ಕರೋನಾ ಸೋಂಕು ರಾಜ್ಯದಲ್ಲಿ ಇಂದು ನಾಲ್ವರನ್ನು ಬಳಿ ಪಡೆದುಕೊಂಡಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೋನಾ ಸೋಂಕಿಗೆ ಚಿಕಿತ್ಸೆಗೆ ದಾಖಲಾಗಿದ್ದವರಲ್ಲಿ 4 ಮಂದಿ ಇಂದು ಅಸುನೀಗಿದ್ದಾರೆ. ಮೃತರ ಆರೋಗ್ಯ ಗಂಭೀರವಾಗಿ ಹದಗೆಟ್ಟಿರುವುದರಿಂದ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು.
ಜೂನ್ 7 ರಂದು ಬೌರಿಂಗ್ ಆಸ್ಪತ್ರೆಯಿಂದ 35 ವರ್ಷದ ಪುರುಷ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು. 52 ವರ್ಷದ ಪುರುಷ ರೋಗಿಯನ್ನೂ ಬೌರಿಂಗ್ ಆಸ್ಪತ್ರೆಯಿಂದ ಇಂದು (ಜೂನ್ 11) ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು, ಅವರೂ ಇಂದು ನಿಧನರಾಗಿದ್ದಾರೆ. ಜೂನ್ 8 ರಂದು ವಿಕ್ರಮ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದ್ದ 69 ವರ್ಷದ ಪುರುಷ ರೋಗಿ ಕರೋನಾದಿಂದಾಗಿ ಇಂದು ಸಾವನ್ನಪ್ಪಿದ್ದವರಲ್ಲಿ ಒಬ್ಬರು. ಅದಲ್ಲದೆ ಇಂದು ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದ 45 ವರ್ಷದ ಮಹಿಳೆ ರೋಗಿಯೂ ಇಂದು ಮೃತಪಟ್ಟಿದ್ದಾರೆ.

ಮೃತಪಟ್ಟ ನಾಲ್ವರೂ ಕಳೆದ ಅನೇಕ ದಿನಗಳಿಂದ ಸೂಕ್ಷ್ಮ ಆರೋಗ್ಯ ಪರಿಸ್ಥಿತಿಯಲ್ಲಿದ್ದುದರಿಂದ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.