ಜೂನ್ 19 ರ ಸಂಜೆ 5 ಗಂಟೆಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ರಾಜ್ಯದಲ್ಲಿ 337 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ 337 ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 8281 ತಲುಪಿದೆ. ಇದುವರೆಗೂ 5210 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 124 ತಲುಪಿದೆ. ಸಕ್ರಿಯವಾಗಿರುವ 2943 ಪ್ರಕರಣದಲ್ಲಿ 78 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಒಟ್ಟು ಪ್ರಕರಣದಲ್ಲಿ 93 ಪ್ರಕರಣಗಳು ಅಂತರಾಜ್ಯ ಮೂಲದಿಂದ ಬಂದವು. 11 ಪ್ರಕರಣಗಳು ಅಂತರಾಷ್ಟ್ರೀಯ ಪ್ರಯಾಣದ ಹಿನ್ನಲೆ ಹೊಂದಿದೆ. ರಾಜ್ಯದಲ್ಲಿ ಇದುವರೆಗೂ 4,84,060 ಮಂದಿಯನ್ನು ಪರೀಕ್ಷಿಸಲಾಗಿದೆ.
ಇನ್ನು ಭಾರತದಲ್ಲಿ 12,881 ಹೊಸ ಪ್ರಕರಣಗಳು ಕಂಡುಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 81 ಸಾವಿರ ದಾಟಿದೆ. ಇದುವರೆಗೂ 2 ಲಕ್ಷದ 5 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು 334 ಸೋಂಕಿತರು ಮರಣವನ್ನಪ್ಪಿದ್ದು, ದೇಶದಲ್ಲಿ ಇದುವರೆಗೂ 12,573 ಮಂದಿ ಮರಣವನ್ನಪ್ಪಿದ್ದಾರೆ.











