• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮೋದಿ ಸಾಮರಸ್ಯ ಮಂತ್ರಘೋಷದ ಹಿಂದಿದೆ ಮರಳುಗಾಡಿನ ಒತ್ತಡ!

by
April 28, 2020
in ದೇಶ
0
ಮೋದಿ ಸಾಮರಸ್ಯ ಮಂತ್ರಘೋಷದ ಹಿಂದಿದೆ ಮರಳುಗಾಡಿನ ಒತ್ತಡ!
Share on WhatsAppShare on FacebookShare on Telegram

ಕೋವಿಡ್-19 ಎಂಬ ವೈರಸ್ ಯಾವುದೇ ಜನಾಂಗ, ಧರ್ಮ, ಬಣ್ಣ, ಜಾತಿ, ಮತ, ಭಾಷೆ ಮತ್ತು ಗಡಿಗಳನ್ನು ನೋಡಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಏಕತೆ ಮತ್ತು ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. ಇದು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಕಳೆದ ಭಾನುವಾರ ಮಾಡಿದ್ದ ಒಂದು ಟ್ವೀಟ್‌ನ ಸಾರಾಂಶ.

ಅಸಲಿಗೆ ಇದು ಮೋದಿ ಅವರ ಎಂದಿನ ಮಾಮೂಲಿ ಟ್ವೀಟ್‌ ನಂತೆ ಇರಲಿಲ್ಲ. ಏಕೆಂದರೆ ಇಡೀ ವಿಶ್ವದಲ್ಲಿ ಯಾವ ದೇಶವೂ ವೈರಸ್‌ ಗೆ ಜಾತಿ-ಧರ್ಮದ ಹಣೆಪಟ್ಟಿ ಅಂಟಿಸಿರಲಿಲ್ಲ. ಆದರೆ, ಭಾರತದಲ್ಲಿ ಮಾತ್ರ ಈ ವೈರಸ್ ಗೆ ಧರ್ಮದ ಲೇಬಲ್ ಅಂಟಿಸಲಾಗಿತ್ತು. ʼತಬ್ಲಿಘಿ ವೈರಸ್ʼ, ʼವೈರಸ್ ಜಿಹಾದ್ʼ ಎಂದು ಅಸೂಕ್ಷ್ಮವಾಗಿ ಕರೆಯುವ ಮೂಲಕ ಒಂದು ಕೋಮಿನ ಜನರನ್ನು ಅವಮಾನಿಸಲಾಗಿತ್ತು. ಪ್ರಜಾ ಪ್ರತಿನಿಧಿಗಳು ಸಹ ಹಲವರು ಈ ಕುರಿತು ಟ್ವೀಟ್ ಮಾಡುವ ಮೂಲಕ ಸಮಾಜದಲ್ಲಿ ಪ್ರಚೋದನೆಗೆ ಮುಂದಾಗಿದ್ದರು.

COVID-19 does not see race, religion, colour, caste, creed, language or borders before striking.

Our response and conduct thereafter should attach primacy to unity and brotherhood.

We are in this together: PM @narendramodi

— PMO India (@PMOIndia) April 19, 2020


ಆದರೆ, ಆಗೆಲ್ಲಾ ಇದನ್ನು ಕಂಡೂ ಕಾಣದಂತೆ ಸುಮ್ಮನಿದ್ದ ಪ್ರಧಾನಿ ನರೇಂದ್ರ ಮೋದಿ ಒಂದು ತಿಂಗಳ ನಂತರ ಹೀಗೆ ದಿಢೀರೆಂದು ಕೋಮು ಸೌಹಾರ್ದತೆಯನ್ನು ಸಾರುವ ಟ್ವೀಟ್ ಮಾಡುತ್ತಿದ್ದರೆ ಅಸಲಿಗೆ ಇಡೀ ದೇಶದ ಒಂದು ಗುಂಪಿನ ಜನ ಆಶ್ಚರ್ಯ ವ್ಯಕ್ತಪಡಿಸಿದ್ದು ನಿಜ.

