ಕರೋನಾ ಸೋಂಕು ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಜಾರಿ ಮಾಡಿದ್ದ ಲಾಕ್‌ಡೌನ್ ಅವಧಿ ಮೇ 3ರ ತನಕ ಜಾರಿಯಲ್ಲಿರಲಿದೆ. ಆದರೆ ಆ ನಡುವೆ ಏಪ್ರಿಲ್ 20 ರಿಂದ ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳನ್ನು ಸಡಿಲ ಮಾಡಿ ಆದೇಶ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಏಪ್ರಿಲ್ 20 ರಿಂದ ಐಟಿ ಬಿಟಿ ಸೇರಿದಂತೆ ಕೆಲವೊಂದು ನಿಯಮಗಳನ್ನು ಸಡಿಲ ಮಾಡಲು ಮುಂದಾಗಿತ್ತು. ಆದರೆ ಜನಾಕ್ರೋಶ ವ್ಯಕ್ತವಾದ ಬಳಿಕ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು. ಆದರೆ ಇಂದು ಮಧ್ಯರಾತ್ರಿಯಿಂದ ಸರ್ಕಾರದ ಹೊಸ ನಿಯಮಗಳು ಜಾರಿಗೆ ತರುತ್ತಿದೆ. ಲಾಕ್‌ಡೌನ್ ಸಡಿಲಿಕೆ ನಿಯಮ ಜಾರಿ ಮಾಡುತ್ತಿದ್ದು, ರೆಡ್ ಝೋನ್, ಕಂಟೈನ್ಮೆಂಟ್ ಝೋನ್, ಹಾಟ್‌ಸ್ಪಾಟ್ ಏರಿಯಾಗಳಲ್ಲಿ ಸಡಿಲಿಕೆ ಆದೇಶ ಜಾರಿ ಆಗುವುದಿಲ್ಲ.
ಯಾವ ಕೆಲಸಗಳಿಗೆ ಅವಕಾಶ..?
-
ಕಟ್ಟಡ ನಿರ್ಮಾಣ ಕಾಮಗಾರಿಗೆ ಸಮಸ್ಯೆಯಿಲ್ಲ
-
ರಸ್ತೆ ಕಾಮಗಾರಿ ಗುತ್ತಿಗೆದಾರರು ಕೆಲಸ ಮಾಡಬಹುದು
-
ಕೃಷಿ, ಕೈಗಾರಿಕೆ, ತೋಟಗಾರಿಕೆ ಕೆಲಸಗಳಿಗೆ ಅಡ್ಡಿಯಿಲ್ಲ
-
ಗೂಡ್ಸ್ ಆಟೋ ಸಂಚಾರಕ್ಕೆ ಅವಕಾಶ ಇದೆ
-
ಮನರೇಗ ಯೋಜನೆಯಡಿ ಕೆಲಸಕ್ಕೆ ಅವಕಾಶ
-
ಅಗತ್ಯ ವಸ್ತುಗಳ ಆನ್ಲೈನ್ ಡೆಲಿವರಿಗೂ ಅವಕಾಶ
-
ಸಿಮೆಂಟ್, ಜಲ್ಲಿ ಸಾಗಾಟಕ್ಕೂ ಅನುಮತಿ
-
ಶೇಕಡ 50ರಷ್ಟು ಕಾರ್ಮಿಕರು ಕೆಲಸಕ್ಕೆ ಅವಕಾಶ
-
ಕೃಷಿ, ಮೀನುಗಾರಿಕೆ ವಲಯಕ್ಕೆ ಬಿಗ್ ರಿಲೀಫ್
-
ರಸಗೊಬ್ಬರ, ಔಷಧ ಪೂರೈಕೆ ಮಾಡಬಹುದು
-
ಟೀ, ಕಾಫಿ ಪ್ಲಾಂಟೇಷನ್ ಕೆಲಸಕ್ಕೂ ಅನುಮತಿ
-
ಕೃಷಿ, ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
-
ಆಹಾರ ಸಂಸ್ಕರಣ ಘಟಕ, ಪ್ಯಾಕೇಜಿಂಗ್ ಮಾಡಬಹುದು
-
ಸರಕು, ಕಾರ್ಗೋ ಸಂಚಾರಕ್ಕೆ ಅನುಮತಿ
-
ಹೊಟೇಲ್ಗಳಲ್ಲಿ ಪಾರ್ಸೆಲ್ ಸೇವೆ ಲಭ್ಯ
-
ಆರೋಗ್ಯ ಕ್ಷೇತ್ರದ ಎಲ್ಲಾ ಸೇವೆಗಳು ಲಭ್ಯ
-
ಕೊರಿಯರ್ ಸೇವೆ ಆರಂಭಕ್ಕೆ ಅನುಮತಿ
-
ಕೇಬಲ್, ಡಿಟಿಹೆಚ್ ಆಪರೇಟರ್ಗೆ ಅನುಮತಿ
ಯಾವ ಕೆಲಸಕ್ಕೆ ಅವಕಾಶವಿಲ್ಲ..?
-
ಸ್ಪೋರ್ಟ್ಸ್ ಅಕಾಡೆಮಿಗಳು ತೆರೆಯುವಂತಿಲ್ಲ
-
ದೇವಸ್ಥಾನ, ಮಠ, ಮಸೀದಿ, ಚರ್ಚ್ ಬಂದ್
-
ಅಂತಿಮ ಸಂಸ್ಕಾರದಲ್ಲಿ 20 ಜನರಿಗೆ ಸೀಮಿತ
-
ಬಸ್ ಸಂಚಾರ, ರೈಲು, ಮೆಟ್ರೋ ರೈಲು ಇರಲ್ಲ
-
ವಿಮಾನ ಸಂಚಾರ ಕೂಡ ಸಂಪೂರ್ಣ ಬಂದ್
-
ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್ ಬಂದ್
-
ಮದ್ಯ ಮಾರಾಟ ಮೇ 3ರವರೆಗೆ ಅವಕಾಶವಿಲ್ಲ
-
ಧಾರ್ಮಿಕ ಸಭೆ ಸಮಾರಂಭಗಳಿಗೆ ನಿರ್ಬಂಧ
-
ಶಾಲಾ ಕಾಲೇಜು ಆರಂಭ ಮಾಡುವಂತಿಲ್ಲ
-
ಐಟಿಬಿಟಿ ವಲಯದ ತುರ್ತು ಸಿಬ್ಬಂದಿಗೆ ಅವಕಾಶ