ಕೇಂದ್ರವು ಇತ್ತೀಚೆಗೆ ಅಂಗೀಕರಿಸಿದ ಮೂರು ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಮತ್ತು ಹೊರಗೆ ಕ್ಯಾಂಪಿಂಗ್ ಮಾಡುತ್ತಿರುವ ಸಾವಿರಾರು ರೈತರ ಪ್ರತಿಭಟನೆಗೆ ಕೊನೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. “ರೈತರ ಪ್ರತಿಯೊಂದು ಸಮಸ್ಯೆ ಮತ್ತು ಬೇಡಿಕೆಯ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ” ಎಂದು ಅಮಿತ್ ಶಾ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
Also Read: ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದಿನಿಂದ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ
ಸರ್ಕಾರವು ಡಿಸೆಂಬರ್ 3 ರಂದು ಕೇಂದ್ರವು ಆಂದೋಲನ ನಡೆಸುತ್ತಿರುವ ರೈತ ಸಂಘಗಳೊಂದಿಗೆ ಮಾತುಕತೆ ನಡೆಸಲಿದೆ, ಅದಕ್ಕೂ ಮುನ್ನ ಅವರು ಚರ್ಚೆ ನಡೆಸಲು ಬಯಸಿದರೆ, ಸರ್ಕಾರ ನಿಗದಿಪಡಿಸಿರುವ ಸ್ಥಳದಲ್ಲಿ ತಮ್ಮ ಪ್ರತಿಭಟನೆಯನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಡಿಸೆಂಬರ್ 3 ರ ಮೊದಲು ರೈತ ಸಂಘಗಳು ಚರ್ಚೆ ನಡೆಸಲು ಬಯಸಿದರೆ, ನಿಮ್ಮ ಪ್ರತಿಭಟನೆಯನ್ನು ಸರ್ಕಾರ ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಿದ, ಮರುದಿನವೇ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮಾತುಕತೆ ನಡೆಸುತ್ತದೆ” ಎಂದು ಅವರು ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Also Read: ದೆಹಲಿ ಚಲೋ; ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಿದ ಪೊಲೀಸರು
ಕೇಂದ್ರ ಸರ್ಕಾರ ತರಹೊರಟಿರುವ ನೂತನ ಕೃಷಿ ಮಸೂದೆಗಳ ವಿರುದ್ಧ ಸಾವಿರಾರು ರೈತರು ದೆಹಲಿ ಚಲೋ ಅಭಿಯಾನ ಅಂಗವಾಗಿ ಮೆರವಣಿಗೆ ನಡೆಸಿದ್ದಾರೆ. ಶುಕ್ರವಾರ ದೆಹಲಿ ಗಡಿಯನ್ನು ತಲುಪಿದ್ದ ರೈತರ ಮೇಲೆ ಪೊಲೀಸರು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ದೆಹಲಿಯ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಕೇಂದ್ರವು ರೈತರನ್ನು ದೆಹಲಿಗೆ ತಲುಪಲು ಅವಕಾಶ ಕೊಡದೆ, ರಕ್ಷಣಾ ಪಡೆಯ ಮೂಲಕ ಬಲಪ್ರಯೋಗಿಸಿದೆ.
ಆದಾಗ್ಯೂ, ನೂರಾರು ಪ್ರತಿಭಟನಾಕಾರರು ದೆಹಲಿಯ ಹೊರಗೆ ಸರ್ಕಾರ ನಿಗದಿಪಡಿಸಿದ ಪ್ರತಿಭಟನಾ ಸ್ಥಳಕ್ಕೆ ಹೋಗಲು ನಿರಾಕರಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿರುವ ಹಲವಾರು ಸ್ಥಳಗಳಲ್ಲಿ ಬಿಡಾರ ಹೂಡಿದ್ದಾರೆ.
Also Read: ತಮ್ಮನ್ನು ಹಿಂಸಿಸಿದ ಪೊಲೀಸರಿಗೇ ಆಹಾರ, ನೀರು ನೀಡಿದ ಪ್ರತಿಭಟನಾನಿರತ ರೈತರು