ಆ ಒಂದು ಟ್ವೀಟ್ ಆಶ್ಚರ್ಯ ಮೂಡಿಸಿದ್ದಾದರೂ ಏಕೆ?:

ಭಾರತೀಯ ಜನತಾ ಪಕ್ಷ ಮತ್ತು ಸರ್ಕಾರ ಮೂಲತಃ ಬಹು ಸಂಖ್ಯಾತ ಹಿಂದೂಗಳನ್ನು ಮತಬ್ಯಾಂಕ್ ಆಗಿ ಕ್ರೂಢೀಕರಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಪಕ್ಷ ಎಂಬುದು ಈಗ ಗುಟ್ಟಾಗೇನು ಉಳಿದಿಲ್ಲ. ತಬ್ಲಿಘಿ ಘಟನೆ ನಡೆದ ನಂತರ ಕೆಲವು ಬಲಪಂಥೀಯ ಮುಖ್ಯವಾಹಿನಿ ಮಾಧ್ಯಮಗಳು ಈ ದೇಶದಲ್ಲಿ ಕರೋನಾ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದು ಸುದ್ದಿ ಹಬ್ಬಿಸಿದ್ದವು.

ಇದು ಎರಡು ಕೋಮಿನ ನಡುವಿನ ಅಂತರ ಮತ್ತು ಹಿಂಸಾಚಾರಕ್ಕೂ ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದ ಹಿಂದುತ್ವ ಬೆಂಬಲಿಗರು ವಾಟ್ಸ್ಆ್ಯಪ್ ನಿಂದ ಟ್ವಿಟರ್‌ ವರೆಗೆ ಎಲ್ಲೆಡೆ ಮುಸ್ಲಿಂ ದ್ವೇಷದ ಮಾತುಗಳು, ಮುಸ್ಲಿಂ ವಿರೋಧಿ ಸಂದೇಶಗಳು ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಪ್ರೋತ್ಸಾಹಿಸಿದ್ದರು ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ.

ಕರೋನಾ ರಾಷ್ಟ್ರದಾದ್ಯಂತ ವ್ಯಾಪಿಸಿದ್ದ ಸಂದರ್ಭದಲ್ಲಿ ಸಾಮಾಜಿಕ ಅಂತರದ ಕುರಿತು ಸರ್ಕಾರ ಜನರಲ್ಲಿ ಅರಿವು ಮೂಡಿಸುತ್ತಿತ್ತು. ಆದರೆ, ಅಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿಗಳು ಮುಸ್ಲಿಂ ಸಮುದಾಯದವರು ಸಮಾವೇಶ ನಡೆಸಿದ್ದು ನಿಜಕ್ಕೂ ಅರಿವು ಗೇಡಿತನ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲಿನ ಮುಸ್ಲಿಂ ಮುಖಂಡರಿಗೂ ದೇಶದಲ್ಲಿರುವ ಸುಮಾರು 20 ಕೋಟಿಗೂ ಹೆಚ್ಚು ಮುಸ್ಲಿಮರಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಅಷ್ಟೇ ಅತ್ಯ ಅಲ್ಲವೇ?

ಆದರೆ, ಈ ಸತ್ಯಾಸತ್ಯಗಳ ಹೊರತಾಗಿಯೂ ಈ ಕುರಿತು ಚಿಂತನೆ ನಡೆಸದ ಹಿಂದೂ ಪರ ಸಂಘಟನೆಗಳ ಬೆಂಬಲಿಗರು ʼಮುಸ್ಲಿಂ ವೈರಸ್ʼ ಎಂಬ ವಿಚಾರಕ್ಕೆ ವ್ಯಾಪಕ ಪ್ರಚಾರ ನೀಡಿದ್ದವು. ಟ್ವಿಟರ್‌ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು.

