• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?

by
January 29, 2020
in ದೇಶ
0
ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕೇರಳ, ರಾಜಸ್ಥಾನ, ಪಂಜಾಬ್ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ. ತೆಲಂಗಾಣ ಸರ್ಕಾರ ಕೂಡ ನಿರ್ಣಯ ಅಂಗೀಕಾರ ಮಾಡಲು ಮುಂದಾಗಿದೆ.

ADVERTISEMENT

ಈ ನಡುವೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ಮಾಡುವವರಿಗೆ ಚಾಟಿ ಬೀಸಿದ್ದು, ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದಾರೆ. ದೆಹಲಿಯಲ್ಲಿ ನಿನ್ನೆ ಎನ್‌ಸಿಸಿ ಪರೇಡ್ ನಲ್ಲಿ ಭಾಗಿಯಾಗಿದ್ದ ಪ್ರಧಾನಿ, ನೆರೆಹೊರೆಯ ದೇಶಗಳ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ. ವಿರೋಧ ಪಕ್ಷಗಳು ಮತ ಬ್ಯಾಂಕ್‌ಗಾಗಿ ವಿರೋಧ ಮಾಡ್ತಿವೆ ಎಂದಿದ್ದಾರೆ.

ಈ ನಡುವೆ ಪ್ರಚೋದನೆ ಆರೋಪದಲ್ಲಿ ಜವಾಹರಲಾಲ್‌ ಯೂನಿವರ್ಸಿಟಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆದ್ರೆ ಹೋರಾಟಗಾರರನ್ನೇ ಬೆದರಿಸುವ ಕೆಲಸ ನಡೀತೀದ್ಯ ಅನ್ನೋ ಅನುಮಾನ ಕೂಡ ಕೇಂದ್ರ ಸರ್ಕಾರದ ಮೇಲೆ ಮೂಡಿದೆ.

ದೆಹಲಿಯ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶರ್ಜೀಲ್‌ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಈಶಾನ್ಯ ರಾಜ್ಯಗಳನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಎನ್‌ಆರ್‌ಸಿ, ಎನ್‌ಸಿಆರ್‌, ಸಿಎಎ ಜಾರಿ ಮಾಡುತ್ತಿದೆ. ಇದನ್ನು ನೋಡಿದ್ರೆ ಈಶಾನ್ಯ ರಾಜ್ಯಗಳನ್ನೇ ಭಾರತದಿಂದ ಪ್ರತ್ಯೇಕ ಮಾಡಿಬಿಡಬೇಕು ಎನ್ನುವ ಅರ್ಥದಲ್ಲಿ ಭಾಷಣ ಮಾಡಿದ್ದ ವಿಡೀಯೋ ವೈರಲ್‌ ಆಗಿದೆ.

ಸತ್ಯ ದೇಶವನ್ನು ಹೊಡೆಯುವ ಮಾತನ್ನೂ ಯಾರೂ ಹೇಳಬಾರದು. ಇದು ತಪ್ಪು. ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದ ಆರೋಪದಲ್ಲಿ ಬಂಧನ ಮಾಡಲಾಗುತ್ತದೆ. ಆದ್ರೆ 40 ನಿಮಿಷ 46 ಸೆಕಂಡ್‌ ಮಾತನಾಡಿರುವ ಶರ್ಜೀಲ್‌, ದೇಶದಲ್ಲಿ ಮುಸಲ್ಮಾನರನ್ನು ಬಳಸಿಕೊಂಡು ಯಾರೆಲ್ಲಾ ರಾಜಕಾರಣ ಮಾಡ್ತಿದ್ದಾರೆ ಎನ್ನುವ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಾರೆ.

