ಸುಪ್ರೀಂ ಕೋರ್ಟ್ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲಕರವಾದ ತೀರ್ಪು ಬರಲು ಕಾರಣವಾದ ಅಂಶವೆಂದು ಕರೆಯಲ್ಪಡುವ ಯಾವುದನ್ನೂ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕರಾದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಟಿವಿ 9 ಭಾರತ್ವರ್ಷ್ ನಲ್ಲಿ ನಡೆದ ಡಿಬೇಟ್ ಒಂದರಲ್ಲಿ ಭಾಗಿಯಾದ ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಆಗಿರುವ ಸುಬ್ರಮಣಿಯನ್ ಸ್ವಾಮಿ, ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಯಾವುದೇ ಕೊಡುಗೆ ಇಲ್ಲ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾವು ದೇವಾಲಯಕ್ಕಾಗಿ ಎಲ್ಲಾ ವಾದಗಳು ಮತ್ತು ಚರ್ಚೆಗಳನ್ನು ಮಾಡಿದ್ದೇವೆ. ದೇವಾಲಯದ ನಿರ್ಮಾಣಕ್ಕೆ ಅನುಕೂಲಕರವಾದ ತೀರ್ಪು ಸುಪ್ರೀಂ ಕೋರ್ಟ್ನಲ್ಲಿ ಬರಲು ಕಾರಣವಾದ ಅಂಶವೆಂದು ಕರೆಯಲ್ಪಡುವ ಯಾವುದನ್ನೂ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕರಾದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಮತ್ತು ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಸಿಂಘಾಲ್ ಅವರು ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣದ ಕಾರ್ಯಸೂಚಿಯನ್ನು ಮುಂದಿಟ್ಟ ಪ್ರಮುಖ ವ್ಯಕ್ತಿಗಳು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Also Read: ಎಸ್ಒಪಿ(SOP) ಪಾಲಿಸಿದರೆ ರಾಮಮಂದಿರ ಭೂಮಿ ಪೂಜೆಗೆ ಸ್ವತಃ ಪ್ರಧಾನಿಯೇ ಹೋಗುವಂತಿಲ್ಲ!
1992 ರ ಡಿಸೆಂಬರ್ 6 ರವರೆಗೆ 16 ನೇ ಶತಮಾನದ ಬಾಬರಿ ಮಸೀದಿ ಆಕ್ರಮಿಸಿಕೊಂಡಿದ್ದ ಸ್ಥಳದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.. ಇದು ಶ್ರೀ ರಾಮಮ ಜನ್ಮಸ್ಥಳ ಎಂದು ಅವರು ಪ್ರತಿಪಾದಿಸಿ ಅಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸಗೈಯಲಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ, ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ದೇವಾಲಯವನ್ನು ನಿರ್ಮಿಸಲು ಸ್ಥಳವನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ಹಸ್ತಾಂತರಿಸುವಂತೆ ಆದೇಶಿಸಿತ್ತು.
ರಾಮ ಮಂದಿರ ಹಾಗೂ ರಫೇಲ್ ವಿಮಾನಗಳಿಗೆ ನರೇಂದ್ರ ಮೋದಿ ಅಬಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ನರೇಂಧ್ರ ಮೋದಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಭಾರತಕ್ಕೆ ರಫೇಲ್ ತರಲು ಯುಪಿಎ ಅವಧಿಯಲ್ಲೇ ತೀರ್ಮಾನವಾಗಿತ್ತು. ಈಗ ಸುಬ್ರಮಣಿಯನ್ ಸ್ವಾಮಿ ಅವರು ರಾಮಮಂದಿರದ ಕ್ರೆಡಿಟನ್ನು ಕಾಂಗ್ರೆಸ್ ನಾಯಕರಾಗಿದ್ದ ಪಿ.ವಿ ನರಸಿಂಹ ರಾವ್ ಹಾಗೂ ರಾಜೀವ್ ಗಾಂಧಿಗೆ ನೀಡಿದ್ದಾರೆ.






