ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ರೈಲ್ವೇ ಇಲಾಖೆ ವಿಶೇಷ ರೈಲು ಸಂಚಾರವನ್ನು ಆರಂಭಿಸಿದೆ. ಮೇ 12ರಿಂದ ದೆಹಲಿಯಿಂದ ದೇಶದ 15 ಪ್ರಮುಖ ನಗರಿಗಳಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದೆ. ಇದರ ಜೊತೆಗೆ ಇಲಾಖೆ ಕೆಲವು ಮಹತ್ವದ ನಿಯಮಾವಳಿಗಳನ್ನು ನೀಡೋದರ ಜೊತೆಗೆ ಶಿಸ್ತು ಬದ್ಧವಾಗಿ ನಡೆದುಕೊಳ್ಳಲು ತಾಕೀತು ಮಾಡಿದೆ. ಇದೀಗ ಈ ವಿಶೇಷ ರೈಲಿನಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಕೂಡ ಕಡ್ಡಾಯವಾಗಿ ʼಆರೋಗ್ಯ ಸೇತುʼ App ತಮ್ಮ ಮೊಬೈಲ್ ನಲ್ಲಿ ಹೊಂದಿಕೊಂಡಿರಬೇಕು ಎಂದು ಹೇಳಿದೆ.
ಆದರೆ ಮೇ 11ರ ಮಧ್ಯರಾತ್ರಿ ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ “ನಾಳೆಯಿಂದ (ಮೇ 12) ವಿಶೇಷ ರೈಲು ಸಂಚಾರ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಎಲ್ಲಾ ಪ್ರಯಾಣಿಕರು ‘ಆರೋಗ್ಯ ಸೇತು’ App ಡೌನ್ ಲೋಡ್ ಮಾಡಿಕೊಳ್ಳಲೇ ಬೇಕು” ಎಂದು ಕೋರಿಕೊಂಡಿದೆ.
Also Read: ಆರೋಗ್ಯ ಸೇತು: ಭಾರತದ 9 ಕೋಟಿ ಜನರ ಗೌಪ್ಯ ಮಾಹಿತಿ ಅಪಾಯದಲ್ಲಿ
ಮೇ 1ರಂದು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಈ ‘ಆರೋಗ್ಯ ಸೇತು’ App ಇನ್ಬಿಲ್ಟ್ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮುಂದಿಟ್ಟಿತು. ಆದರೆ ಸದ್ಯಕ್ಕೆ ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನೆಲೆ ಅದನ್ನು ಕಾರ್ಯಗತ ಮಾಡುವುದು ಸಾಧ್ಯವಾಗದೆ ಹೋಯ್ತು. ಆದರೂ ಪ್ರಧಾನಿ ಮೋದಿ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಅಲ್ಲಿನ ಅಪ್ಲಿಕೇಶನ್ ಸೋಂಕನ್ನು ಟ್ರ್ಯಾಕ್ ಮಾಡಲು ಸಹಕಾರಿಯಾಗಿರೋದನ್ನು ಉದಾಹರಿಸುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಈ ‘ಆರೋಗ್ಯ ಸೇತು’ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದರು.
Indian Railways is going to start few passenger trains services. It is mandatory for passengers to download Aarogya Setu app in their mobile phones, before commencing their journey
Download this app now –
Android : https://t.co/bpfHKNLHmD
IOS : https://t.co/aBvo2Uc1fQ pic.twitter.com/MRvP8QBVPU— Ministry of Railways (@RailMinIndia) May 11, 2020
ಇದಾದ ಮರುದಿನವೇ ಅಂದರೆ ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ‘ಆರೋಗ್ಯ ಸೇತು’ ಅಪ್ಲಿಕೇಶನ್ ಸರ್ಕಾರದ ಸ್ವಾಮ್ಯದಲ್ಲಿ ಇಲ್ಲ. ಬದಲಾಗಿ ಖಾಸಗಿ ಸಂಸ್ಥೆಯ ಅಧೀನಲ್ಲಿದೆ. ಹೀಗಾಗಿ ಮಾಹಿತಿ ಸೋರಿಕೆಯಾಗುವ ಆತಂಕ ಇದೆಯೆಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮಾತಿಗೆ ಪುಷ್ಠಿ ಎಂಬಂತೆ, ಎಲಿಯಟ್ ಅಲ್ಡರ್ಸನ್ ಎಂಬ ಹ್ಯಾಕರ್ ʼಆರೋಗ್ಯ ಸೇತುʼ ಆಪ್ ಅನ್ನು ಹ್ಯಾಕ್ ಮಾಡಿ, ಇದು ಕಾರ್ಯ ಸಾಧ್ಯ ಎಂದು ಸಾಬೀತು ಮಾಡಿದರು. ಇದು ಈಗಾಗಲೇ ಅಪ್ಲಿಕೇಶನ್ ಹೊಂದಿರುವ 9 ಕೋಟಿ ಭಾರತೀಯರ ಗೌಪ್ಯ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ರಾಹುಲ್ ಗಾಂಧಿ ಮಾತಿಗೆ ಬಲ ತುಂಬಿತು.
ಮಾಹಿತಿ ಕಾಪಿಟ್ಟುಕೊಳ್ಳುವುದರಲ್ಲಿ ಇಷ್ಟೆಲ್ಲಾ ಅನುಮಾನವಿದ್ದರೂ ಕೂಡ ರೈಲ್ವೇ ಇಲಾಖೆ ಮತ್ತೆ ಪ್ರಯಾಣಿಕರಿಗೆ ʼಆರೋಗ್ಯ ಸೇತುʼ App ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸೂಚಿಸಿದೆ.
Also Read: ಸ್ಮಾರ್ಟ್ ಫೋನ್‌ಗಳಲ್ಲಿ ಇನ್ಮುಂದೆ ಇನ್‌ಬಿಲ್ಟ್ ಆಗಿ ಬರಲಿದೆ ʼಆರೋಗ್ಯ ಸೇತುʼ










