ಗೃಹ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 5 ತಿಂಗಳಲ್ಲಿಯೇ, ವರ್ಗಾವಣೆಗೊಂಡಿರುವ ಮಹಿಳಾ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಪ್ರತಿಧ್ವನಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಾವು ಹೋದ ಇಲಾಖೆಯಲ್ಲಿ ನಡೆದಂತಹ ಅವ್ಯವಹಾರಗಳನ್ನು ಬಯಲಿಗೆ ಎಳೆಯುವುದರ ಹಿಂದೆ ಪ್ರಚಾರ ಪಡೆಯುವ ಹಪಾಹಪಿಯಿದೆ ಎಂಬ ಅಪವಾದಕ್ಕೆ ದಿಟ್ಟ ಉತ್ತರ ನೀಡಿದ್ದಾರೆ.
“ನಾನು ಇದುವರೆಗೂ ರಾಜಕೀಯ ಪ್ರೇರಿತವಾಗಿ ಹಾಗೂ ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ, ಕೆಲವೊಂದು ಅಧಿಕಾರಿಗಳು ಗಿಮಿಕ್ ಮಾಡಿ ಪ್ರಚಾರ ತೆಗೆದುಕೊಳ್ಳುವವರು ನಮ್ಮಲ್ಲಿ ಇದ್ದಾರೆ. ಸಾರ್ವಜನಿಕ ಸ್ಥಳ ಸಮಾರಂಭಗಳಲ್ಲಿ ಪೋಟೋ ಫೋಸ್ ಕೊಟ್ಟು ಪ್ರಚಾರ ತೆಗೆದುಕೊಳ್ಳುವುದು ಸುಲಭ, ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ,” ಎಂದು ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಮಾಜದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಉನ್ನತ ಅಧಿಕಾರಿಗಳು ಕ್ರಮತೆಗೆದುಕೊಳ್ಳಬೇಕು. ಆದರೆ ಕೆಲವೊಂದು ಅಧಿಕಾರಿಗಳು ತಮಗ್ಯಾಕೆ ಬೇಕೆಂದು ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ಅಕ್ರಮಗಳನ್ನು ತಡೆಯಬೇಕಾದ ಅಧಿಕಾರಿಗಳು ತಡೆಯದೆ ಇದ್ದರೂ ಅವರ ಮೇಲೇನೂ ಕ್ರಮವಾಗುವುದಿಲ್ಲ ಹಾಗಾಗಿ ನಮಗೆ ಏಕೆ ಬೇಕು ಎಂದು ʼಶಾಂತಿಯುತವಾಗಿʼ ಕಾರ್ಯನಿರ್ವಹಿಸುತ್ತಾರೆಂದು, ಪ್ರತಿಧ್ವನಿ ನಡೆಸಿದ ಸಂದರ್ಶನದ ವೇಳೇ ಐಪಿಎಸ್ ಅಧಿಕಾರಿ ಡಿ ರೂಪಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವರ್ಗಾವಣೆ ಕುರಿತು ಮಾತನಾಡಿದ ಅವರು ಅಧಿಕಾರವಧಿಯಲ್ಲಿ ಪದೇ ಪದೇ ವರ್ಗಾವಣೆಗೊಂಡಾಗ ಬೇಸರ ಉಂಟಾಗುವುದು ಸಹಜ. ಯಾಕೆಂದರೆ ಕೈಗೆತ್ತಿಕೊಂಡ ಪ್ರತೀ ಕೆಲಸವು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯದ ಜೊತೆಗೆ ಹಿಂದಿನ ಅವಧಿಯಲ್ಲಿ ಮತ್ತು ಈಗಿನ ವರ್ಗಾವಣೆ ಬಗ್ಗೆ ಕೋರ್ಟ್ನಲ್ಲಿ ಪ್ರಶ್ನಿಸಿಲ್ಲ ಸರ್ಕಾರ ಕೊಟ್ಟ ಎಲ್ಲಾ ಹುದ್ದೆಗಳನ್ನು ಗೌರವದಿಂದ ಸ್ವೀಕರಿಸಿದ್ದೇನೆ. ಯಾವ ಹುದ್ದೆಯನ್ನು ಮೇಲು ಕೀಳು ಎಂಬ ಭಾವನೆಯಿಂದ ನೋಡಿಲ್ಲ. ನನಗೆ ಸಿಕ್ಕಿರುವ ಹುದ್ದೆಗಳ ಬಗ್ಗೆ ನನಗೆ ಸಂತಸವಿದೆ, ಎಂದಿದ್ದಾರೆ.
