಮಾಡಿದ ಸುಧಾಕರ್‌, ಅಂದೇ “ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ಇಂದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಟ್ವೀಟ್‌ ಮಾಡಿದ್ದರು.

ಕೊರೊನಾ ವಾರಿಯರ್‌ ಆ್ಯಂಬುಲೆನ್ಸ್ ಚಾಲಕನ ಮೇಲೆ ಬೆಂಗಳೂರಿನ ಎಂಎಸ್‌ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿ ಹಲ್ಲೆ ಮಾಡಿರೋದು ಅಮಾನವೀಯ ವರ್ತನೆ. ಪ್ರಾಣವನ್ನು ಲೆಕ್ಕಿಸದೇ 108 ಚಾಲಕ ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಕರೆ ತಂದರೆ ಈ ರೀತಿ ಹಲ್ಲೆ ಹಲ್ಲೆ ಮಾಡಿರೋದು ಸರಿಯಲ್ಲ. 1/2 pic.twitter.com/jK5HqiQL0C

— Dr Sudhakar K (@mla_sudhakar) July 30, 2020


ರೋಗಿಯೊಬ್ಬರು ಆ್ಯಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಕ್ಕೆ ಎಂಎಸ್‌ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿ ರೋಗಿಯ ಸಂಬಂಧಿಕರು ಆ್ಯಂಬುಲೆನ್ಸ್ ಚಾಲಕನ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ ಸಚಿವರು ಬೆಂಗಳೂರಿನ ಎಂಎಸ್‌ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿ ಹಲ್ಲೆ ಮಾಡಿರೋದು ಅಮಾನವೀಯ ವರ್ತನೆ. ಪ್ರಾಣವನ್ನು ಲೆಕ್ಕಿಸದೇ 108 ಚಾಲಕ ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಕರೆ ತಂದರೆ ಈ ರೀತಿ ಹಲ್ಲೆ ಹಲ್ಲೆ ಮಾಡಿರೋದು ಸರಿಯಲ್ಲ, ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರೋಗಿಯನ್ನು ಕಾಯಿಸಿದ್ದಕ್ಕೆ 75 ವರ್ಷದ ವ್ಯಕ್ತಿ ಆ್ಯಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆಯನ್ನು ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಆದರೆ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಬೇಗ ಅಡ್ಮಿಟ್‌ ಮಾಡಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಟ್ವೀಟ್‌ ಮಾಡಿದ್ದರು.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರೋಗಿಯನ್ನು ಕಾಯಿಸಿದ್ದಕ್ಕೆ 75 ವರ್ಷದ ವ್ಯಕ್ತಿ ಆ್ಯಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆಯನ್ನು ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಆದ್ರೆ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಬೇಗ ಅಡ್ಮಿಂಟ್‌ ಮಾಡಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು.

— Dr Sudhakar K (@mla_sudhakar) July 30, 2020


ಪ್ರಧಾನಿ ಮೋದಿಯವರಿಂದ ಹೊಗಳಿಸಿಕೊಂಡಿದ್ದ ಮಂಡ್ಯದ ಕಾಮೇಗೌಡರೂ ಚಿಕಿತ್ಸೆ ಲಭ್ಯವಾಗದೆ ಪರದಾಡುತ್ತಿರುವಾಗ ಕಾಮೇಗೌಡರು ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ, ಸೂಕ್ತ ಚಿಕಿತ್ಸೆ ನೀಡಲು ಸೂಚಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ವ್ಯಾಪ್ತಿಯಲ್ಲಿ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಬರಲಿದ್ದು, ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗುತ್ತಿಲ್ಲ. ಆದರೆ, ಡಾ ಸುಧಾಕರ್‌ ದಿನನಿತ್ಯ ಸುದ್ದಿಗೋಷ್ಠಿ ನಡೆಸುತ್ತಾ ಮಾಧ್ಯಮಗಳ ಎದುರು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಎಷ್ಟು ಪ್ರಕರಣಗಳಾದರೂ ನಮ್ಮ ಸರ್ಕಾರ ಉತ್ತಮವಾಗಿ ನಿಭಾಯಿಸಲಿದೆ. ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದಾರೆ.