ಇದರಲ್ಲಿ ಕಾಂಗ್ರೆಸ್‌ ಪಕ್ಷ, ಕನ್ಹಯ್ಯ ಕುಮಾರ್‌, ಎಡಪಕ್ಷಗಳು, ಪಶ್ಚಿಮ ಬಂಗಾಳ ರಾಜಕೀಯ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮ ರಾಜಕೀಯಕ್ಕಾಗಿ ಹಿಂದೂ ಮುಸಲ್ಮಾನರನ್ನು ಹೇಗೆ ಬಳಸಿಕೊಳ್ಳುತ್ತಿವೆ ಎಂಬುದನ್ನು ಬಿಡಿಸಿ ಹೇಳಿದ್ದಾರೆ. ಈ ರಾಜಕೀಯದಲ್ಲಿ ಮುಸಲ್ಮಾನರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಜೊತೆಗೆ ಸಂವಿಧಾನ ನಮ್ಮ ದೇಶಕ್ಕೆ ಹೇಗೆ ಬಂತು, 20ನೇ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರೇ ತನ್ನನು ಪ್ಯಾಸಿಸ್ಟ್‌ ಎಂದು ಕರೆದುಕೊಂಡಿದ್ದರು ಎಂಬುದನ್ನೂ ನೆನಪಿಸಿಕೊಂಡಿದ್ದಾರೆ.

ಈ ವೇಳೆ ಈಶಾನ್ಯ ರಾಜ್ಯಗಳನ್ನು ಕಟ್ ಮಾಡಲಿ ಎಂದಿರುವ ಹೇಳಿಕೆ ಶಾರ್ಜೀಲ್‌ಗೆ ಸಂಕಷ್ಟ ತಂದೊಡ್ಡಿದೆ. ಮುಂಬೈನ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದು ಜೆಎನ್‌ಯುವಿನ್ನಲ್ಲಿ ಇತಿಹಾಸ ವಿಚಾರದಲ್ಲಿ ಪಿಹೆಚ್‌ಡಿ ಮಾಡ್ತಿರೋ ಶಾರ್ಜೀಲ್‌, ಇತಿಹಾಸವನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅದರ ನಡುವೆ ಹೇಳಿರುವ ಒಂದು ವಾಕ್ಯದಿಂದ ಬಂಧನಕ್ಕೆ ಒಳಗಾಗಿದ್ದಾರೆ.

ಶಾರ್ಜೀಲ್‌ ಇಮಾಮ್‌ ಬಂಧನದ ಬಳಿಕ ಮಾತನಾಡಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌, ಯಾರೂ ದೇಶವನ್ನೊ ಒಡೆಯುವ ಮಾತನಾಡಬಾರದು. ಶಾರ್ಜೀಲ್‌ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಇದೀಗ ಪ್ರಚೋದನೆ ಆರೋಪದಲ್ಲಿ ಬಂಧನವಾಗಿದೆ. ಆದ್ರೆ, ಬಿಜೆಪಿ ನಾಯಕರು ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಬಂಧಿಸುವ ವಿಚಾರ ಸೈಡಿಗಿರಲಿ, ದೂರು ದಾಖಲಿಸುವ ಕೆಲಸವು ನಡೆಯುತ್ತಿಲ್ಲ. ಇದು ಕೇಂದ್ರ ಸರ್ಕಾರದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತಿದೆ. ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿ ಆಗಿರುವ ಸುರೇಶ್‌ ಅಂಗಡಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದಿದ್ದರು.

ಇನ್ನು ಬಿಜೆಪಿ ನಾಯಕರ ಪ್ರತಿ ಭಾಷಣದಲ್ಲೂ ವಿರೋಧಿಗಳನ್ನು ಪಾಕಿಸ್ತಾನೆಕ್ಕೆ ಓಡಿಸಬೇಕು ಎನ್ನುವ ಮಾತುಗಳು ಕಾಯಕ ಆಗಿ ಸ್ಥಾನ ಪಡೆದಿರುವೆ. ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಇಂಡೋ – ಪಾಕ್‌ ನಡುವಿನ ಹೋರಾಟ ಎಂಬಂತೆ ಬಿಜೆಪಿ ಅಭ್ಯರ್ಥಿ ಕಪಿಲ್‌ ಮಿಶ್ರಾ ಟ್ವೀಟ್ ಮಾಡಿದ್ರು ಮಾಡಿದ್ರು. ಬಳಿಕ ಸಮರ್ಥನೆಯನ್ನೂ ಮಾಡಿಕೊಂಡಿದ್ರು.

