ಪ್ರತಿಷ್ಟಿತ ರಿಚರ್ಡ್ ಡಾಕಿನ್ಸ್ 2020 ರ ಸಾಲಿನ ಪ್ರಶಸ್ತಿಗೆ ಭಾರತದ ಕವಿ, ಗೀತೆ ರಚನೆಕಾರ ಹಾಗೂ ಬರಹಗಾರರಾದ ಜಾವೇದ್ ಅಖ್ತರ್ ಆಯ್ಕೆಯಾಗುವ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಧಾರ್ಮಿಕಕ ಸಿಧ್ದಾಂತದ ವಿಮರ್ಶೆ, ಮಾನವ ಪ್ರಗತಿ ಹಾಗೂ ಮಾನವತಾವಾದಿ ಮೌಲ್ಯಗಳನ್ನು ಎತ್ತಿಹಿಡಿದಿರುವುದಕ್ಕೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಿಚರ್ಡ್ಸ್ ಡಾಕಿನ್ಸ್ ಪ್ರಶಸ್ತಿಗೆ ಆಯ್ಕೆಯಾಗುವ ವ್ಯಕ್ತಿಯು ವಿಜ್ಞಾನ, ಮನೋರಂಜನಾ ಅಥವಾ ಶಿಕ್ಷಣಾ ಲೋಕದ ವೈಜ್ಞಾನಿಕ ಸತ್ಯ ಎತ್ತಿ ಹಿಡಿಯುವ ವಿಶಿಷ್ಟ ವ್ಯಕ್ತಿಯಾಗಿರಬೇಕು. ಅವರು ಜಾತ್ಯಾತೀತತೆ ಹಾಗೂ ವೈಚಾರಿಕ ಮೌಲ್ಯಗಳನ್ನು ಸಾರ್ವಜನಿಕವಾಗಿ ಎತ್ತಿ ಹಿಡಿಯಬೇಕು.
ರಾಜಕೀಯ, ಸಮಾಜ, ಕಲೆ ಹಾಗೂ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ದೃಢವಾದ ಹಾಗೂ ನೇರವಾದ ಸ್ವತಂತ್ರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವ ಜಾವೇದ್ ಅಖ್ತರ್ ರನ್ನು ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
“ನಾನು ರಿಚರ್ಡ್ ಡಾಕಿನ್ಸ್ ಅವರ ಮೊದಲ ಪುಸ್ತಕ ದಿ ಸೆಲ್ಫಿಶ್ ಜೀನ್ (The Selfish Gene) ಅನ್ನು ಓದಿದಾಗಿನಿಂದಲೂ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ರಿಚರ್ಡ್ ಡಾಕಿನ್ಸ್ ಫೌಂಡೇಶನ್ ನೋಡಿಕೊಳ್ಳುವ ಸೆಂಟರ್ ಫಾರ್ ಎನ್‌ಕ್ವೈರಿ ಮಂಡಳಿಯು ನನ್ನನ್ನು ಪ್ರಶಸ್ತಿಗಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಇಮೇಲ್ ನನಗೆ ಬಂದಿತು. ರಿಚರ್ಡ್ ಡಾಕಿನ್ಸ್ ಮೂಢ ನಂಬಿಕೆಗಿಂತ ಪ್ರಾಯೋಗಿಕ ವಿಜ್ಞಾನದ ವಕ್ತಾರ. ನಾನು ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ ಮತ್ತು ಅವುಗಳು ವಿಮರ್ಶಾತ್ಮಕ ಚಿಂತನೆ ಮತ್ತು ವೈಚಾರಿಕತೆಯ ಶತ್ರು ಎಂದು ಧಾರ್ಮಿಕ ಸಿದ್ಧಾಂತವನ್ನು ಬಹಿರಂಗಪಡಿಸುವ ಅಗತ್ಯತೆಯ ಬಗ್ಗೆ ನನ್ನ ಸ್ವಂತ ಅಭಿಪ್ರಾಯಗಳನ್ನು ಬಲಪಡಿಸಿದೆ.” ಎಂದು ಜಾವೇದ್ ಅಖ್ತರ್ ಸಂತಸ ವ್ಯಕ್ತಪಡಿಸಿದ್ದಾರೆ.