2014ರಲ್ಲಿ ಬಹುಮತದೊಂದಿಗೆ ಆಯ್ಕೆಯಾಗಿ ಪ್ರಧಾನಿ ಗದ್ದುಗೆ ಏರಿದ ಮೋದಿ 2019 ರಲ್ಲಿ ಎರಡನೇ ಬಾರಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿ ಮತ್ತೆ ಪ್ರಧಾನಿಯಾದರು. ಪ್ರಧಾನಿಯಾಗಿ ಮೊದಲನೆ ಅವಧಿಯಲ್ಲಿ ಸುಧಾರಣೆಯ ಹೆಸರಲ್ಲಿ ನೋಟ್‌ಬ್ಯಾನ್, ಜಿಎಸ್‌ಟಿ ಮುಂತಾದ ಅವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತಂದು ಭಾರತದ ಆರ್ಥಿಕತೆಗೆ ದೊಡ್ಡ ನಷ್ಟವನ್ನು ತಂದಿಟ್ಟರು.
ಎರಡನೇ ಅವಧಿಯಲ್ಲಿ ಜನರ ಭಾವನೆಗಳೊಂದಿಗೆ ಆಟವಾಡಿದ ಮೋದಿ ಸರ್ಕಾರ ಬಹುಸಂಖ್ಯಾತರ ಓಲೈಕೆಗಾಗಿ ತ್ರಿಪಲ್ ತಲಾಖ್ ನಿಷೇಧ, ಕಾಶ್ಮೀರ 370 ವಿಧಿ ರದ್ದು ಹಾಗೂ ಪೌರತ್ವ ಕಾಯ್ದೆ ಮುಂತಾದವುಗಳನ್ನು ಜಾರಿಗೆ ತಂದದ್ದು ಭಾರತದಲ್ಲಿ ಪ್ರಕ್ಷುಬ್ಧ ಸ್ಥಿತಿಯನ್ನು ಹುಟ್ಟು ಹಾಕಿತ್ತು.
ಎರಡನೇ ಅವಧಿಯಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದೊಡನೆ ದೇಶದಲ್ಲಿ ಅಕ್ಷರಶ ಪ್ರಕ್ಷುಬ್ಧತೆ ತಲೆದೋರಿತು. ಇದರ ಬೆನ್ನಿಗೆ ಅಸಂಖ್ಯಾತ ನಾಗರಿಕ ಪ್ರತಿಭಟನೆ, ಸರ್ಕಾರಿ ಪ್ರಾಯೋಜಿತ ಗಲಭೆ, ಪೋಲಿಸ್ ಗೋಲಿಬಾರುಗಳು ಸರ್ವೇ ಸಾಮಾನ್ಯವಾಗಿಬಿಟ್ಟಿತು.
ಸಿಎಎ ಸುತ್ತ ಜರುಗಿದ ಘಟನೆಯನ್ನು ʼಪ್ರತಿಧ್ವನಿʼ ಪತ್ರಿಕಾ ಮಾಧ್ಯಮದ ಜವಾಬ್ದಾರಿ ಅರಿತು ನಿಷ್ಪಕ್ಷಪಾತವಾಗಿ ವರದಿ ಮಾಡಿ ಓದುಗರ ಮುಂದೆಯಿಟ್ಟಿದೆ. ಅವುಗಳಲ್ಲಿ ಕೆಲವು ಮುಖ್ಯ ವರದಿಗಳ ಕೊಂಡಿಯನ್ನು ಕೆಳಗೆ ಕೊಟ್ಟಿದ್ದೇವೆ.
ಎನ್ಆರ್‌ಸಿ ಅನ್ಯಾಯ: ಒಂದು ಲಕ್ಷಕ್ಕೂ ಹೆಚ್ಚು ಗೋರ್ಖಾ ಸಮುದಾಯ ಹೊರಗೆ
ಪಟ್ಟಿಯಿಂದ ಹೊರಗುಳಿದಿರುವವರಲ್ಲಿ ಖ್ಯಾತನಾಮರೂ ಸೇರಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದುರ್ಗಾ ಖಾತಿವಾಡ, ಸ್ವಾತಂತ್ರ್ಯ ಹೋರಾಟಗಾರ ಛಬಿಲಾಲ್ ಉಪಾಧ್ಯಾಯರ ಕುಟುಂಬವೂ ಹೊರಗೆ.