“ನಮ್ಮ ಜವಾಬ್ದಾರಿ ಆಕ್ರಮಗಳನ್ನು ತಡೆಯುವುದು, ಸಾರ್ವಜನಿಕರೊಂದಿಗೆ ಪಾರದಶರ್ಕತೆಯಿಂದ ವರ್ತಿಸುವುದು ಮತ್ತು ಸಾರ್ವಜನಿಕರ ಹಣ ದುರುಪಯೋಗ ಆಗದಂತೆ ನೋಡಿಕೊಳ್ಳ ಬೇಕು ಅದು ನಮ್ಮ ಜವಾಬ್ದಾರಿ ಕೂಡ. ಆದರೆ, ಕೆಲವು ಅಧಿಕಾರಿಗಳು ಇಂತಹ ಕಾರ್ಯಗಳನ್ನು ಮಾಡುವುದು ಬಿಟ್ಟು ಪ್ರಚಾರಕ್ಕಾಗಿ ಕೆಲಸ ಮಾಡುತ್ತಾರೆ,” ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿ ಐಪಿಎಸ್ ಅಧಿಕಾರಿ ನಿಂಬಾಳ್ಕರ್ ಮೇಲೆ ಕ್ರಮಕೈಗೊಳ್ಳುವಂತೆ ಧೋಷಾರೋಪಣೆ ಪಟ್ಟಿಸಲ್ಲಿಸಿದೆ. ಆದರೆ, ಈ ಬಗ್ಗೆ ಕ್ರಮಕೈಗೊಂಡಿಲ್ಲ. ಇದೀಗ ನನ್ನನ್ನು ಮತ್ತು ಅವರನ್ನು ಒಂದೇ ವೇಳೆ ವರ್ಗಾವಣೆ ಮಾಡಲಾಗಿದೆ. ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಿದಂತಿದೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಬೆಂಗಳೂರು ಸೇಫ್ ಸಿಟಿ ಹಗರಣಕ್ಕೆ ಸಂಬಂಧಿಸಿದ ಫೈಲ್ ನನ್ನ ಕೈ ಸೇರಿತ್ತು. ಈ ಸಂಬಂಧ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ ಮತ್ತು ಇತರೆ ಸಂಸ್ಥೆ ಕೊಟ್ಟ ದೂರನ್ನು ಗಮನಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ಕೆಲವು ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದೇನೆ. ಮುಂದೆ ಸರ್ಕಾರ ಕ್ರಮಕೈಗೊಳ್ಳ ಬೇಕು ಎಂದಿದ್ದಾರೆ.
ಇದೀಗ ರಾಜ್ಯ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಕರಕುಶಲ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ನಿರ್ವಹಿಸಲಾಗುವುದು. ಕರಕುಶಲಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕಾವೇರಿ ಬ್ತ್ಯಾಂಡ್ ಜನಜನಿತ ಶ್ರೀಗಂಧ, ಬೀಟೆ, ಶಿವಾನಿವುಡ್ ಗಳಲ್ಲಿ ಕಲಾಕೃತಿಗಳನ್ನು ಮಾಡಲಾಗುತ್ತದೆ. ಸುಮಾರು ವರ್ಷಗಳಿಂದ ಕಲ್ಲಿನಿಂದ ಕಲಾಕೃತಿಗಳನ್ನು ಕೆತ್ತನೆ ಮಾಡುವುದನ್ನು ಕೈಬಿಡಲಾಗಿತ್ತು. ಈಗ ಮತ್ತೆ ಆರಂಭ ಮಾಡಲಾಗುವುದು. ಹಾಗು ಪಾರಂಪರಿಕ ಆಭರಣಗಳನ್ನು ತಯಾರಿಕೆ, ಕರಕುಶಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಳಿಗೆಗಳು ತೆರೆಯುವ ಯೋಚನೆ ಇದೆ. ಈ ಸಂಬಂಧ ತಿರುಪತಿ ಚೆನ್ನೈನಲ್ಲಿ ತರೆಯುವ ಯೋಚನೆ ಇದೆ. ಕುಶಲಕರ್ಮಿಗಳಿಗೆ ಮತ್ತು ಅವರ ಮಕ್ಕಳಿಗೆ ಪೋತ್ಸಾಹಿಸುವ ದೃಷ್ಟಿಯಿಂದ ಕಾರ್ಯಾಗಾರ ನಡೆಸಲಾಗುವುದು ಎಂದಿದ್ದಾರೆ.