ಇತ್ತೀಚೆಗೆ ಸಮಾಜದಲ್ಲಿ ಕೋಮು ಕಲಗಹಳು, ವಿವಾದಗಳು ಯಾವ ಹಂತಕ್ಕೆ ಹೋಗಿದೆ ಎಂಬುದು ನಮ್ಮೆಲರಿಗೂ ತಿಳಿದಿರುವ ವಿಚಾರ. ಅದು ರಾಜಕಾರಣದ ಕಾರಣಕ್ಕೋ ಅಥವಾ ಮತ್ತಿನ್ಯಾವುದೇ ಕಾರಣಕ್ಕೆ ಇರಬಹುದು. ಇದ್ರ ಗಂಭೀರ ಪರಿಣಾಮ ಸಮಾಜದ ಶಾಂತಿಗೆ ಆಗಾಗ ಕಳಂಕ ತರುತ್ತದೆ. ಆದ್ರೆ ಇದೆಲ್ಲವನ್ನೂ ಮೀರಿ ಎಲ್ಲಾ ಧರ್ಮಗಳು ಒಂದಾದಗ – ಒಟ್ಟೊಟ್ಟಿಗೆ ಭಾವೈಕ್ಯತೆ ಮೆರೆದಾಗ ಅದೊಂದು ಅದ್ಭುತವನ್ನೇ ಸೃಷ್ಟಿ ಮಾಡುತ್ತೆದೆ. ಗದಗ ಈ ಬಾರಿಯ ಶಿವರಾತ್ರಿಗೆ ಇಂಥದ್ದೇ ಘಟನೆಗೆ ಸಾಕ್ಷಿಯಾಗಿದೆ.
ಬಂಡಾಯದ ಮಣ್ಣಿನಲ್ಲಿ ಈಗ ಭಾವೈಕ್ಯತೆಯ ದೀಪ ಬೆಳಗುತ್ತಿದೆ. ಇಲ್ಲಿ ಮುಸ್ಲಿಂ ಸಮುದಾಯ ಹಿಂದೂ ಮಠಕ್ಕೆ ರಥ ಒಂದನ್ನ ದೇಣಿಗೆಯಾಗಿ ನೀಡುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಮರೆಯೋ ಸಂದೇಶ ಸಾರಿದ್ದಾರೆ. ಹೌದು, ಗದಗದ ನರಗುಂದ ಪಟ್ಟಣದ ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ ದೇವಸ್ಥಾನ ಇಂತದ್ದೊಂದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ..ರಥದ ಭವ್ಯ ಮೆರವಣಿಗೆ ಮಾಡೋ ಮೂಲಕ ಮುಸ್ಲಿಂ ಸಮುದಾಯ ಭಾವೈಕ್ಯತೆ ಸಾರಿದೆ. ನಂತರ ಈ ರಥವನ್ನು ಶ್ರೀ ಮಠಕ್ಕೆ ಹಸ್ತಾಂತರಿಸಿದ್ದಾರೆ. ಪಟ್ಟಣದ ಹಜರತ್ ಮೆಹಬೂಬ ಸುಭಾನಿ ದರ್ಗಾದ ಖಾದಿಮ್, ಬಾಬುಸಾಹೇಬ ಇಮಾಮಸಾಹೇಬ ಜಮಾದಾರಿಂದ ಸುಂದರವಾದ ರಥ ಹಿಂದೂ ಮಠಕ್ಕೆ ಕೊಡುಗೆ ನೀಡಿದ್ದಾರೆ..
ಹಿಜಾಬ್ ಮತ್ತು ಕೇಸರಿ ಶಾಲುವಿನ ವಿವಾದ ವಿಶ್ವ ಮಟ್ಟದಲ್ಲಿ ಚರ್ಚೆಯಾಗಿ ರಾಜ್ಯಕ್ಕೆ ಮುಜುಗರವನ್ನುಂಟು ಮಾಡಿತ್ತು. ಆದ್ರೆ ಅದಕ್ಕಿಂತ ಹೆಚ್ಚು ಸುದ್ದಿಯಾಗಬೇಕಿರೋದು ಇಂಥಹ ಭಾವೈಕ್ಯತೆ ಸಾರುವ ಆಚರಣೆಗಳು. ಸದ್ಯ ದೇಶದಾದ್ಯಂತ ಉಲ್ಬಣಿಸಿರುವ ಸೂಕ್ಷ್ಮ ಪರಿಸ್ಥಿತಿಯ ಸಂದರ್ಭದಲ್ಲಿ ಇಂಥಹ ಆರಣೆಗಳು ಸಮಾಜವನ್ನ ಸುಧಾರಿಸುವ ನಿದರ್ಶನಗಳಾಗಿ ಉಳಿಯುತ್ತವೆ.