ಪೌರತ್ವ ಕಾಯಿದೆ ತಿದ್ದುಪಡಿ ಮುಸ್ಲಿಮರ ಹಣಿಯುವ ಅಸ್ತ್ರವೇ?
ಇದು ಕೇವಲ ಅಕ್ರಮ ಮುಸ್ಲಿಂ ವಲಸೆಗಾರರ ಪ್ರಶ್ನೆಗೆ ಸೀಮಿತವಾಗಿ ಉಳಿಯುವುದಿಲ್ಲ. ಅಕ್ರಮ ವಲಸೆಕೋರರ ನೆವದಲ್ಲಿ ಎನ್.ಆರ್.ಸಿ ಮತ್ತು ಪೌರತ್ವ ತಿದ್ದುಪಡಿ ಕ್ರಮವು ಭಾರತದ ಮುಸ್ಲಿಂ ಪೌರರ ತಲೆ ಮೇಲೆ ಅಸುರಕ್ಷತೆಯ ಕತ್ತಿಯಾಗಿ ನೇತಾಡಲಿದೆ.
ಸಿಎಎ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ಅಸಮಾಧಾನ
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಅಂಗೀಕಾರವಾದ ದಿನಗಳಿಂದ ಸಿಎಎವಿರುದ್ಧ ಬರೀ ಭಾರತದಲ್ಲಿ ಮಾತ್ರ ಪ್ರತಿಭಟನೆಗಳು ನಡೆಯುತ್ತಿಲ್ಲ. ಅಮೆರಿಕ, ಬಾಂಗ್ಲಾದೇಶ, ಆಫ್ಗಾನಿಸ್ತಾನಮತ್ತು ಶ್ರೀಲಂಕಾ ದೇಶಗಳು ಅಸಮಾಧಾನ ಹೊರಹಾಕಿವೆ.
ದೆಹಲಿ ಹಿಂಸಾಚಾರ: ಸಿಎಎ ಪರ ಹೋರಾಟ ಎಂದರೆ ಏನು?
ಇದೀಗ ದೆಹಲಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ಸಿಎಎ ಪರ ಹೋರಾಟ ಎಂಬ ಹೆಸರಿನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ, ‘ವಂದೇ ಮಾತರಂ’ ಹೇಳುತ್ತಾ, ಸಿಎಎ ವಿರೋಧಿ ಹೋರಾಟಗಾರರನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರಕ್ಕೆ ಇಳಿದಿರುವುದರ ಹಿಂದಿನ ಉದ್ದೇಶವೇನು? ಸರ್ಕಾರವೇ ಅಧಿಕೃತವಾಗಿ ಕಾಯ್ದೆ ಜಾರಿಗೆ ತರುತ್ತಿರುವಾಗ, ಅದನ್ನು ಬೆಂಬಲಿಸಿ ರಸ್ತೆಗಿಳಿಯುವ ಜರೂರು ಏನಿದೆ?
ದೆಹಲಿ ಗಲಭೆಗೆ ಕಾರಣವಾಯ್ತೆ ಮೋದಿ- ಶಾ ನಡುವಿನ ಪೈಪೋಟಿ?
ಅದು ಪ್ರಧಾನಿ ಮತ್ತು ಗೃಹ ಸಚಿವರ ನಡುವಿನ ವರ್ಚಸ್ಸಿನ ಸಮರವಿರಲಿ ಅಥವಾ ಹಿಂದುತ್ವವಾದ ಮತ್ತು ಮೋದಿಯವರ ಮುತ್ಸದ್ದಿತನ ಸಮದೂಗಿಸುವ ಆರ್ ಎಸ್ ಎಸ್ ಲೆಕ್ಕಾಚಾರವೇ ಇರಲಿ; ದೆಹಲಿ ಗಲಭೆ ಉದ್ದೇಶಿತ ಕಾರ್ಯತಂತ್ರದ ಭಾಗವೆನ್ನುವುದಂತೂ ಈಗ ನಿಜವಾಗುತ್ತಿದೆ.