ಪರಿಣಾಮ ಈ ವಿಚಾರ ವಿಶ್ವದಾದ್ಯಂತ ಜನರ ಗಮನ ಸೆಳೆಯಿತು. ವಿಶ್ವದ ಖ್ಯಾತ ʼಟೈಮ್ʼ ಮ್ಯಾಗಜೀನ್, ʼಗಾರ್ಡಿಯನ್ʼ, ʼಜಪಾನ್ ಟೈಮ್ಸ್ʼ ನಿಂದ ʼಅಲ್ ಜಜೀರಾʼವರೆಗೆ ಜಾಗತಿಕ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದವು. ಈ ವರದಿಯಲ್ಲಿ “ಭಾರತ ಮತ್ತು ಕೋವಿಡ್ -19 ಇಸ್ಲಾಮೋಫೋಬಿಯಾ” ಎಂಬ ಶೀರ್ಷಿಕೆಯಲ್ಲಿ ಭಾರತದ ನಡೆಯನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು.

ಕೆಲವು ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಆಂಗ್ಲ ವಾಹಿನಿ ʼಇಂಡಿಯಾ ಟುಡೇʼ ಒಂದು ಸ್ಟಿಂಗ್ ಆಪರೇಷನ್ ಅನ್ನು ಪ್ರಸಾರ ಮಾಡಿತ್ತು. ಕರೋನಾ ವೈರಸ್ ಅನ್ನು ಮುಸ್ಲಿಮರು ಭಾರತದಲ್ಲಿ ಹೇಗೆ ಹರಡುತ್ತಿದ್ದಾರೆ? ಎಂಬುದು ಆ ಒಟ್ಟಾರೆ ಕಾರ್ಯಕ್ರಮದ ಉದ್ದೇಶ. ಇದೇ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಇಂಡಿಯಾ ಟುಡೇ ಸುದ್ದಿ ನಿರೂಪಕ ರಾಹುಲ್ ಕನ್ವಾಲ್ ಅವರಿಗೆ ಖ್ಯಾತ ಇತಿಹಾಸಕಾರ ಯುವೆಲ್ ನೋವೆಲ್ ಹರಾರಿ ನೀಡಿರುವ ಪ್ರತಿಕ್ರಿಯೆ ಮೆಚ್ಚುಗೆ ಸೂಚಿಸುವಂತದ್ದು ಮತ್ತು ಎಲ್ಲಾ ಭಾರತೀಯರು ಗಮನಿಸುವಂತದ್ದಾಗಿದೆ.

“ಭಾರತದಲ್ಲಿ ಸಾಂಕ್ರಾಮಿಕ ವೈರಸ್ ರೋಗ ಹರಡಲು ಮುಸ್ಲಿಂ ಅಲ್ಪಸಂಖ್ಯಾತರು ಕಾರಣ ಎಂದು ದೂಷಿಸುತ್ತಿದ್ದಾರೆಂದು ನಾನು ಕೇಳಿದ್ದೇನೆ. ಆದರೆ, ಇಂತಹ ದೂಷಣೆಗಳು ಉದ್ದೇಶಪೂರ್ವಕ ಭಯೋತ್ಪಾದನೆಯ ಕೃತ್ಯ. ಇದು ಸಂಪೂರ್ಣ ಅಸಂಬದ್ಧ ಮತ್ತು ಅತ್ಯಂತ ಅಪಾಯಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ದ್ವೇಷಕ್ಕಿಂತ ಪ್ರೀತಿ ಮತ್ತು ಒಗ್ಗಟ್ಟು ಅಗತ್ಯ. ಜನರ ನಡುವೆ ಪ್ರೀತಿ ಬೆಳೆಯಬೇಕು”ಎಂದು ಯುವೆಲ್ ನೋವೆಲ್ ಹರಾರಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಕ್ಕೆ ಸಂಬಂಧಿಸಿದ ಅಮೆರಿಕ ಒಂದು ಆಯೋಗ (The United States Commission on International Religious Freedom) ಇತ್ತೀಚೆಗೆ ಭಾರತದಲ್ಲಿ ಕರೋನಾ ವೈರಸ್ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಕೋಮುದ್ವೇಷ ಹರಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಗುಜರಾತ್ ರಾಜ್ಯದ ಆಸ್ಪತ್ರೆಯೊಂದರಲ್ಲಿ ಮುಸ್ಲಿಂ ಸಮುದಾಯದ ರೋಗಿಗಳನ್ನು ಪ್ರತ್ಯೇಕಿಸುವ ಮೂಲಕ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿತ್ತು. ಆದರೆ, ಈ ವರದಿ ಸುಳ್ಳು ಎಂದು ಗುಜರಾತ್ ಸರ್ಕಾರ ತಳ್ಳಿಹಾಕಿತ್ತು.

ʼಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ʼ ಈ ರೋಗ ಹರಡುವಿಕೆಗೆ ಮುಸ್ಲಿಮರನ್ನು ಕಳಂಕಿತಗೊಳಿಸುವ ಮತ್ತು ದೂಷಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಗುಜರಾತ್ ನ ಆಸ್ಪತ್ರೆಯೊಂದು ಕೋವಿಡ್ -19 ವಾರ್ಡ್‌ಗಳಲ್ಲಿನ ನಂಬಿಕೆಯಿಂದ ರೋಗಿಗಳನ್ನು ವಿಭಜಿಸುತ್ತಿದೆ ಎಂಬ ವರದಿಯನ್ನು ಉಲ್ಲೇಖಿಸಿದೆ. ಗುಜರಾತ್ ಸರ್ಕಾರ ನಂತರ ವರದಿ ಸುಳ್ಳು ಎಂದು ಹೇಳಿಕೊಂಡಿದೆ.

ಭಾರತದಲ್ಲಿ ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೋಮು ದ್ವೇಷದ ಕುರಿತು ಕಳವಳ ವ್ಯಕ್ತಪಡಿಸಿರುವ ಇಸ್ಲಾಮಿಕ್ ಸಹಕಾರ ಸಂಘಟನೆ, “ರಾಜಕೀಯ ಮತ್ತು ಮುಖ್ಯವಾಹಿನಿ ಮಾಧ್ಯಮ ವಲಯಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ವಿರೋಧಿ ಭಾವನೆಗಳನ್ನು, ಇಸ್ಲಾಮೋಫೋಬಿಯಾಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಭಾರತೀಯ ಮುಸ್ಲಿಂ ಅಲ್ಪಸಂಖ್ಯಾತರು ಕರೋನಾ ವೈರಸ್ ಹರಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ” ಎಂದು ಕಿಡಿಕಾರಿತ್ತು.

ಭಾರತದ ಮುಸ್ಲಿಂ ಸಮುದಾಯ ಕೇಂದ್ರ ಸರ್ಕಾರದ ವಿರುದ್ಧ ಹೀಗೊಂದು ಹೇಳಿಕೆ ನೀಡಿದ ಬೆನ್ನಿಗೆ ಎಚ್ಚೆತ್ತಿದ್ದ ಕೇಂದ್ರ ಸರ್ಕಾರ ಕೇಂದ್ರ ಕ್ಯಾಬಿನೆಟ್ನ ಏಕೈಕ ಮುಸ್ಲಿಂ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮೂಲಕ ಮುಸ್ಲಿಮರಿಗೆ ಭಾರತವು “ಸ್ವರ್ಗ” ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿಸಿತ್ತು. ಆದರೆ, ಕೇಂದ್ರ ಸರ್ಕಾರ ಹೀಗೊಂದು ಹೇಳಿಕೆ ಬಿಡುಗಡೆ ಮಾಡುವ ಕೇವಲ 2 ತಿಂಗಳ ಹಿಂದೆ ದೆಹಲಿ ವ್ಯಾಪಕ ಕೋಮು ಗಲಭೆಗೆ ಸಾಕ್ಷಿಯಾಗಿತ್ತು. ಅಲ್ಲದೆ, ಸತತ 6 ತಿಂಗಳಿಂದ ಮುಸ್ಲಿಂ ಸಮುದಾಯದವರು ದೆಹಲಿಯಲ್ಲಿ ಚರ್ಚಾಸ್ಪದ ಸಿಎಎ ಕಾನೂನಿನ ವಿರುದ್ದ ನಿರಂತರ ಹೋರಾಟ ನಡೆಸಿದ್ದರು ಎಂಬುದು ಉಲ್ಲೇಖಾರ್ಹ.

