ಗದಗ ಜಿಲ್ಲೆಯ ನರಗುಂದ ಪಟ್ಟಣದ ಅಧ್ಯಾಪಕ ನಗರದ ನಿವಾಸಿ ಮುಖ್ಯೋಪಾಧ್ಯಾಯರಾದ ಅಂದಾನಗೌಡ ಸಿ ಹಿರೇನಿಂಗನಗೌಡ್ರ ಇವರ ಮನೆಯ ಕೈತೋಟದಲ್ಲಿ ದಿನಾಂಕ 11.10.2020 ಸಾಯಂಕಾಲ ಪ್ಲಾಟಿಹೆಲ್ಮೇಂಥಿಸ್ ವಂಶ ಸೇರಿದ ಭೂವಾಸಿ-ಸುತ್ತಿಗೆ ತಲೆ ಚಪ್ಪಟೆ ಹುಳು (Land Planaria – Hammer Head Worm- Bipalium) ಕಾಣಿಸಿದ್ದು, ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ 6ನೇ ತರಗತಿಯಲ್ಲಿ ಓದುತ್ತಿರುವ ಧ್ರುವ ಎ. ಹಿರೇನಿಂಗನಗೌಡ್ರ ಇದನ್ನು ದಾಖಲಿಸಿದ್ದಾನೆ. ಮನೆಯ ಕೈತೋಟದಿಂದ ಹಿಂದೆಂದು ಗೊಚರಿಸಿದ ಎರಡು ಚಪ್ಪಟೆಯಾಕಾರದ ತಲೆಯ ಭಾಗದಲ್ಲಿ ಸುತ್ತಿಗೆಯಂತಹ ರಚನೆ ಹೊಂದಿದ್ದ ವಿಭಿನ್ನಾಕಾರದ ಜೀವಿಗಳು ಮನೆಯ ಕೈತೋಟದಿಂದ ವರಾಂಡದಲ್ಲಿ ತೆವಳುತ್ತಾ ಬರುವುದನ್ನು ಕಂಡ ದ್ರುವ ಆಶ್ಚರ್ಯಚಕಿತನಾಗಿ ತನ್ನ ಸಹೋದರಿ ಹಾಗೆ ಮನೆಯ ಎಲ್ಲ ಸದಸ್ಯರನ್ನು ಕರೆದು ತೋರಿಸಿದ್ದಾನೆ.
ಹ್ಯಾಮರ ಹೆಡ್ ವರ್ಮ್:
ಸುತ್ತಿಗೆ ತಲೆ ಚಪ್ಪಟೆ ಹುಳು ಪ್ಲಾಟಿಹೆಲ್ಮೇಂಥಿಸ್ ವಂಶಕ್ಕೆ ಸೇರಿದ್ದು ವೈಜ್ಞಾನಿಕವಾಗಿ ಇವುಗಳನ್ನು ಬೈಪ್ಯಾಲಿಯಂ ಎನ್ನುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಬೈ-ಎಂದರೆ ಎರಡು, ಪ್ಯಾಲಿಯಾ-ಪಿಕಾಸಿ ಆಕಾರ ಅಥವಾ ಸುತ್ತಿಗೆ ಆಕಾರ ಎಂದರ್ಥ. ತಲೆಯ ಭಾಗದಲ್ಲಿ ಚಪ್ಪಟೆಯಾಕಾರದ ಸುತ್ತಿಗೆಯನ್ನು ಹೊಲುವುದರಿಂದ ಇದನ್ನು ಸುತ್ತಿಗೆ ತಲೆಯ ಚಪ್ಪಟೆ ಹುಳು ಎನ್ನುತ್ತಾರೆ. ಇವು ಪಶ್ಚಿವಮ ಘಟ್ಟದ ಭಾಗಗಳಲ್ಲಿ ಮುಂಗಾರಮಳೆಯ ಋತುವಿನಲ್ಲಿ ಸಾಮಾನ್ಯವಾಗಿ ಗೊಚರಿಸುತ್ತವೆ. ಇವು ತೆವಾಂಶದಿಂದ ಕೂಡಿದ ಮಣ್ಣಿನಲ್ಲಿ ಸಾಮಾನ್ಯವಾಗಿ ಬದುಕುತ್ತವೆ. ಆದರೆ ಇವುಗಳ ಹಂಚಿಕೆ ಉತ್ತರ ಕರ್ನಾಟಕದ ಬಯಲು ಸಿಮೆಯ ಅಧಿಕ ಉಷ್ಣತೆಯಿಂದ ಕೂಡಿದ ಪ್ರದೇಶಗಳಲ್ಲಿರುವುದು ಗೋಚರಿಸಿರುವುದು ಇದೆ ಮೊದಲು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೀವನ ಕ್ರಮ:
ಇವುಗಳ ಪ್ರಮುಖ ಆಹಾರ ಎರೆಹುಳು ಮತ್ತು ಮೃದ್ವಂಗಿಗಳಾದ ಬಸವನಹುಳು,ಶಂಖದ ಹುಳು. ಇವು ವಿಲಕ್ಷಣ ಆಹಾರ ಪದ್ಧತಿಯನ್ನು ಹೊಂದಿದ್ದು ಗಂಟಕ ಕುಳಿ ಮೊದಲ ಭಾಗವನ್ನು ಬಾಯಿಯಿಂದ ಹೊರಗೆ ಎಸೆದು ತಮ್ಮ ಹೊಟ್ಟೆಯಿಂದ ಜೀರ್ಣಕಾರಿ ರಸವನ್ನು ತಾವು ಭಕ್ಷಿಸುವ ಬೇಟೆ ಮೇಲೆ ಸುರಿಯಿತ್ತವೆ. ನಂತರ ಇದನ್ನು ಒಳಗೆ ಎಳೆದುಕೊಂಡು ಜೀರ್ಣಿಸಿಕೊಳ್ಳುತ್ತವೆ.
ಇವು ತಮ್ಮ ನುಣುಪಾದ ದೆಹದ ಮೇಲೆ ಸಿಂಬಳದಂತ ವಿಷಯುಕ್ತ ಲೋಳೆಯನ್ನು ಸ್ರವಿಸಿ ತಮ್ಮನ್ನು ತಮ್ಮ ವೈರಿಗಳಿಂದ ರಕ್ಷಿಸಿಕೊಳ್ಳುತ್ತವೆ. ಈ ಲೋಳೆಯು ವಿಷದಿಂದ ಕೂಡಿದ್ದು ಯಾವ ಮೇಲ್ಸ್ತರದ ಪ್ರಾಣಿಗಳು ಇವುಗಳನ್ನು ಭಕ್ಷಿಸುವುದು ಕಡಿಮೆ. ಇವು ದ್ವಿಲಿಂಗಿಯಾಗಿದ್ದು ಲೈಂಗಿಕ ಮತ್ತು ಅಲೈಂಗಿಕ ವಿಧಾನದ ಮೂಲಕ ಸಂತಾನೋತ್ವತ್ತಿ ಮಾಡುವ ಸಾಮರ್ಥ್ಯ ಹೊಂದಿವೆ. ಅಕಸ್ಮಿಕವಾಗಿ ಇವು ಎರಡು ತುಂಡಾಗಿ ಕತ್ತರಿಸಿದಾಗ ಎರಡು ಪ್ರತ್ಯೇಕ ಚಪ್ಪಟೆ ಹುಳುವಾಗಿ ಬೆಳೆಯುತ್ತವೆ. (ಅಲೈಂಗಿಕ ಸಂತಾನೋತ್ಪತ್ತಿ).
ಇವು ಶುಷ್ಕ ಹುಲ್ಲುಗಾವಲಿನಂತಹ ಆವಾಸಗಳಲ್ಲಿಯು ಕೂಡಾ ಹಂಚಿಕೆಯಾಗಿದ್ದು ಇವುಗಳ ಅಧ್ಯಯನದ ಕೊರತೆಯಿಂದಾಗಿ ಇವುಗಳ ಹಂಚಿಕೆ ಮತ್ತು ಜೀವನ ಕ್ರಮಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಇರುವುದಿಲ್ಲ.
“ಮಕ್ಕಳು ಕೇವಲ ಪಠ್ಯದಲ್ಲಿನ ವಿಷಯವನ್ನು ಓದಿ ಕಲಿಯುವುದರ ಜೊತೆಗೆ ತಮ್ಮ ಮನೆಯ ಒಳಗೂ ಮತ್ತು ಕೈತೋಟದಲ್ಲಿನ ಪರಿಸರದಲ್ಲಿ ಇಂತಹ ಘಟನೆಗಳನ್ನು ಗಮನಿಸುವುದರ ಮೂಲಕ ಪ್ರಾಯೋಗಿಕವಾಗಿ ಕಲಿಯಬಹುದು. ಧ್ರುವ ಓದಿನಲ್ಲಷ್ಟೆ ಅಲ್ಲದೆ ಇಂತಹ ಪರಿಸರ ಸಂಬಂದಿತ ಘಟನಾವಳಿಗಳನ್ನು ನಿರಂತರವಾಗಿ ಗಮನಿಸುತ್ತಾ ಎಷ್ಟೋ ಸಂಗತಿಗಳನ್ನು ಕಲಿತಿದ್ದಾನೆ. ಹ್ಯಾಮರ ಹೆಡ್ ವರ್ಮ್ ನಮ್ಮ ಶುಷ್ಕ ಆವಾಸದಲ್ಲಿ ಹಂಚಿಕೆಯಾಗಿದ್ದು ಇವನಿಂದ ತಿಳಿದು ಆಶ್ಚರ್ಯವಾಯಿತು. ನಾನು ಹೆಚ್ಚಾಗಿ ಈ ಚಪ್ಪಟೆ ಹುಳುಗಳನ್ನು ಪಶ್ಚಿಮಘಟ್ಟದಲ್ಲಿ ಮುಂಗಾರಿನ ಋತುವಿನಲ್ಲಿ ಗಮನಿಸಿದ್ದೇನೆ”, ಎಂದು ಪರಿಸರ ಮತ್ತು ವನ್ಯಜೀವಿ ತಜ್ಞರಾದ ಮಂಜುನಾಥ ಎಸ್ ನಾಯಕ್ ಹೇಳಿದ್ದಾರೆ.