ನಟಿ ಸುಧಾರಾಣಿ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು. pic.twitter.com/25weXYdMiu

— Dr Sudhakar K (@mla_sudhakar) July 28, 2020


ಹಾಗೆ ಹೇಳುವ ಅದೇ ಸಚಿವರು ಖಾಸಗಿ ಆಸ್ಪತ್ರೆಯವರು ಹಾಸಿಗೆ ನೀಡುತ್ತಿಲ್ಲ, ನೀಡಲು ತಡ ಮಾಡುತ್ತಿದ್ದಾರೆ ಹಾಗಾಗಿ ರೋಗಿಗಳ ಪ್ರಾಣ ಹೋಗಿದೆ ಎಂದು ಟ್ವೀಟ್‌ ಮಾಡಿ ಕೈ ತೊಳೆಯುತ್ತಿದ್ದಾರೆ. ಸಚಿವರು ತಮ್ಮೆಲ್ಲಾ ಕಾಳಜಿಯನ್ನು ಟ್ವೀಟ್‌ ಮಾಡಲು ಮಾತ್ರ ವಿನಿಯೋಗಿಸುತ್ತಿದ್ದಾರೆ. ನಿಜಾರ್ಥದಲ್ಲಿ ಖಾಸಗಿ ಆಸ್ಪತ್ರೆಗಳ ಲಾಭಕೋರತನವನ್ನು ನಿಯಂತ್ರಿಸಲು ಸಚಿವರು ಸೇರಿದಂತೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಯ ಲಾಬಿಯೆದುರು ಸರ್ಕಾರ ದುರ್ಬಲವಾಗಿ ಮುದುಡಿ ಕೂತಿದೆ. ಸರ್ಕಾರವನ್ನು ಚುನಾಯಿಸಿದ ಜನರು ಚಿಕಿತ್ಸೆ ಸಿಗದೆ ಆಂಬ್ಯುಲೆನ್ಸಿನಲ್ಲಿ, ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸರ್ಕಾರದ ನಿಯಮದಂತೆ ಶೇ.50% ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಮಾರತ್ ಹಳ್ಳಿಯ ಸಾಕ್ರ ಆಸ್ಪತ್ರೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳನ್ನಾಗಿ ಹೊಣೆ ಮಾಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ ಆಗಸ್ಟ್‌ ಒಂದರಂದು ಸಚಿವರು ಟ್ವೀಟ್‌ ಮಾಡಿದ್ದಾರೆ. ಆದರೆ ಈ ಕ್ರಮ ಯಾವ ರೀತಿ ಪರಿಣಾಮ ಬೀರಲಿದೆಯೆಂದು ಗೊತ್ತಿಲ್ಲ. ಇದಕ್ಕೂ ಮೊದಲು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದ ಅಪೋಲೋ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಮುಂದಿನ 48 ಗಂಟೆಗಳ ಕಾಲ ಮುಚ್ಚಿಸಲಾಗಿತ್ತು. ಅದಾಗ್ಯೂ ಖಾಸಗಿ ಆಸ್ಪತ್ರೆಯಲ್ಲಿ ಅತೀ ಹೆಚ್ಚು ಬಿಲ್‌ ಮಾಡುವುದು, ರೋಗಿಗಳಿಗೆ ಹಾಸಿಗೆ ನಿರಾಕರಿಸುವುದು ನಡೆದೇ ಇತ್ತು.

ಸರ್ಕಾರದ ನಿಯಮದಂತೆ ಶೇ.50% ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಮಾರತ್ ಹಳ್ಳಿಯ ಸಾಕ್ರ ಆಸ್ಪತ್ರೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಸಲಿಸಲಾಗಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳನ್ನಾಗಿ ಹೊಣೆ ಮಾಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ.

