ಕಳೆದ ವಾರ ಲೆಬನಾನ್‌ನ ಬೈರೂತ್ ನಗರದಲ್ಲಿ ನಡೆದ ಭಾರೀ ಸ್ಪೋಟದ ಹೊಣೆ ಹೊತ್ತು ಸರ್ಕಾರ ರಾಜಿನಾಮೆ ನೀಡಿದೆ. ಬೈರೂತ್‌ನಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 160 ನಾಗರಿಕರು ಮೃತಪಟ್ಟಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ, ಸರ್ಕಾರದ ಬೇಜವಾಬ್ದಾರಿಯಿಂದಲೇ ಘಟನೆ ಸಂಭವಿಸಿದೆಯೆಂದು ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಭಟನೆಯ ಕಾವು ತೀವ್ರವಾಗುತ್ತಿದ್ದಂತೆ, ಭದ್ರತಾ ಪಡೆಯ ಸಿಬ್ಬಂಧಿಗಳು ಪ್ರತಿಭಟನಾಕಾರರ ಮೇಲೆ ಆಶ್ರುವಾಯು ಸಿಡಿಸಿದ್ದಾರೆ. ಇದಾದ ಬೆನ್ನಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ, ಆರೋಗ್ಯ ಸಚಿವ ಹಮದ್ ಹಸನ್, ಇಡೀ ಸರ್ಕಾರ ಸ್ಪೋಟದ ಹೊಣೆಹೊತ್ತು ರಾಜಿನಾಮೆ ನೀಡಿದೆ ಎಂದಿದ್ದಾರೆ.
ಅಧಿಕೃತವಾಗಿ ಎಲ್ಲಾ ಸಚಿವರ ರಾಜಿನಾಮೆ ನೀಡಲು ಪ್ರಧಾನಮಂತ್ರಿ ಹಸನ್ ದಿಯಾಬ್, ಅಧ್ಯಕ್ಷೀಯ ಭವನಕ್ಕೆ ತೆರಳಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಲೆಬನಾನಿನ ಬೈರೂತ್‌ನಲ್ಲಿ ಆಗಸ್ಟ್ ನಾಲ್ಕರಂದು ಸಂಗ್ರಾಹಕದಲ್ಲಿದ್ದ 2750 ಟನ್ ಅಮೋನಿಯಂ ನೈಟ್ರೇಟ್ ಸಿಡಿದಿತ್ತು. ಸ್ಪೋಟದ ತೀವೃತೆಗೆ 160 ಮಂದಿ ಬಲಿಯಾಗಿದ್ದು, 6,000 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅನೀರೀಕ್ಷಿತ ಸ್ಪೋಟಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ವಸತಿರಹಿತರಾಗಿದ್ದಾರೆ.
2013 ರಿಂದ ಈ ಸ್ಪೋಟಕ ರಾಸಾಯನಿಕವನ್ನು ಬೈರೂತ್ (Beirut) ನಗರದಲ್ಲಿ ಸಂಗ್ರಹಿಸಡಲಾಗಿದ್ದು, ಸರ್ಕಾರದ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿಯಿಂದಲೇ ಸ್ಪೋಟ ಸಂಭವಿಸಿದೆಯೆಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜನರ ಆಕ್ರೋಶಕ್ಕೆ ಮಣಿದ ಸರ್ಕಾರ, ಸಾಮೂಹಿಕ ರಾಜಿನಾಮೆ ನೀಡುವ ತೀರ್ಮಾನಕ್ಕೆ ಬಂದಿದೆ.