ರಾಮ ಜನ್ಮಭೂಮಿ ಚಳವಳಿಯ ಶಿಲ್ಪಿ ಹಾಗೂ ಅದಕ್ಕಾಗಿ ದೇಶದ ಮೊದಲ ರಾಜಕೀಯ ರಥಯಾತ್ರೆಯನ್ನು ಮುನ್ನಡೆಸಿದ ಮುಖ್ಯ ನಾಯಕ, ಬಿಜೆಪಿ ಹಿರಿಯ ಎಲ್.ಕೆ.ಅಡ್ವಾಣಿಯನ್ನು ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಭೂಮಿಪೂಜೆಯ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಯಾವ ಆಹ್ವಾನವೂ ಹೋಗಿಲ್ಲ.
ಎಲ್ ಕೆ ಅಡ್ವಾಣಿಗೆ ಶನಿವಾರದವರೆಗೆ ಅಧಿಕೃತವಾದ ಯಾವುದೇ ಆಹ್ವಾನ ಬಂದಿಲ್ಲವೆಂದು ಅವರ ಆಪ್ತ ಮೂಲಗಳೇ ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಡ್ವಾಣಿ ಮಾತ್ರವಲ್ಲದೆ, ಪಕ್ಷದ ಮತ್ತೊಬ್ಬ ಪ್ರಮುಖ ರಾಮ ಜನ್ಮಭೂಮಿ ಕಾರ್ಯಕರ್ತ ಮುರಳಿ ಮನೋಹರ್ ಜೋಶಿಯವರಿಗೆ ಕೂಡಾ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಸಮಾರಂಭಕ್ಕೆ ಆಹ್ವಾನವನ್ನು ನೀಡಲಾಗಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
ರಾಮಮಂದಿರ ಚಳುವಳಿಯನ್ನು ದೇಶವಿಡೀ ಹಬ್ಬಿಸಿದಂತಹ, ಬಾಬರೀ ಮಸೀದಿ ಧ್ವಂಸ ಪ್ರಕರಣಕ್ಕೆ ಈಗಲೂ ವಿಚಾರಣೆ ಎದರಿಸುತ್ತಿರುವಂತಹ ಅಡ್ವಾಣಿ ಅಂಥ ಹಿರಿಯ ನಾಯಕರನ್ನು ಭೂಮಿಪೂಜೆಗೆ ಆಹ್ವಾನಿಸಬಹುದು ಎಂದೇ ಭಾವಿಸಲಾಗಿತ್ತು.
ರಾಮಜನ್ಮ ಭೂಮಿ ಪೂಜೆಗೆ ಆಹ್ವಾನ ಕಳುಹಿಸಲು ಒಂದು ತಿಂಗಳ ಹಿಂದೆಯೇ ಶುರುಮಾಡಿದ್ದರೂ, ಬಾಬರಿ ಮಸೀದಿ ಧ್ವಂಸ ಮುಖಾಂತರ ರಾಮಮಂದಿರ ಕಟ್ಟಲು ಮುಖ್ಯ ಕಾರಣಕರ್ತರಾದ ಅಡ್ವಾಣಿ, ಜೋಷಿಯಂತವರನ್ನೇ ಕಾರ್ಯಕ್ರಮದಿಂದ ಹೊರಗಿಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.