ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್-19 ಗೆ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಎಂದೇ ಗುರುತಿಸ್ಪಡುವ ಅಮೇರಿಕ ಬರೋಬ್ಬರಿ ಒಂದು ಲಕ್ಷ ನಾಗರಿಕರನ್ನು ಕಳೆದುಕೊಂಡಿದೆ. ಅಮೇರಿಕಾದಲ್ಲಿ 16 ಲಕ್ಷಕ್ಕೂ ಅಧಿಕ ಕರೋನಾ ಪಾಸಿಟಿವ್ ಪ್ರಕರಣಗಳಿವೆ. ಸುಮಾರು 4.5 ಲಕ್ಷ ಜನರು ಕೋರೋನ ದಿಂದ ಗುಣಮುಖರೂ ಅಗಿದ್ದಾರೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿರುವಂತೆಯೇ ಅಮೇರಿಕಾದ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಟ್ಟೂ ನೆತ್ತಿಗೇರುತ್ತಿದೆ. ಈ ಹಿಂದೆ ಕರೋನಾ ತವರು ದೇಶ ಚೀನಾದ ವಿರುದ್ದ ಬಿಲಿಯಗಟ್ಟಲೆ ಡಾಲರ್ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದ ಟ್ರಂಪ್ ಚೀನಾದ ವಿಜ್ಞಾನಿಗಳೇ ಇದನ್ನು ಸೃಷ್ಟಿಸಿದ್ದಾರೆ ಎಂದೂ ಅರೋಪಿಸಿದ್ದರು. ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ತಮ್ಮ ಮಾತಿಗೆ ಮನ್ನಣೆ ಕಡಿಮೆಯಾದಾಗ ಅದಕ್ಕೆ ನೀಡುವ ಅನುದಾನವನ್ನೇ ಸ್ಥಗಿತಗೊಳಿಸುವುದಾಗಿಯೂ ಬೆದರಿಸಿದ್ದರು. ಅಷ್ಟೇ ಅಲ್ಲ ಒಕ್ಕೂಟದಿಂದಲೇ ಹೊರಬರುವುದಾಗಿಯೂ ಹೇಳಿದ್ದರು.
ಅಮೇರಿಕಾದಂತಹ ದೇಶದ ಅದ್ಯಕ್ಷರಾಗಿರುವ ಟ್ರಂಪ್ ತಮ್ಮ ದುಡುಕು ಮಾತಿಗೆ, ಅಗ್ಗದ ಹಾಸ್ಯ, ಗಂಭೀರವಲ್ಲದ ಮಾತಿಗೆ ಹೆಸರುವಾಸಿ ಆಗಿದ್ದಾರೆ. ಇದು ಅವರ ವಿರೋಧಿಗಳಿಗೆ ಟ್ರೋಲ್ ಮಾಡಲು ಉತ್ತಮ ಸರಕನ್ನು ಒದಗಿಸಿದರೂ ಟ್ರಂಪ್ ಅದ್ಯಕ್ಷರಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯನ್ನೂ ತೆಗೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಆಪ್ತ ಸಿಬ್ಬಂದಿಗಳು ಮತ್ತು ಸಹೋದ್ಯೋಗಿಗಳು ಇರಬಹುದು. ಕಳೆದ ವಾರ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಅಸೆಂಬ್ಲಿ ಸಭೆಯಲ್ಲಿ ಅದ್ಯಕ್ಷ ಟ್ರಂಪ್ ಅವರಿಗೆ ಹಿನ್ನಡೆಯಾಗಿ ಅಮೇರಿಕಾದ ಪ್ರತಿಸ್ಪರ್ಧಿ ಚೀನಾ ಮತ್ತು ಯೂರೋಪಿಯನ್ ಯೂನಿಯನ್ ಕೈ ಮೇಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾಧಿವೇಷನ ಮುಗಿದ ಕೂಡಲೇ ಟ್ರಂಪ್ ತಮ್ಮ ಎಂದಿನ ಲಘು ಮಾತಿನಿಂದ ಚೀನಾದ ಅಧಿಕೃತ ವಕ್ತಾರರನ್ನು ಮೂರ್ಖತನದಿಂದ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು, ಇದು ಅವರ ಮೇಲಿನಿಂದ ಬರುತ್ತದೆ ಹೇಳಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನೂ ಪರೋಕ್ಷವಾಗಿ ಟೀಕಿಸಿದ್ದಾರೆ. ಚೀನಾವು ತಪ್ಪು ಮಾಹಿತಿ ಮತ್ತು ಪ್ರಚಾರದ ಮೂಲಕ ದಾಳಿಯನ್ನು ಮಾಡುತ್ತಿದೆ ಎಂದೂ ಅರೋಪಿಸಿದರು.