— Dr Sudhakar K (@mla_sudhakar) August 1, 2020


ADVERTISEMENT

ಬೆಂಗಳೂರು ನಗರದಲ್ಲಿ ರೋಗಿಗಳಿಗೆ ಹಾಸಿಗೆ ನೀಡದೆ ಸತಾಯಿಸಲ್ಪಡುತ್ತಿರುವ ವರದಿ ಇಂದು ನಿನ್ನೆಯದಲ್ಲಾ, ಕೋವಿಡ್‌ ಪ್ರಕರಣಗಳು ಅತಿಯಾಗಿ ಬಂದಾಗಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಸರ್ಕಾರ ಹಾಸಿಗೆ ತಯಾರು ಮಾಡಲಾಗಿದೆಯೆಂದರೂ, ಚಿಕಿತ್ಸೆ ನೀಡಲು ಶಕ್ತವಾಗಿದೆಯೆಂದರೂ ಹಾಸಿಗೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಬಾಣಂತಿಯೊಬ್ಬರು ಹಾಸಿಗೆ ಸಿಗದ ಕಾರಣ ಆರು ದಿನದ ಹಸುಗೂಸನ್ನು ತಬ್ಬಲಿ ಮಾಡಿ ಆಂಬ್ಯುಲೆನ್ಸಲ್ಲೇ ಕೊನೆಯುಸಿರೆಳೆದಿದ್ದರು. ಆ ಬಾಣಂತಿಗೆ ಹಾಸಿಗೆ ದೊರಕಿಸಲು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಪ್ರಯತ್ನ ಪಟ್ಟರೂ ಯಶ ಕಾಣಲಿಲ್ಲ. ಓರ್ವ ಶಾಸಕಿಯೇ ಖುದ್ದು ಪ್ರಯತ್ನಪಟ್ಟರೂ ಚಿಕಿತ್ಸೆ ಕೊಡಿಸುವಲ್ಲಿ ನಿಸಾಹಾಯಕರಾದರೆ ಸಾಮಾನ್ಯ ಜನರ ಪಾಡೇನು?

ಇಲ್ಲಿ ಸಮಸ್ಯೆ ಇರುವುದು ತಮ್ಮ ಅಧಿಕಾರದ ಬಲ ಅರಿಯಲು ವಿಫಲಾಗಿರುವ ಸರ್ಕಾರದ್ದು. ಸಚಿವರಿಗೆ ಹಾಗೂ ಸರ್ಕಾರಕ್ಕೆ ತಮ್ಮ ಶಕ್ತಿಯ ಕುರಿತು ಇನ್ನೂ ತಿಳಿದಿಲ್ಲ ಎಂದು ಭಾಸವಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ವಿರುದ್ಧ ಟ್ವಿಟರಿನಲ್ಲಿ ಗುಟುರು ಹಾಕುವುದು ಬಿಟ್ಟು ಧೈರ್ಯವಾಗಿ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ಅದಕ್ಕೂ ಮೊದಲು ಸರ್ಕಾರಕ್ಕಿರುವ ಅಧಿಕಾರವನ್ನು ಕರ್ನಾಟಕದ ಸಚಿವರಿಗೆ ಒಮ್ಮೆ ಪಾಠ ಮಾಡಬೇಕಿದೆ. ಆನ್‌ಲೈನ್‌ ಕ್ಲಾಸ್‌ ಮುಖಾಂತರವಾದರೂ ಈ ತರಗತಿ ಜರೂರಾಗಿ ನಡೆಯಬೇಕಿದೆ.

Previous Post

ಚರ್ಚೆಗೆ ಗ್ರಾಸವಾಗಿರುವ ಪ್ರಧಾನಿ ಮೋದಿ ಅವರ ನೂತನ ಶಿಕ್ಷಣ ನೀತಿ

Next Post

ಕರೋನಾ ಮರಣ ಪ್ರಮಾಣ ಏರಲು ಸರ್ಕಾರದ ನಿರ್ಧಾರವೇ ಕಾರಣವಾಯಿತೇ?

Related Posts

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?
Top Story

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

by ಪ್ರತಿಧ್ವನಿ
December 19, 2025
0

ಬೆಂಗಳೂರು : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ(Winter Session 2025) ಅಭಿವೃದ್ದಿಯ ಚರ್ಚೆಯ ಬಿಟ್ಟು ಕಾಂಗ್ರೆಸ್‌ ನಾಯಕರು ಡಿನ್ನರ್‌ ಮೀಟಿಂಗ್‌ನಲ್ಲಿ ಮುಳುಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬ್ರೇಕ್‌ ಪಾಸ್ಟ್‌...

Read moreDetails
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
Next Post
ಕರೋನಾ ಮರಣ ಪ್ರಮಾಣ ಏರಲು ಸರ್ಕಾರದ ನಿರ್ಧಾರವೇ ಕಾರಣವಾಯಿತೇ?

ಕರೋನಾ ಮರಣ ಪ್ರಮಾಣ ಏರಲು ಸರ್ಕಾರದ ನಿರ್ಧಾರವೇ ಕಾರಣವಾಯಿತೇ?

Please login to join discussion

Recent News

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?
Top Story

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

by ಪ್ರತಿಧ್ವನಿ
December 19, 2025
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

December 19, 2025
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada