ಮುಂದಿನ ವರ್ಷದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಬಿಜೆಪಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಹೇಳಿದ್ದಾರೆ.
“ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯ್ ಅವರ ಹೆಸರು ಕೂಡಾ ಇದೆ ಎಂದು ನನ್ನ ಮೂಲಗಳಿಂದ ತಿಳಿದುಕೊಂಡಿದ್ದೇನೆ. ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಗೆ ಬಿಜೆಪಿ ಅವರನ್ನು ಯೋಜಿಸಬಹುದೆಂದು ನಾನು ಭಾವಿಸುತ್ತೇನೆ “ಎಂದು ಗೊಗೊಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಸಿಜೆಐ ರಾಜ್ಯಸಭೆಗೆ ಹೋಗಬಹುದಾದರೆ, ಬಿಜೆಪಿಯ ಮುಂದಿನ ‘ನಿರೀಕ್ಷಿತ’ ಸಿಎಂ ಅಭ್ಯರ್ಥಿಯಾಗಲು ಅವರು ಒಪ್ಪಿಕೊಳ್ಳಲೂಬಹುದು ಎಂದು ಅವರು ಹೇಳಿದ್ದಾರೆ.
Also Read: ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ
“ಅಯೋಧ್ಯ ರಾಮ್ ಮಂದಿರ ಪ್ರಕರಣ ತೀರ್ಪು ರಂಜನ್ ಗೊಗೊಯ್ ಅವರಲ್ಲಿ ಬಿಜೆಪಿಗೆ ತೃಪ್ತಿಹೊಂದುವಂತೆ ಮಾಡಿದೆ. ನಂತರ ರಾಜ್ಯಸಭಾ ನಾಮಪತ್ರ ಸ್ವೀಕರಿಸುವ ಮೂಲಕ ಗೊಗೊಯ್, ಬಿಜೆಪಿ ಮುಖಾಂತರ ಹಂತ ಹಂತವಾಗಿ ರಾಜಕೀಯ ಪ್ರವೇಶಿಸಿದರು. ಅವರಿಗೆ ಮಾನವ ಹಕ್ಕುಗಳ ಆಯೋಗ ಅಥವಾ ಇತರ ಹಕ್ಕುಗಳ ಸಂಸ್ಥೆಗಳ ಅಧ್ಯಕ್ಷರಾಗಬಹುದಿತ್ತು. ಆದರೂ ಅವರು ರಾಜ್ಯಸಭಾ ಸದಸ್ಯತ್ವವನ್ನು ಏಕೆ ನಿರಾಕರಿಸಲಿಲ್ಲ? ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಇದೆ. ಅದಕ್ಕಾಗಿಯೇ ಅವರು ರಾಜ್ಯಸಭಾ ಸದಸ್ಯನಾಗಿ ನಾಮನಿರ್ದೇಶನವನ್ನು ಸ್ವೀಕರಿಸಿದರು” ಎಂದು ತರುಣ್ ಗೊಗೊಯ್ ಹೇಳಿದ್ದಾರೆ.
ಅದೇ ವೇಳೆ, ಕಾಂಗ್ರೆಸ್ ನ ಮುಂದಿನ ಸಿಎಂ ಅಭ್ಯರ್ಥಿಯಾಗಲು ತಾನು ಹೋಗುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಗೊಗೊಯ್, ಬಿಜೆಪಿಯನ್ನು ಅಧಿಕಾರದಿಂದ ಕಿತ್ತುಹಾಕಲು ಬದ್ರುದ್ದೀನ್ ಅಜ್ಮಲ್ ನೇತೃತ್ವದ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಎಡ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ ‘ಮಹಾ ಮೈತ್ರಿ’ ರಚಿಸಲು ಅವರು ಸಲಹೆ ನೀಡುತ್ತಿದ್ದಾರೆ.
“ನಾನು ರಾಜ್ಯದ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ. ನಾನು ಮಾರ್ಗದರ್ಶಕ ಶಕ್ತಿಯಾಗಲು ಬಯಸುತ್ತೇನೆ ಅಥವಾ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತೇನೆ. ಕಾಂಗ್ರೆಸ್‌ನಲ್ಲಿ ಹಲವಾರು ಅರ್ಹ ಅಭ್ಯರ್ಥಿಗಳಿದ್ದಾರೆ, ಅವರು ಅಧಿಕಾರ ವಹಿಸಿಕೊಳ್ಳಬಹುದು ”ಎಂದು ಗೊಗೊಯ್ ಹೇಳಿದ್ದಾರೆ. ಸಂಭಾವ್ಯ ಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯನ್ನು ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಕ್ಷೇಪಿಸಬೇಕು ಎಂದು ಕೂಡಾ ಅವರು ಹೇಳಿದ್ದಾರೆ.