ವಿಶ್ವ ಆರೋಗ್ಯ ಸಮ್ಮೇಳನದ ಮೊದಲ ದಿನವಾದ ಮೇ 18ರಂದು, ಅಮೇರಿಕಾದ ಆರೋಗ್ಯ ಕಾರ್ಯದರ್ಶಿ ಮೊದಲು ಆರೋಪ ಮಾಡಿ ಸದಸ್ಯರು ಉತ್ತಮ ನಂಬಿಕೆಯಿಂದ ವರ್ತಿಸದಿದ್ದಾಗ ಮಾಹಿತಿ ಹಂಚಿಕೆ ಮತ್ತು ಪಾರದರ್ಶಕತೆಯ ಪ್ರಮುಖ ಉದ್ದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಫಲವಾಗಿದೆ ಎಂದರು. ಕರೋನಾ ಸಾಂಕ್ರಾಮಿಕ ರೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿಕ್ರಿಯೆಯ ಪ್ರತಿಯೊಂದು ಅಂಶಗಳ ಸ್ವತಂತ್ರ ವಿಮರ್ಶೆ ಮಾಡಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಸಂಸ್ಥೆ ಕೆಲಸ ಮಾಡಬೇಕು ಎಂದೂ ಹೇಳಿದರು.
ಆದರೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅಮೇರಿಕಾದ ಪ್ರಚೋದನಾಕಾರಿ ಹೇಳಿಕೆಗೆ ಪ್ರತಿಕ್ರಿಯಿಸದಿರುವ ಮೂಲಕ ತಣ್ಣಗಿನ ಪ್ರತಿಕ್ರಿಯೆ ನೀಡಿದರು. ಅವರು ಮಾತನಾಡಿ ಈ ಗಂಭೀರ ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತದ ಜನರು ಒಬ್ಬರಿಗೊಬ್ಬರು ಹೇಗೆ ಪ್ರೀತಿ ಮತ್ತು ಸಹಾನುಭೂತಿಯಿಂದ ಪರಸ್ಪರ ನೆರವಾಗಿದ್ದಾರೆ ಮತ್ತು ಒಂದಾಗಿ ಸೋಂಕಿನ ವಿರುದ್ದ ಹೋರಾಡುತಿದ್ದಾರೆ ಎಂಬುದನ್ನು ಹೇಳಿದರು. ಇವರ ಮಾತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅಧಿವೇಶನಕ್ಕೆ ಹಾಜರಾಗಿದ್ದ ಬಹುತೇಕ ಸದಸ್ಯ ರಾಷ್ಟ್ರಗಳ ಸಹಾನುಭೂತಿ ಗಳಿಸಿತ್ತು ಮತ್ತು ಒಂದು ಸದಸ್ಯ-ರಾಷ್ಟ್ರವೂ ಚೀನಾದ ವಿರುದ್ಧದ ಸಣ್ಣ ಹೇಳಿಕೆಯನ್ನೂ ನೀಡಲಿಲ್ಲ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೋವಿಡ್ ನಿರೋಧಿ ಲಸಿಕೆ ತಯಾರಿ ಮತ್ತು ಅದು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿರಬೇಕಾದ ಅಗತ್ಯತೆಯನ್ನು ಸಾರ್ವಜನಿಕ ಒಳಿತನ್ನಾಗಿ ಮಾಡಬೇಕೆಂಬ ಯುರೋಪಿಯನ್ ಒಕ್ಕೂಟದ ಪ್ರತಿಪಾದನೆಗೆ ಅಧ್ಯಕ್ಷ ಜಿನ್ಪಿಂಗ್ ದನಿಗೂಡಿಸಿ ಅಧಿವೇಶನದ ಬೆಂಬಲ ಗಳಿಸಿದರು. ಅಮೇರಿಕಾವೇ ಮೊದಲು ಎಂಬ ಟ್ರಂಪ್ ನಂಬಿಕೆಯನ್ನು ಮತ್ತು ಈ ಸಾಂಕ್ರಾಮಿಕ ರೋಗದಲ್ಲೂ ಸಹ ಕಾರ್ಪೊರೇಟ್ ಫಾರ್ಮಾ ಹಿತಾಸಕ್ತಿಗಳಿಗೆ ಕಾಯುವ ಟ್ರಂಪ್ ಅವರ ನಿಲುವಿಗೆ ಇದು ಚಾಟಿಯೇಟು ನೀಡದಂತಿತ್ತು. ಅನಂತರ ಅವರು ಆರೋಗ್ಯ ಸಂಸ್ಥೆಯ ಅದ್ಯಕ್ಷ ಟೆಡ್ರೊಸ್ ಅನ್ನು ಶ್ಲಾಘಿಸುತ್ತಾ, “ಅವರ ನಾಯಕತ್ವದಲ್ಲಿ, ಸಂಸ್ಥೆ ಪ್ರಮುಖ ಕೊಡುಗೆ ನೀಡಿದೆ ಎಂದು ಕ್ಸಿ ಹೇಳಿದರು, ಕೋವಿಡ್-19ನ್ನು ನಿಯಂತ್ರಣಕ್ಕೆ ತಂದ ನಂತರ ಜಾಗತಿಕ ಪ್ರತಿಕ್ರಿಯೆಯ ಸಮಗ್ರ ವಿಮರ್ಶೆಯನ್ನು ಚೀನಾ ಬೆಂಬಲಿಸುತ್ತದೆ ಎಂದೂ ಅವರು ಹೇಳಿದರು. ಅಂದರೆ ಅಮೇರಿಕಾದಲ್ಲಿ ಮುಂದಿನ ನವೆಂಬರ್ ಅಧ್ಯಕ್ಷೀಯ ಚುನಾವಣೆಯ ನಂತರ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಟೆಡ್ರೊಸ್ ಅಮೇರಿಕಾದ ಆರೋಪಗಳಿಗೆ ನೇರ ಪ್ರತಿಕ್ರಿಯೆಯಾಗಿ, ವಿಶ್ವ ಅರೋಗ್ಯ ಸಂಸ್ಥೆ ಮೊದಲೇ ಕೋವಿಡ್-19 ವಿರುದ್ದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತ್ತು ಮತ್ತು ಜನವರಿ 30 ರಂದೇ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿತು ಎಂದಿದ್ದರು. ಆಗ ಕೇವಲ ಚೀನಾದ ಒಳಗೆ ನೂರು ಕೋವಿಡ್ ಪ್ರಕರಣಗಳು ವರದಿ ಅಗಿದ್ದು ಯಾವುದೇ ಹೊರ ದೇಶದಲ್ಲಿ ಇದು ಪತ್ತೆ ಆಗಿರಲಿಲ್ಲ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಅಸ್ತಿತ್ವದಲ್ಲಿರುವ ಸ್ವತಂತ್ರ ಹೊಣೆಗಾರಿಕೆ ಕರ್ಯವಿಧಾನಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ”. ಅದೇನೇ ಇದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ಸ್ವತಂತ್ರ ಮೌಲ್ಯಮಾಪನವನ್ನು ಮಾಡಬಹುದು ಎಂದೂ ಅವರು ಹೇಳಿದರು.