ಆದ್ರೆ ಅವರನ್ನು ಇಲ್ಲೀವರೆಗೂ ಬಂಧಿಸುವ ಕೆಲಸ ಮಾಡಲಿಲ್ಲ. ಕೇವಲ ಚುನಾವಣಾ ಆಯೋಗ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಮಾಡಿತ್ತು. ಆ ಬಳಿಕ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಷ್ಟೆ. ಇದರ ಜೊತೆಗೆ ಕೇಂದ್ರದ ಮತ್ತೋರ್ವ ಸಚಿವ ಅನುರಾಗ್‌ ಠಾಕೂರ್‌, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಚುನಾವಣಾ ಪ್ರಚಾರದ ವೇಳೆ ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ.

ಆದ್ರೆ ಚುನಾವಣಾ ಆಯೋಗ ಶೋಕಾಸ್‌ ನೋಟಿಸ್‌ ಕೊಟ್ಟು ಪ್ರತಿಕ್ರಿಯೆ ಕೇಳಿದೆ. ಗುರುವಾರ ಮಧ್ಯಾಹ್ನ 12ರೊಳಗಾಗಿ ಪ್ರತಿಕ್ರಿಯೆ ನೀಡದಿದ್ದರೆ, ಚುನಾವಣಾ ಆಯೋಗ ಏಕಪಕ್ಷೀಯವಾಗಿ ತನ್ನ ನಿರ್ಧಾರ ಪ್ರಕಟಿಸುವ ಸೂಚನೆ ಕೊಟ್ಟಿದೆ.

ಆದ್ರೆ ವಿಚಾರ ಅದಲ್ಲ. ಓರ್ವ ಬಿಜೆಪಿ ಅಭ್ಯರ್ಥಿ ಕಪಿಲ್‌ ಮಿಶ್ರಾ, ದೆಹಲಿಒಂದು ಚುನಾವಣೆಯನ್ನು ಭಾರತ – ಪಾಕಿಸ್ತಾನ ಯುದ್ಧಕ್ಕೆ ಹೋಲಿಕೆ ಮಾಡ್ತಾರೆ. ಮತ್ತೋರ್ವ ಸಚಿವ ಅನುರಾಗ್‌ ಠಾಕೂರ್‌, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ನೆರೆದಿದ್ದ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡ್ತಾರೆ. ಹಾಗಿದ್ರೆ ಈ ಹೇಳಿಕೆಗಳೆಲ್ಲವೂ ದೇಶದ್ರೋಹ ಅಥವಾ ಪ್ರಚೋದನೆ ರೀತಿ ಕಾಣಿಸುವುದಿಲ್ಲವೇ..? ಕೇವಲ ಮೂರನೇ ವ್ಯಕ್ತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕೇಸ್‌ ಬುಕ್‌ ಮಾಡುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮಾಡುತ್ತಿದ್ಯಾ ಅನ್ನೋ ಅನುಮಾನ ಕೂಡ ವ್ಯಕ್ತವಾಗ್ತಿದೆ.

