ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಹಾಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಗರಂ ಆಗಿದ್ದಾರೆ. ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಬಗ್ಗೆ ಎಸ್.ಸುರೇಶ್‌ಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸರ್ಕಾರದ ಕಿವಿ ಹಿಂಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಇನ್ನು ಸುರೇಶ್‌ಕುಮಾರ್ ಅವರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿರುವುದು ಏನೆಂದರೆ – ರಾಜ್ಯ ಸರ್ಕಾರ ಮಾಡ ಹೊರಟಿರುವ 216 ಗ್ಯಾರಂಟಿ ಕಮಿಟಿಗಳ ಯೋಜನೆ ಅತ್ಯಂತ ವಿನಾಶಕಾರಿ ಯೋಜನೆ.
ರಾಜ್ಯದ ತೆರಿಗೆದಾರರ ಹಣ ಇರುವುದು ರಾಜ್ಯದ ಜನತೆಯ ಕಲ್ಯಾಣಕ್ಕಾಗಿಯೋ ಅಥವಾ ಕಾಂಗ್ರೆಸ್ ಕಾರ್ಯಕರ್ತರ ಕಲ್ಯಾಣಕ್ಕಾಗಿಯೋ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನೀಲಿ ನಕ್ಷೆ ಎಂದು ಹೇಳಲಾಗುತ್ತಿರುವ ಈ ಕ್ರಮ ಜವಾಬ್ದಾರಿ ರಹಿತ ಅಧಿಕಾರವನ್ನು (Power without responsibility) ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹೊರಟಿರುವ ಒಂದು ವಿವೇಚನಾರಹಿತ ಕ್ರಮ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಮಾರಕವಾಗಲಿರುವ ಈ ರೀತಿಯ ಯೋಜನೆಯ ಕಲ್ಪನೆಯನ್ನು ನೀಡಿರುವುದು ಮುಖ್ಯಮಂತ್ರಿಗಳ ಅಸಂಖ್ಯಾತ ಸಲಹೆಗಾರರ ಪೈಕಿ ಯಾವ ಸಲಹೆಗಾರನೋ ತಿಳಿಯದು. ಕರ್ನಾಟಕದ ಈ ನೂತನ ಪುನರ್ವಸತಿ ಯೋಜನೆ ರಾಜ್ಯಕ್ಕೆ ವಿವಿಧ ರೀತಿಯಲ್ಲಿ ಮಾರಕವಾಗುವುದು ಗ್ಯಾರಂಟಿ.