ಈ ಹಿಂದೆ ವಲಸೆ ಕಾರ್ಮಿಕರ ಕುರಿತು ತನಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲವೆಂದು ಕೈ ಚೆಲ್ಲಿದ್ದ ಸುಪ್ರೀಂ ಕೋರ್ಟ್ ಇದೀಗ ವಲಸೆ ಕಾರ್ಮಿಕರಿಗೆ ಉಪಯೋಗಕಾರಿ ನಿರ್ದೇಶನವೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಆಡಳಿತಗಳಿಗೆ ನೀಡಿದೆ.
Also Read: ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರನ್ನ ತಡೆದು ನಿಲ್ಲಿಸಲು ʼನ್ಯಾಯಾಲಯʼಕ್ಕೂ ಅಸಾಧ್ಯ!
ವಲಸೆ ಕಾರ್ಮಿಕರ ಸಮಸ್ಯೆಗಳು ಉದ್ಭವಿಸಲು ತೊಡಗಿನಿಂದ ಮೌನ ತಳೆದಿದ್ದ ಸುಪ್ರೀಂ ಮೇ 26 ರಂದು, ಲಾಕ್‌ಡೌನ್ ಹಿನ್ನಲೆಯಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ತಾಯ್ನಾಡಿಗೆ ಮರಳಲು ಬಯಸಿದರೆ ಪ್ರಯಾಣದ ವೇಳೆಯಲ್ಲಿ ಆಹಾರ, ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಗಳಿಗೆ ನಿರ್ದೇಶಿಸಿದೆ.
ಅಷ್ಟೇ ಅಲ್ಲದೆ ಯಾತ್ರಾ ವೆಚ್ಚವನ್ನೂ ಸರ್ಕಾರ ಭರಿಸಲು ಸೂಚಿಸಿರುವ ನ್ಯಾಯಾಲಯ ಕಾರ್ಮಿಕರಿಂದ ರೈಲು ಮತ್ತು ಬಸ್ ಪ್ರಯಾಣಕ್ಕೆ ಟಿಕೇಟ್ ಹಣವನ್ನು ಪಡೆಯದಂತೆ ನಿರ್ದೇಶಿಸಿದೆ.
ನಡೆದುಕೊಂಡು ಹೋಗುತ್ತಿರುವ ಕಾರ್ಮಿಕರು ಕಂಡರೆ ಅವರಿಗೆ ವಾಹನಗಳನ್ನು ಸರ್ಕಾರ ಆಯೋಜಿಸಬೇಕೆಂದೂ, ವಲಸೆ ಕಾರ್ಮಿಕರ ನೋಂದಣಿಯನ್ನು ರಾಜ್ಯಗಳು ಮಾಡಬೇಕೆಂದು ನಿರ್ದೇಶನದಲ್ಲಿ ಹೇಳಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಕಷ್ಟದಲ್ಲಿರುವ ವಲಸೆ ಕಾರ್ಮಿಕರ ಕುರಿತು ನ್ಯಾಯಾಲಯಕ್ಕೆ ಕಾಳಜಿ ಇದೆಯೆಂದು ಹೇಳಿದೆ. ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಆರ್. ಷಾ ಅವರು, ವಲಸೆ ಕಾರ್ಮಿಕರ ನೋಂದಣಿಯನ್ನು ರಾಜ್ಯಗಳು ನೋಡಿಕೊಳ್ಳಬೇಕು ಹಾಗೂ ರೈಲು ಅಥವಾ ಬಸ್ಸಿನ ವ್ಯವಸ್ಥೆಯನ್ನು ಶೀಘ್ರವೇ ಮಾಡಬೇಕೆಂದು ನಿರ್ದೇಶಿಸಿದರು.
Also Read: ಖಾಸಗಿ ಆಸ್ಪತ್ರೆಗಳ ದರ ವಸೂಲಾತಿಗೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ʼಸುಪ್ರೀಂʼ ಸೂಚನೆ