India is heaven for minorities and Muslims. Their social, economic & religious rights are secure here. If someone is saying this out of a prejudiced mindset then they must look at the ground reality of this country & accept it: Union Minister Mukhtar Abbas Naqvi on OIC's remarks pic.twitter.com/BmQERMJUMz

— ANI (@ANI) April 21, 2020


ADVERTISEMENT

ಭಾರತ ಸರ್ಕಾರದಿಂದ ಈ ಹಾನಿ-ನಿಯಂತ್ರಣ ಪ್ರಯತ್ನಗಳ ಹೊರತಾಗಿಯೂ, ಆಡಳಿತಾರೂಢ ಬಿಜೆಪಿ ಪಕ್ಷದ ಅನೇಕ ಬೆಂಬಲಿಗರು ಇಸ್ಲಾಮೋಫೋಬಿಯಾ ದ್ವೇಷದ ಮಾತು ಮತ್ತು ಪೂರ್ವಾಗ್ರಹವನ್ನು ದೇಶದಾದ್ಯಂತ ಹರಡುವ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸಿವೆ. ಆದರೆ, ಇಷ್ಟು ದಿನ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಕೋಮುದ್ವೇಷ ಇತ್ತೀಚೆಗೆ 7ಮಿಲಿಯನ್ ಭಾರತೀಯರು ನೆಲೆಸಿರುವ ಅರೇಬಿಯನ್ ಕೊಲ್ಲಿ ರಾಷ್ಟ್ರಕ್ಕೂ ವ್ಯಾಪಿಸಿರುವುದು ವಿಪರ್ಯಾಸವೇ ಸರಿ.

ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್. 3 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿದೇಶಿ ವಿನಿಮಯ ವಾರ್ಷಿಕ ಸುಮಾರು 2 ಲಕ್ಷ ಕೋಟಿಗೂ ಅಧಿಕ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದ ಇಸ್ಲಾಮೋಫೋಬಿಕ್ ಸಂದೇಶಗಳಿಗಾಗಿ ಕನಿಷ್ಠ ಆರು ಭಾರತೀಯ ವಲಸಿಗರು ಕೊಲ್ಲಿ ರಾಷ್ಟ್ರದಲ್ಲಿ ತೊಂದರೆಗೆ ಸಿಲುಕಿದ್ದಾರೆ. ಅವರನ್ನು ಅಧಿಕಾರಿಗಳ ಗಮನಕ್ಕೆ ತಂದ ನಂತರ, ಹೆಚ್ಚಾಗಿ ಯುನೈಟೆಡ್ ಅರಬ್ ಎಮಿರೇಟ್ಸ್, ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು 3 ದಶಲಕ್ಷಕ್ಕೂ ಹೆಚ್ಚು ಭಾರತೀಯ ನಾಗರಿಕರಿಗೆ ನೆಲೆಯಾಗಿದೆ.

ಇದು ಟ್ವಿಟ್ಟರ್ ಕದನಗಳಿಗೆ ಕಾರಣವಾಗಿದೆ, ಭಾರತೀಯರು ಕೊಲ್ಲಿಯಲ್ಲಿ ದ್ವೇಷದ ಭಾಷಣವನ್ನು ಪೋಸ್ಟ್ ಮಾಡುವುದನ್ನು ಗುರುತಿಸಲು ಅಭಿಯಾನವನ್ನು ಸ್ಥಾಪಿಸಲಾಗಿದೆ ಮತ್ತು ಅಂತಹ ಪ್ರಯತ್ನಗಳನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ ಎಂದು ಭಾರತೀಯ ಬಲಪಂಥೀಯರ ಆರೋಪಗಳನ್ನು ಎದುರಿಸುತ್ತಿದೆ.

ಈ ಎಲ್ಲದರ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್‌ ಗಳು ಇನ್ನಷ್ಟು ಗಮನ ಸೆಳೆದವು. ಏಕೆಂದರೆ ಐದು ವರ್ಷಗಳ ಹಿಂದೆ ಅವರು ಕೆನಡಾದ ಬರಹಗಾರ ತಾರೆಕ್ ಫತಾಹ್ ಅವರ ಕಾಮೆಂಟ್ ಅನ್ನು ಟ್ವೀಟ್ ಮಾಡಿದ್ದಾರೆ, ಇದು ಪಿತೂರಿ ಸಿದ್ಧಾಂತಗಳು ಮತ್ತು ಹಿಂದುತ್ವ ವಲಯಗಳಲ್ಲಿ ಜನಪ್ರಿಯವಾಗಿರುವ ತಪ್ಪು ಮಾಹಿತಿಗಾಗಿ ಹೆಸರುವಾಸಿಯಾಗಿದೆ .

ಕೊಲ್ಲಿ ರಾಷ್ಟ್ರಗಳು ಅಂತಹ ತಾರತಮ್ಯದಿಂದ ಅಷ್ಟೇನೂ ನಿರೋಧಕವಾಗಿಲ್ಲದಿದ್ದರೂ – ಇತ್ತೀಚಿನ ಘಟನೆಯೊಂದರಲ್ಲಿ ಯುನೈಟೆಡ್ ಅರಬ್ ಎಮಿರೇಟ್ ನ ಪ್ರಸಿದ್ಧ ವ್ಯಕ್ತಿಯೊಬ್ಬರು ದಕ್ಷಿಣ ಏಷ್ಯಾದ ವಲಸೆ ಕಾರ್ಮಿಕರನ್ನು ಗಡೀಪಾರು ಮಾಡುವಂತೆ ಕುವೈತ್ ನಟಿಯೊಬ್ಬರ ಕರೆಯನ್ನು ಸಮರ್ಥಿಸಿಕೊಂಡರು. ಭಾರತೀಯರ ಇಸ್ಲಾಮೋಫೋಬಿಕ್ ಟೀಕೆಗಳು ಭಾರತೀಯ ರಾಜತಾಂತ್ರಿಕ ಸಂಬಂಧಗಳಿಗೆ ಒತ್ತಡವನ್ನುಂಟು ಮಾಡಿದೆ.

Tags: ‌ ಗಲ್ಫ್‌ ರಾಷ್ಟ್ರಗಳ ಒಕ್ಕೂಟCovid 19islamophobiaOICPM ModiTejasvi SuryaUAEಇಸ್ಲಾಮೋಫೋಬಿಯಾಕೋವಿಡ್-19ತೇಜಸ್ವಿ ಸೂರ್ಯಪ್ರಧಾನಿ ಮೋದಿಯುಎಇ
Previous Post

ಆಲ್ಕೋಹಾಲ್‌ ಕುಡಿದ್ರೆ ಕರೋನಾ ದೂರವಾಗಲ್ಲ, ಸಾವು ಹತ್ತಿರವಾಗುತ್ತೆ!

Next Post

ಅಬಕಾರಿ ಪ್ರಕರಣದಲ್ಲಿ ಆರಕ್ಷಕರ ಹಲವು ಅವತಾರ..!

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಅಬಕಾರಿ ಪ್ರಕರಣದಲ್ಲಿ ಆರಕ್ಷಕರ ಹಲವು ಅವತಾರ..!

ಅಬಕಾರಿ ಪ್ರಕರಣದಲ್ಲಿ ಆರಕ್ಷಕರ ಹಲವು ಅವತಾರ..!

Please login to join discussion

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ
Top Story

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

by ಪ್ರತಿಧ್ವನಿ
October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 24, 2025
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ
Top Story

ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ

by ಪ್ರತಿಧ್ವನಿ
October 24, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada