ಕೆಆರ್ಎಸ್ ಪಕ್ಷದವತಿಯಿಂದ ಕರ್ನಾಟಕ ಸೈಕಲ್ ಯಾತ್ರೆ ಆರಂಭವಾಗಿದ್ದು, ಸೈಕಲ್ ಯಾತ್ರೆಯ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಚಲಾಯಿಸುತ್ತಿದ್ದ ಸೈಕಲ್ಗೆ ಅನಾಮಿಕ ಟೆಂಪೊವೊಂದು ಅಪಘಾತ ನಡೆಸಿ ಪರಾರಿಯಾಗಿದೆ ಎಂದು ಸ್ವತಃ ರೆಡ್ಡಿಯವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅವರ ಫೇಸ್ಬುಕ್ ಪೋಸ್ಟ್ ಪ್ರಕಾರ ರೆಡ್ಡಿಯವರು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಹಾಗೂ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ. ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ನಡೆಯುವವರು ಎಡವಬಹುದು. ಓಡುವವರು ಬೀಳಬಹುದು.
ಇಂದು #ಚಲಿಸುಕರ್ನಾಟಕ #KRSಸೈಕಲ್ಯಾತ್ರೆ ಭಾಗವಾಗಿ ಮಧ್ಯಾಹ್ನದ ಊಟದ ನಂತರ ಸೈಕಲ್ ತುಳಿಯುತ್ತ…
Posted by Ravi Krishna Reddy on Thursday, September 17, 2020
ಆಸ್ಪತ್ರೆಯಿಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರವಿ ಕೃಷ್ಣಾರೆಡ್ಡಿ ಅವರು, ಚಲಿಸು ಕರ್ನಾಟಕ ಸೈಕಲ್ ಯಾತ್ರಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
#ಚಲಿಸುಕರ್ನಾಟಕ #KRSಸೈಕಲ್ಯಾತ್ರೆ
ಅಪಘಾತ. ಆಸ್ಪತ್ರೆಯಿಂದ.
ಒಂದಷ್ಟು ವಿಚಾರಗಳು.
18-09-2020.
Posted by Ravi Krishna Reddy on Thursday, September 17, 2020