ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದು ಇನ್ನು ೮ ದಿನ ಕಳೆದಿದೆ. ಈ ಶಾಕ್ ನಿಂದ ಇನ್ನೂ ರಾಜ್ಯದ ಜನ ಹೊರಬಂದಿಲ್ಲ. ಆದ್ರೆ ಅದಾಗಲೇ ಈಗ ರಾಜ್ಯದಲ್ಲಿ ರಾಮಮಂದಿರ ಬ್ಲಾಸ್ಟ್ ಮಾಡೋ ಬೆದರಿಕೆ ಪತ್ರ ಬಂದಿದೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ನಡೆದ ೨-೩ ದಿನದ ಅಂತರದಲ್ಲೇ ಖುದ್ದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ಮೇಲ್ ಮೂಲಕ ಇನ್ನಷ್ಟು ಕಡೆಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಬೆದರಿಕೆ ಬಂದಿತ್ತು. ಆ ಪ್ರಕರಣ ಕೂಡ ಇನ್ನ ತನಿಖ್ಯೆಯ ಹಂತದಲ್ಲಿದೆ. ಇಷ್ಟೆಲ್ಲದರ ಮಧ್ಯೆ ನಿಪ್ಪಾಣಿಯಲ್ಲಿ ರಾಮ ಮಂದಿರ ಸ್ಫೋಟಿಸುವ ಬೆದರಿಕೆ ಪತ್ರ ಮಂದಿರದಲ್ಲೇ ಸಿಕ್ಕಿರೋದು ಆತಂಕ ಮೂಡಿಸಿದೆ.

ಬೆಳಗಾವಿಯ ನಿಪ್ಪಾಣಿಯಲ್ಲಿರುವ ೧೦೧ ವರ್ಷ ಪುರಾತನ ರಾಮಮಂದಿರದಲ್ಲಿ ಈ ಹಿಂದೆಯೇ ಈ ಪತ್ರ ದೊರೆತಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲಾ ಹೂ ಅಕ್ಬರ್ ಹೆಸರಿನ ಪತ್ರ ಇದಾಗಿದ್ದು, ನಿಮ್ಮ ರಾಮನಿಂದರವನ್ನ ಬ್ಲಾಸ್ಟ್ ಮಾಡಲಾಗುತ್ತೆ ಸುಧಾರಿಸಿಕೊಳ್ಳಿ ಎಂದು ಬರೆದು ಪತ್ರವನ್ನ ಮಂದಿರದ ಗರ್ಭಗುಡಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರೆ. ಕೇವಲ ಒಂದಲ್ಲ ಅಂತ ಎರೆಡೆರೆಡು ಬಾರಿ ಈ ಪತ್ರ ಸಿಕ್ಕಿದ್ದು.. ಫೆಬ್ರವರಿ ೭ ಹಾಗೂ ೨೮ ರಂದು ಈ ಪತ್ರ ದೊರೆತಿದೆ.

ಮೊದಲ ಪತ್ರ ಮಂದಿರದ ಗರ್ಭಗುಡಿಯಲ್ಲಿ ಸಿಕ್ಕಿದ್ರೆ ಎರೆಡನೆಯ ಪತ್ರ ದೇವಸ್ಥಾನದ ಆವರಣದಲ್ಲಿರುವ ಹನುಮಾನ್ ಗುಡಿಯಲ್ಲಿ ಸಿಕ್ಕಿದೆ. ಈ ಹಿನ್ನಲೆ ದೇವಸ್ಥಾನದಲ್ಲಿ ೧೪ ಸಿಸಿಟಿವಿ ಅಳವಡಿಸಲಾಗಿದ್ದು ಭದ್ರತೆ ಕ್ರಮ ಕೈಗೊಂಡಿದ್ದರೆ.
ಹೀಗೆ ಮೇಲಿಂದ ಮೇಲೆ ಬಾಂಬ್ ಬೆದರಿಕೆಗಳು ರಾಜ್ಯದಲ್ಲಿ ಆಂತಂಕವನ್ನ ಸೃಷ್ಟಿಸಿದ್ದು ಆದಷ್ಟು ಬೇಗ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡು ಜನರ ಆತಂಕ ದೂರಮಾಡಬೇಕಿದೆ.