ಜೆಎನ್‌ಯು ಸಂಶೋಧನಾ ವಿದ್ಯರ್ಥಿ ಶಾರ್ಜೀಲ್‌ ಇಮಾಮ್‌ ಹೇಳಿಕೆ ಪ್ರಚೋದನೆ ಮಾಡಿದ್ದಾರೆ ಎಂದು ಅರೆಸ್ಟ್‌ ಮಾಡುವ ಪೊಲೀಸರು ಬಿಜೆಪಿ ನಾಯಕರಾದ ಕಪಿಲ್‌ ಮಿಶ್ರಾ, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮೇಲೆ ಯಾಕೆ ಪ್ರಕರಣ ದಾಖಲಿಸಿ ಬಂಧನ ಮಾಡುವ ತಾಕತ್ತು ತೋರಿಸುತ್ತಿಲ್ಲ ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಲ್ಲಿ ಮನೆ ಮಾಡಿದೆ. ಈ ಪ್ರಕರಣದಲ್ಲಿ ಶಾರ್ಜೀಲ್‌ ಬೆಂಬಲಕ್ಕೆ ಯಾವುದೇ ರಾಜಕೀಯ ಪಕ್ಷವು ಬರುವುದಿಲ್ಲ. ಕಾರಣ ಎಂದರೆ ಆತ ಎಲ್ಲಾ ರಾಜಕೀಯ ಪಕ್ಷಗಳನ್ನೂ ಟೀಕಿಸಿದ್ದಾನೆ.

ಇದೆಲ್ಲವನ್ನೂ ನೋಡಿದಾಗ ಕೊನೆಯಲ್ಲಿ ಎದುರಾಗುವ ಪ್ರಶ್ನೆ ಅಂದ್ರೆ ದೇಶದ್ರೋಹ ಅಂದ್ರೇನು..? ಪ್ರಚೋದನೆ ಯಾವುದು..? ಬಿಜೆಪಿ ನಾಯಕರನ್ನು ಪ್ರಚೋದನೆಯಲ್ಲ, ಬೇರೆಯವರು ಮಾಡಿದ್ರೆ ಪ್ರಚೋದನೆ ಹೇಗಾಗುತ್ತೆ ಎನ್ನುವ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಕೇಂದ್ರ ಸರ್ಕಾರ ಧಮನಕಾರಿ ನೀತಿಯಿಂದ ಹತ್ತಿಕ್ಕುವ ಕೆಲಸ ಮಾಡ್ತಿದ್ಯಾ ಅನ್ನೋ ಸಣ್ಣ ಅನುಮಾನ ಸುಳಿದಾಡುತ್ತದೆ.

Tags: “historical” injustices“old promise”Citizenship Amendment ActModi Governmentneighbouring countriesReligious Minoritiesಐತಿಹಾಸಿಕ ಅನ್ಯಾಯಧಾರ್ಮಿಕ ಅಲ್ಪಸಂಖ್ಯಾತರುನೆರೆ ದೇಶಗಳುಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಮೋದಿ ಸರ್ಕಾರಹಳೆಯ ಭರವಸೆ
Previous Post

ಬಜೆಟ್‌ 2020: ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಸೇನಾ ಪಡೆಗಳು 

Next Post

ಗದಗ್‌ನ 7 ವರ್ಷದ ಬಾಲಕಿಗೆ ಸಿಕ್ಕಿತು ಡಾಕ್ಟರೇಟ್

Related Posts

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ
Top Story

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

by ಪ್ರತಿಧ್ವನಿ
November 19, 2025
0

ನವದೆಹಲಿ: ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 108ನೇ ಜನ್ಮದಿನದ ಅಂಗವಾಗಿ ಕಾಂಗ್ರೆಸ್‌ ನಾಯಕರು ನವದೆಹಲಿಯ ರಾಜ್ ಘಾಟ್‌ನಲ್ಲಿರುವ ಶಕ್ತಿ ಸ್ಥಳಕ್ಕೆ ಭೇಟಿ ನೀಡಿದರು....

Read moreDetails

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025
Next Post
ಗದಗ್‌ನ 7 ವರ್ಷದ ಬಾಲಕಿಗೆ ಸಿಕ್ಕಿತು ಡಾಕ್ಟರೇಟ್

ಗದಗ್‌ನ 7 ವರ್ಷದ ಬಾಲಕಿಗೆ ಸಿಕ್ಕಿತು ಡಾಕ್ಟರೇಟ್

Please login to join discussion

Recent News

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

November 19, 2025
ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada