ಶ್ರೀನಗರ (Srinagar): ಸಂವಿಧಾನದ [Constitution] 370ನೇ [article 370] ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಜಮ್ಮು–ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದಾರೆ.
ʻನಿಮ್ಮೆಲ್ಲರ ಹೃದಯ ಗೆಲ್ಲುವುದಕ್ಕಾಗಿ ನಾನು ಇಲ್ಲಿಗೆ ಬಂದಿರುವೆʼಎಂದು ‘ವಿಕಸಿತ ಭಾರತ, ವಿಕಸಿತ ಜಮ್ಮು–ಕಾಶ್ಮೀರ’ (viksit bharat viksit jammu kashmir) ಕಾರ್ಯಕ್ರಮ ಅಂಗವಾಗಿ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು,.
‘ಹೃದಯ ಗೆಲ್ಲುವುದು ಮಾತ್ರ ನನ್ನ ಈ ಭೇಟಿಯ ಉದ್ದೇಶವಲ್ಲ; ಕಾಶ್ಮೀರ ಜನರ ಆಶೋತ್ತರಗಳು ಹಾಗೂ ಕನಸುಗಳನ್ನು ತಿಳಿದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆʼಎಂದು ಮೋದಿ ಹೇಳಿದರು.
2014ರ ನಂತರ ಜಮ್ಮು–ಕಾಶ್ಮೀರಕ್ಕೆ ಬಂದಾಗಲೆಲ್ಲ, ನಾನು ನಿಮ್ಮ ಹೃದಯ ಗೆಲ್ಲುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುವೆ ಎಂದು ಹೇಳುತ್ತಿದ್ದೆ. ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ನಾನು ನಿಮ್ಮ ಹೃದಯ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದೇನೆ ಎಂಬುದು ಮನದಟ್ಟಾಗುತ್ತಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಮ್ಮು–ಕಾಶ್ಮೀರ ಭಾರಿ ಅಭಿವೃದ್ಧಿ ಕಾಣಲಿದೆ. ಜಮ್ಮು–ಕಾಶ್ಮೀರದ ಯಶಸ್ಸು, ಶಾಂತಿ ಮತ್ತು ಅಭಿವೃದ್ಧಿಯನ್ನು ಯಾರೂ ತಡೆಯಲಾರರು ಎಂದು ಮೋದಿ ಹೇಳಿದರು.
ಇದೇ ಸಂದರ್ಭದಲ್ಲಿ ಮೋದಿ ಅವರು ನೂತನವಾಗಿ ನೇಮಕಗೊಂಡಿರುವ ಸಾವಿರದಷ್ಟು ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.
ಮಹಿಳಾ ಸಾಧಕಿಯರು, ರೈತರು, ಉದ್ಯಮಶೀಲರು ಹಾಗೂ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
#jammukashmir #Srinagar #NarendraModi #article370 #viksitbharatviksitjammukashmir