ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಿಜಯ್ ಮಲ್ಯ ಅವರ ರಹಸ್ಯ ವಿಚಾರಣೆ ನಡೆಯುತ್ತಿರುವುದರಿಂದ ಹಸ್ತಾಂತರ ಪ್ರಕ್ರಿಯೆ ತಡವಾಗಿದೆ ಎಂದು ವಿದೇಶಾಂಗ ಸಚಿವಾಲಯ ಇಲಾಖೆ ಸುಪ್ರೀಮ್ ಕೋರ್ಟಿಗೆ ತಿಳಿಸಿದೆ.
ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಭಾರತದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಸುಪ್ರೀಂ ಕೋರ್ಟ್ ಎದುರು ಹಾಜರಾಗಬೇಕಿತ್ತು. ಆದರೆ ಯುಕೆಯಲ್ಲಿ ನಡೆಯುತ್ತಿರುವ ʼರಹಸ್ಯ ವಿಚಾರಣೆʼಯಿಂದಾಗಿ ನ್ಯಾಯಾಲಯದ ಎದುರು ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವಿದೇಶಾಂಗ ಸಚಿವಾಲಯವನ್ನು ಪ್ರತಿನಿಧಿಸುವ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಯುಕೆ ಕೋರ್ಟ್ ವಿಜಯ್ ಮಲ್ಯರ ಹಸ್ತಾಂತರವನ್ನು ಒಪ್ಪಿದ್ದರೂ ಇನ್ನೂ ರಹಸ್ಯ ವಿಚಾರಣೆ ನಡೆಯುತ್ತಿದೆ ಎಂದು ಯುಯು ಲಲಿತ್ ಮತ್ತು ಅಶೋಕ್ ಭೂಷ್ ದ್ವಿ ಸದಸ್ಯ ಪೀಠದೆದುರು ಇಲಾಖೆಯ ಹೇಳಿದ್ದಾರೆ.
ಯುಕೆ ವಿಚಾರಣೆ ಎಂದು ಮುಕ್ತಾಯಗೊಳ್ಳುತ್ತದೆ ಎಂದು ನ್ಯಾಯಾಲಯವು ಕೇಳಿದಾಗ, ಅಲ್ಲಿ ನಡೆಯುತ್ತಿರುವ ರಹಸ್ಯ ವಿಚಾರಣೆಯಲ್ಲಿ ಭಾರತ ಸರ್ಕಾರವು ಪಾಲುದಾರನಲ್ಲ, ಹಾಗೂ ಆ ವಿಚಾರಣೆಯ ತೀರಾ ರಹಸ್ಯ ಸ್ವರೂಪದ್ದಾಗಿರುತ್ತದೆ ಎಂದು ಇಲಾಖೆಯ ಪರ ವಕೀಲರು ತಿಳಿಸಿದ್ದಾರೆ.

ಬಳಿಕ, ಕೋರ್ಟ್ ಮಲ್ಯ ಪರ ವಕೀಲರಿಗೆ ಈ ಮೂರು ಪ್ರಶ್ನೆಗಳನ್ನು ಕೇಳಿ, ಉತ್ತರಿಸಲು ಸಮಯಾವಕಾಶ ನೀಡಿದೆ.
· ಯುಕೆಯಲ್ಲಿ ಬಾಕಿ ಇರುವ ವಿಚಾರಣೆಯ ಸ್ವರೂಪವೇನು?
· ಈ ಪ್ರಕ್ರಿಯೆಗಳು ಯಾವಾಗ ಮುಗಿಯುವ ಸಾಧ್ಯತೆಯಿದೆ?
· ಮಲ್ಯ ನ್ಯಾಯಾಲಯಕ್ಕೆ ಹಾಜರಾಗುವುದು ಯಾವಾಗ?
ಮುಂದಿನ ವಿಚಾರಣೆಯನ್ನು ನವೆಂಬರ್ 2 ರ ಅಪರಾಹ್ನ 2 ಗಂಟೆಗೆ ಮುಂದೂಡಲಾಗಿದೆ.










