ರೂಪಾಂತರಿ ಕರೋನಾ ವೈರಸ್ ಕುರಿತಂತೆ ಸಾಕಷ್ಟು ಎಚ್ಚರ ವಹಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋರಿದ್ದಾರೆ. ಈ ಬಾರಿ ಸರ್ಕಾರ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ, ʼಹೊಸ ರೂಪದೊಂದಿಗೆ ಕಾಣಿಸಿಕೊಂಡಿರುವ ಕರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ತಜ್ಞರ ಸಲಹೆಯೊಂದಿಗೆ ಮುಖ್ಯಮಂತ್ರಿಗಳು ತಕ್ಷಣ ಮುನ್ನೆಚ್ಚರಿಕೆಯ ಕ್ರಮಗಳಿಗೆ ಮುಂದಾಗಬೇಕು. ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿʼ ಎಂದಿದ್ದಾರೆ.
ʼರೂಪಾಂತರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ತಕ್ಷಣ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಪರೀಕ್ಷಗೆ ಒಳಪಡಿಸಬೇಕು. ಇದರಲ್ಲಿ ರಿಯಾಯಿತಿ, ವಿನಾಯಿತಿ, ನಿರ್ಲಕ್ಷ್ಯ ಸಲ್ಲದುʼ ಎಂದು ಅವರು ಸಲಹೆ ನೀಡಿದ್ದಾರೆ.
ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ತಕ್ಷಣ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಪರೀಕ್ಷಗೆ ಒಳಪಡಿಸಬೇಕು.
ಇದರಲ್ಲಿ ರಿಯಾಯಿತಿ, ವಿನಾಯಿತಿ, ನಿರ್ಲಕ್ಷ್ಯ ಸಲ್ಲದು@CMofKarnataka @mla_sudhakar #COVIDSecondWave #Covid19UK
2/3— Siddaramaiah (@siddaramaiah) December 23, 2020
ಸಾರ್ವಜನಿಕರಲ್ಲೂ ಎಚ್ಚರಿಕೆಯಿಂದಿರುವಂತೆ ಕೋರಿಕೊಂಡ ಅವರು, ʼರೂಪಾಂತರಿ ಕರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಮಾಸ್ಕ್ ಹಾಕಿ, ಸಾನಿಟೈಸರ್ ಬಳಸಿ, ದೈಹಿಕ ಅಂತರ ಕಾಪಾಡಿ ಸಹಕರಿಸಬೇಕುʼ ಎಂದು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಈ ಕುರಿತಂತೆ ಎಚ್ಚೆತ್ತಿದ್ದು, ಯುಕೆಗಿರುವ ವಿಮಾನ ಸಂಚಾರವನ್ನು ನಿರ್ಬಂಧಿಸಿವೆ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ರಾತ್ರಿ ಹೊತ್ತು ಕರ್ಫ್ಯೂ ಜಾರಿಗೊಳಿಸಿದೆ.
Also Read: ಇಂದಿನಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ: ಸಿಎಂ ಬಿಎಸ್‌ವೈ ಘೋಷಣೆ