ಯೂರೋಪಿಯನ್ ಯೂನಿಯನ್ ಮತ್ತು ಫ್ರಾನ್ಸ್, ಕೋವಿಡ್-19 ಉಪಕರಣಗಳನ್ನು, ಜಾಗತಿಕ ವೈಜ್ಞಾನಿಕ ಮತ್ತು ಆರ್ಥಿಕ ಸಂಪನ್ಮೂಲಗಳ ಸಂಗ್ರಹಣೆಯನ್ನು ರೋಗವನ್ನು ಎದುರಿಸಲು ಅಗತ್ಯವಿರುವ ಎಲ್ಲವನ್ನೂ ಒಂದೆಡೆ ಸೇರಿಸುವುದಕ್ಕೆ (ಪೂಲಿಂಗ್) ಮತ್ತು ಮಾಹಿತಿ ಹಂಚಿಕೆಗೆ ಬೆಂಬಲಿಸಿದರೆ ಅಮೇರಿಕಾ ವಿರೋಧ ವ್ಯಕ್ತಪಡಿಸಿತು. ಆದರೆ ಸರ್ವಾನುಮತದ ನಿರ್ಣಯದಂತೆ ಭಾರತವು ಅದನ್ನು ಅನುಮೋದಿಸಿತು.
ಈ ಎಲ್ಲದರಲ್ಲೂ, ಭಾರತವು ತಟಸ್ಥವಾಗಿದ್ದು ವಿವಾದಾತ್ಮಕ ವಿಷಯಗಳ ಬಗ್ಗೆ ನಿಯೋಜಿಸದ, ನಿಲುವನ್ನು ತೆಗೆದುಕೊಂಡಿತು, ಬಹುಶಃ ವಿಶ್ವ ಅರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ . ನಮ್ಮ ಆರೋಗ್ಯ ಸಚಿವರ ಹೇಳಿಕೆಯು, ಪೂಲಿಂಗ್ ಅನ್ನು ಅನುಮೋದಿಸುವುದನ್ನು ಹೊರತುಪಡಿಸಿ, ಭಾರತವು 1950 ಮತ್ತು 1980 ರ ದಶಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತ ವಹಿಸಿದ್ದ ಪರಿಣಾಮಕಾರಿ ಪಾತ್ರವನ್ನು ಪ್ರತಿಫಲಿಸಲಿಲ್ಲ.
ಭಾರತದ ಅಧ್ಯಕ್ಷತೆಯಲ್ಲಿ ಜಗತ್ತು ಎದುರಿಸಬೇಕಾದ ನಿರ್ಣಾಯಕ ವಿಷಯಕ್ಕಾಗಿ ನಮ್ಮ ಪ್ರಕಾರ ರಾಷ್ಟ್ರ ಅಥವಾ ಅಂತರ್ರಾಷ್ಟ್ರೀಯ ಸಮುದಾಯವನ್ನು ಸಿದ್ಧಪಡಿಸಲಿಲ್ಲ. “ಮುಕ್ತ ನಾವೀನ್ಯತೆ” ಮತ್ತು ಎಲ್ಲರಿಗೂ ಸಮಾನ ಪ್ರವೇಶದ ಮೇಲೆ ಅಭಿವೃದ್ಧಿಪಡಿಸಬಹುದಾದ ಯಾವುದೇ ಲಸಿಕೆಗಳ ತಯಾರಿಕೆ ಮತ್ತು ವಿತರಣೆಯನ್ನು ಆಧಾರವಾಗಿರಿಸಿಕೊಳ್ಳಬೇಕೆಂದು. ಯೂರೋಪಿಯನ್ ಯೂನಿಯನ್, ಚೀನಾ, ವಿಶ್ವ ಆರೋಗ್ಯ ಸಂಸ್ತೆಯ ಅದ್ಯಕ್ಷರು ಹೇಳಿದ್ದಾರೆ. ವಿಶ್ವ ಭೌಧ್ದಿಕ ಅಸ್ತಿ ಸಂಸ್ತೆಯು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತಿದ್ದು ಇದರಲ್ಲಿ ಮುಕ್ತ ನಾವೀನ್ಯತೆಯನ್ನು ಅನುಸರಿಸುವುದು ತೊಡಕಿನದೇ ಆಗಿದೆ. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ.