• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಂಸತ್ತಿನಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ

by
September 20, 2020
in ಕರ್ನಾಟಕ
0
ಸಂಸತ್ತಿನಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ
Share on WhatsAppShare on FacebookShare on Telegram

ಕಳೆದ ಕೆಲವು ದಿನಗಳಿಂದ ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರದ ವಿರುದ್ಧದ ಕಾವು ತೀವ್ರವಾಗುತ್ತಿದೆ. ಕೇಂದ್ರ ಸರ್ಕಾರ ತರಹೊರಟಿರುವ ಎನ್‌ಇಪಿ2020 ವಿರುದ್ಧ ಹಿಂದಿಯೇತರ ರಾಜ್ಯಗಳು ಸಿಡಿದೆದ್ದಿವೆ.

ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಮಂಡ್ಯದ ಸಂಸದೆ ಕೇಂದ್ರದ ಭಾಷಾ ತಾರಾತಮ್ಯದ ವಿರುದ್ಧ ದನಿಯೆತ್ತಿದ್ದಾರೆ.

ಶನಿವಾರ ಲೋಕಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದೆ, ನಮ್ಮ ಭಾರತ ಒಕ್ಕೂಟ ವ್ಯವಸ್ಥೆ ಹಾಗೂ ಇಲ್ಲಿನ ವೈವಿಧ್ಯಮಯ ಭಾಷಾ ಸಂಸ್ಕೃತಿಯಿಂದಾಗಿ ವಿಶ್ವದಲ್ಲೇ ಒಂದು ಗುಣಮಟ್ಟ ದೇಶವಾಗಿದೆ. ಕರ್ನಾಟಕ ರಾಜ್ಯವು ಬಹುತ್ವದ ಸಂಪ್ರದಾಯ ಹಾಗೂ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದು, ಅದನ್ನು ನಾವೆಲ್ಲರೂ ಗೌರವಿಸುತ್ತೇವೆ. ನಮ್ಮ ಭಾಷೆ ಸಾವಿರಾರು ವರ್ಷಗಳ ಹಿಂದಿನದ್ದು ಹಾಗೂ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವುದು.

Kannadigas are as much Indian as anyone else. We love Hindi but love our mother tongue more. Forcing homogeneity through a single language has negative impacts , the issue I raised during Zero Hour todayhttps://t.co/sDfp1G98gohttps://t.co/p1bvCnMH3s

— Sumalatha Ambareesh ಸುಮಲತಾ ಅಂಬರೀಶ್ (@sumalathaA) September 19, 2020


ಹಿಂದಿಯನ್ನು ಪ್ರಮುಖ ಭಾಷೆಯನ್ನಾಗಿ ಮಾಡಿದರೆ ಕನ್ನಡ ಮಾತ್ರ ಬರುವವರಿಗೆ ಸಂವಹಿಸಲು ಕಷ್ಟವಾಗುತ್ತದೆ. ಹಾಗಾಗಿ ತ್ರಿಭಾಷಾ ಸೂತ್ರ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತವೆ.

ನಾನು ದಕ್ಷಿಣ ಭಾರತದ ಲಕ್ಷಾಂತರ ಜನರನ್ನು ಪ್ರತಿನಿಧಿಸಿ ಹೇಳುತ್ತೇನೆ. ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾವೂ ಹಿಂದಿಯನ್ನು ಪ್ರೀತಿಸುತ್ತೇವೆ. ಆದರೆ ಅದಕ್ಕೂ ಹೆಚ್ಚು ಕನ್ನಡವನ್ನು ಪ್ರೀತಿಸುತ್ತೇವೆ. ನಾವು ಕನ್ನಡಿಗರು, ನಾವು ಭಾರತೀಯರು ಎಂದು ಸುಮಲತಾ ಅಂಬರೀಷ್‌ ಹೇಳಿದ್ದಾರೆ.

ಸುಮಲತಾ ಅಂಬರೀಶ್ ಅವ್ರು ಸಂಸದರ ನಿದಿಯನ್ನು #PMCaresFund ಗೆ ಡೊನೇಟ್ ಮಾಡಿದ್ದನ್ನು ಕಂಡಿಸಿ ಒಂದು ಟ್ವೀಟ್ ಮಾಡಿದ್ದೆ ಅಶ್ಟಕ್ಕೆ ಅವರು ನನ್ನನ್ನು ಬ್ಲಾಕ್ ಮಾಡಿದ್ದಾರೆ, ಆದ್ರೆ ಇವತ್ತು ಕನ್ನಡಿಗರ ಸಮಸ್ಯೆಯನ್ನು ಸಂಸತ್ತಿನಲ್ಲಿ ಸರಳವಾಗಿ ಹೇಳಿಕೊಂಡಿದ್ದಾರೆ, ಇದು ನಮಗೆ ಬೇಕಾಗಿರೋದು. ಇಂತಾ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಅವರಿಗಿದೆ. ನನ್ನೀ https://t.co/cEZBsVwO4W

— ಶುಕಮುನಿ(Shukki) (@sukamuni) September 19, 2020


ಸಂಸತ್ತಿನಲ್ಲಿ ಕನ್ನಡ ಪರವಾಗಿ ಮಾತನಾಡಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪಕ್ಷಗಳನ್ನು ಮೀರಿ ಸುಮಲತಾರನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಬೆಂಬಲಿಸಿದ್ದಾರೆ. ಅಲ್ಲದೆ ಹಿಂದಿ ಹೇರಿಕೆಯನ್ನು ವಿರೋಧಿಸದ ಉಳಿದ ಸಂಸದರ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ.

ನಾವು ಕನ್ನಡಿಗರು, ನಾವು ಭಾರತೀಯರು : ಸುಮಲತಾ ಅಂಬರೀಶ್

ಕೇಂದ್ರ ಸರಕಾರದ ಹಿಂದಿ ಹೇರಿಕೆ ಬಗ್ಗೆ ಸಂಸತ್ತಿನ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಕನ್ನಡ ಅಭಿಮಾನವನ್ನು ಮೆರೆದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಧನ್ಯವಾದಗಳು.#ಕನ್ನಡಿಗ #HindiImposition #StopHindiImposition #ServeInMyLanguage @sumalathaA pic.twitter.com/dW4SNpHTPd

— Faizal Peraje (@faizal_peraje) September 19, 2020


ADVERTISEMENT
Tags: ಮಂಡ್ಯ ಸಂಸದೆಸುಮಲತಾ ಅಂಬರೀಶ್‌ಹಿಂದಿ ಹೇರಿಕೆ
Previous Post

ಕೃಷಿ ಮಸೂದೆ: ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವಂತೆ ಜೆಜೆಪಿ ಮೇಲೆ ಒತ್ತಡ

Next Post

ಡಿಜಿಟಲ್ ಪಾವತಿ ಅವಲಂಬನೆಯಿಂದಾಗಿ ಹಣಕಾಸು ವಂಚನೆಗಳು ಹೆಚ್ಚಾಗುತ್ತವೆ: ಅಜಿತ್ ದೋವಲ್

Related Posts

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್
Top Story

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಕೇಂದ್ರದ ಬಿಜೆಪಿ ಸರ್ಕಾರವು ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ದಕ್ಷಿಣ ಭಾರತದ ರಾಜಕೀಯ ಅಸ್ಮಿತೆಯನ್ನು ಅಳಿಸಲು ‘ಭೀಕರ ಸಂಚು’ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ...

Read moreDetails
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post
ಡಿಜಿಟಲ್ ಪಾವತಿ ಅವಲಂಬನೆಯಿಂದಾಗಿ ಹಣಕಾಸು ವಂಚನೆಗಳು ಹೆಚ್ಚಾಗುತ್ತವೆ: ಅಜಿತ್ ದೋವಲ್

ಡಿಜಿಟಲ್ ಪಾವತಿ ಅವಲಂಬನೆಯಿಂದಾಗಿ ಹಣಕಾಸು ವಂಚನೆಗಳು ಹೆಚ್ಚಾಗುತ್ತವೆ: ಅಜಿತ್ ದೋವಲ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada