ಕೋವಿಡ್ 19 ಎಂಬ ಮಹಾಮಾರಿ ಇಡೀ ದೇಶವನ್ನೆ ತಲ್ಲಣಗೊಳಿಸಿದೆ. ದೇಶದ ಆರ್ಥಿಕ
ಸ್ಥಿತಿ ಹದಗೆಟ್ಟು ಹೋಗಿದೆ. ಲಕ್ಷಾಮತರ ಉದ್ಯೋಗಗಳು ನಷ್ಟವಾಗಿವೆ. ಕೋವಿಡ್ ಸೋಂಕು ದೇಶದಿಂದ ದೂರಾಗುತ್ತಿದೆ ಜತೆಗೇ ಸೋಂಕಿನ ಲಸಿಕೆಗಳು ಬರಲಿವೆ. ದೇಶದ ತೊಂದರೆ ಮುಗಿಯಿತು ಎಂದು ಈಗ ಪ್ರಧಾಣ ಮಂತ್ರಿ ನರೇಂದ್ರ ಮೋದಿ ಅವರು ಸುಮ್ಮನೇ ಕೂರುವಂತಿಲ್ಲ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಭಾರತವು ಅನೇಕ ಕ್ಷೇತ್ರಗಳಲ್ಲಿ ಜಾಗತಿಕ ಸೂಚ್ಯಂಕವು ಕೆಳಗೆ ಕುಸಿದಿದೆ. ಈಗ ಏಳನೇ ವರ್ಷದಲ್ಲಿ ಸರ್ಕಾರದ ಮೌಲ್ಯಮಾಪನ ಮಾಡಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯು ಮೂರೂವರೆ ವರ್ಷಗಳ ದೂರದಲ್ಲಿದೆ ಮೋದಿ ಮತ್ತು ಅವರ ಪಕ್ಷವು ಪ್ರತಿಯೊಂದು ಚುನಾವಣೆಯಲ್ಲೂ ಸಾಧನೆ ಮಾಡುತಿದ್ದಾರೆ. ಆದರೆ ಜನಪ್ರಿಯತೆಗಿಂತ ದೇಶದ ಅಗತ್ಯ ಭಿನ್ನವಾಗಿದೆ.
ಇಂದು ದೇಶಕ್ಕೆ ಉತ್ತಮ ನಾಯಕತ್ವ ಹಿಂದೆಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಏಕೆಂದರೆ ವಿವಿಧ ರಂಗಗಳಲ್ಲಿ ದೆಶದ ಶ್ರೇಯಾಂಕವು ಕುಸಿಯುತ್ತ ಸಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ನೆರೆಯ ಬಾಂಗ್ಲಾ ದೇಶ ಮತ್ತು ಪಾಕಿಸ್ತಾನಕ್ಕಿಂತಲೂ ನಾವು ಕೆಳಮಟ್ಟದಲ್ಲಿದ್ದೇವೆ. ಉದಾಹರಣೆಗೆ ಮಾನವ ಹಕ್ಕುಗಳ ಸ್ವಾತಂತ್ರ್ಯದ ವಿಚಾರದಲ್ಲಿ ವಿಶ್ವದಲ್ಲಿ ಭಾರತವು ಮೊದಲು ಇದ್ದ 94 ನೇ ಸ್ಥಾನದಿಂದ 111 ನೇ ಸ್ಥಾನಕ್ಕೆ ಕುಸಿದಿದೆ. ಇದೆಲ್ಲ ಎಡಪಂಥೀಯ ಸಂಘಟನೆಗಳ ರೇಟಿಂಗ್ ಎಂದು ತಳ್ಳಿ ಹಾಕುವಂತೆಯೂ ಇಲ್ಲ. ಏಕೆಂದರೆ ಈ ಸಮೀಕ್ಷಾ ವರದಿಯನ್ನು ಸಿದ್ದಪಡಿಸಿರುವುದು ವಾಷಿಂಗ್ಟನ್ನ ಕ್ಯಾಟೊ ಇನ್ಸ್ಟಿಟ್ಯೂಟ್ ಆಗಿದೆ. ಈ ಸಂಸ್ಥೆಯ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು ಸ್ವಾಮಿನಾಥನ್ ಅಂಕ್ಲೆಸೇರಿಯಾ ಅಯ್ಯರ್ ಆಗಿದ್ದು ಅವರು ಈಗಾಗಲೇ ದೇಶದ ಕೃಷಿ ಸುಧಾರಣಾ ಕಾನೂನುಗಳನ್ನು ಬೆಂಬಲಿಸಿದ್ದಾರೆ,
ಮಾನವ ಸ್ವಾತಂತ್ರ್ಯ ಸೂಚ್ಯಂಕವು ಒಟ್ಟು 76 ವಿವಿಧ ಪ್ಯಾರಾಮೀಟರ್ ಗಳನ್ನು ಆಧರಿಸಿ ನೀಡಲಾಗುತ್ತದೆ. ಇದರಲ್ಲಿ ಮುಖ್ಯವಾಹಿನಿಯ ಅಂಶಗಳಾದ ಕಾನೂನಿನ ನಿಯಮ, ಭದ್ರತೆ ಮತ್ತು ಸುರಕ್ಷತೆ, ಧರ್ಮದ ಸ್ವಾತಂತ್ರ್ಯಗಳು, ಸಂಘ ಮತ್ತು ನಾಗರಿಕ ಸಮಾಜ ಚಟುವಟಿಕೆ, ಅಭಿವ್ಯಕ್ತಿ ಮತ್ತು ಮಾಹಿತಿ, ನಿಯಂತ್ರಣದ ಗುಣಮಟ್ಟ ಮತ್ತು ಸರ್ಕಾರದ ಗಾತ್ರವನ್ನೂ ಪರಿಗಣಿಸಲಾಗುತ್ತದೆ. ದೇಶವು ಉನ್ನತ ಶ್ರೇಯಾಂಕದಲ್ಲಿದೆ ಎಂದು ಯಾರೂ ಭಾವಿಸಿರದಿದ್ದರೂ ಉತ್ತಮ ಶ್ರೇಯಾಂಕ ಎಲ್ಲರ ನಿರೀಕ್ಷೆಯೂ ಆಗಿತ್ತು. ಆದರೆ ವ್ಯತಿರಿಕ್ತವಾಗಿ ಕುಸಿದಿದೆ. ಬ್ರೆಜಿಲ್ ಮೆಕ್ಸಿಕೋ, ಕಾಂಬೋಡಿಯಾ, ಬೊಲಿವಿಯಾ, ನೇಪಾಳ ನಮಗಿಂತ 19 ಸ್ಥಾನ ಮುಂದಿದ್ದು 92 ನೇ ಶ್ರೇಯಾಂಕದಲ್ಲಿವೆ. ನೆರೆಯ ಶ್ರೀಲಂಕಾ 94 ನೇ ಸ್ಥಾನದಲ್ಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಾಂಬಿಯಾ, ಹೈಟಿ , ಲೆಬನಾನ್ ಮತ್ತು ಲುಕಾಶೆಂಕೊ ಅವರ ಬೆಲಾರಸ್, ಸೆನೆಗಲ್, ಮೊಜಾಂಬಿಕ್, ಲೆಸೊಥೊ, ಉಗಾಂಡಾ, ಮಲಾವಿ, ಮಡಗಾಸ್ಕರ್, ಭೂತಾನ್ ನಮಗಿಂಥ ಖೋಂಚ ಮುಂದೆ 108 ನೇ ಶ್ರೇಯಾಂಕದಲ್ಲಿವೆ. ಆದರೆ ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳಿಗಿಂತ ನಾವು ಮುಂದಿದ್ದೇವೆ ಎಂದು ತೃಪ್ತಿಪಟ್ಟುಕೊಳ್ಳಲು ಸಾದ್ಯವಿಲ್ಲ. ಕಜಕಿಸ್ಥಾನದಂತಹ ದೇಶವು ನಮಗಿಂತ 36 ಸ್ಥಾನ ಮುಂದಿದ್ದು 75 ನೇ ಸ್ಥಾನದಲ್ಲಿದೆ. ಭಾರತದ ಹಿನ್ನಡೆಗೆ ಸಾಂಕ್ರಮಿಕ ರೋಗವು ಕಾರಣವಲ್ಲ. 2008 ರಿಂದ 2012 ರ ವರೆಗ ಭಾರತವು 75 ನೇ ಸ್ಥಾನದಲ್ಲಿತ್ತು. 2015 ರಲ್ಲಿ ಭಾರತ 102 ನೇ ಸ್ಥಾನಕ್ಕೆ ಮತ್ತು 2016 ರಲ್ಲಿ 110 ನೇ ಸ್ಥಾನಕ್ಕೆ ಕುಸಿಯಿತು. ಆಧರೆ 2018 ಕ್ಕೆ 111 ನೇ ಸ್ಥಾನಕ್ಕೆ
ಕುಸಿದಿದೆ. ಈ ರ್ಯಾಂಕಿಂಗ್ ನ್ನು ಎರಡು ವರ್ಷಗಳ ನಂತರ ನೀಡಲಾಗುತ್ತದೆ. ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾದ ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವು ಭಾರತವನ್ನು 79 ರಿಂದ 105 ಕ್ಕೆ ತಳ್ಳಿದೆ ಅಂದರೆ 26 ಸ್ಥಾನಗಳು ಕುಸಿದಿವೆ. ಕೆನಡಾದ ಫ್ರೇಸರ್ ಸಂಸ್ಥೆ ಈ ಸಮೀಕ್ಷೆ ನಡೆಸುತ್ತದೆ. ಅದು ಖಂಡಿತವಾಗಿಯೂ ಎಡಪಂಥೀಯವಲ್ಲ. ಅಕ್ಟೋಬರ್ನಲ್ಲಿ, ಜಾಗತಿಕವಾಗಿ ಪ್ರಜಾಪ್ರಭುತ್ವ ವಾಚ್ಡಾಗ್ ಫ್ರೀಡಂ ಹೌಸ್ ತನ್ನ ಇಂಟರ್ನೆಟ್ ಸ್ವಾತಂತ್ರ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಿತು, ಇಲ್ಲೂ ಭಾರತವು ಸತತ ಮೂರನೇ ವರ್ಷದ ಕುಸಿತವನ್ನು ದಾಖಲಿಸಿದೆ. , ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳನ್ನು ದಾಖಲಿಸಿದೆ.
ವಾರ್ಷಿಕ ಯುಎನ್ಡಿಪಿ ಮಾನವ ಅಭಿವೃದ್ಧಿ ವರದಿಯಲ್ಲೂ ನಾವು ಎರಡು ಸ್ಥಾನ ಕೆಳಗಿಳಿದು 131 ಕ್ಕೆ ಬಂದಿದ್ದೇವೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ನಾವು ಹಿಂದುಳಿದಿದ್ದೇವೆ, ನಮ್ಮ ಶ್ರೇಯಾಂಕಗಳು ಈಗ 130, 129 ಮತ್ತು 131 ಆಗಿವೆ. ಪೂರ್ಣ ಬಹುಮತದೊಂದಿಗೆ ಮೋದಿ ಸರ್ಕಾರದ ಏಳನೇ ವರ್ಷದಲ್ಲಿರುವುದರಿಂದ ನಾವು ಹೆಚ್ಚು ನಿರೀಕ್ಷಿಸಬೇಕು. ಪತ್ರಿಕಾ ಸ್ವಾತಂತ್ರ್ಯದ ಆರ್ಎಸ್ಎಫ್ ಶ್ರೇಯಾಂಕದಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಭಾರತದಲ್ಲಿ ಪತ್ರಿಕಾ ಮಾಧ್ಯಮಗಳು ಕಠಿಣವಾದ ಸವಾಲುಗಳನ್ನು ಹೊಂದಿದ್ದರೂ, ಮ್ಯಾನ್ಮಾರ್, ದಕ್ಷಿಣ ಸುಡಾನ್, ಯುಎಇ, ಶ್ರೀಲಂಕಾ, ಟಾಂಜಾನಿಯಾ ಮತ್ತು ಅಫ್ಘಾನಿಸ್ತಾನವನ್ನು ನಮಗಿಂತ ಮುಂದಿದೆ.
ಈ ದೇಶಗಳಲ್ಲಿ ಪ್ರತೀ ವಾರ ಓರ್ವ ಧೈರ್ಯಶಾಲಿ ಪತ್ರಕರ್ತನನ್ನು ಕೊಲ್ಲಲಾಗುತ್ತದೆ, ಇದಲ್ಲದೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಅಲ್ಪ ಮೇಲಿನ ಸ್ಥಾನಕ್ಕೆ ಏರಿದೆ. ಕಳೆದ ವರ್ಷ 102 ಶ್ರೇಯಾಂಕದಲಿದ್ದ ಭಾರತ ಈ ವರ್ಷ 94 ಸ್ಥಾನದಲ್ಲಿದೆ. ಆದರೆ ಈ ವರ್ಷ ಇಡೀ ಕ್ಷೇತ್ರವು ಈ ವರ್ಷ 117 ರಾಷ್ಟ್ರಗಳಿಂದ 107 ಕ್ಕೆ ಇಳಿದಿದೆ. ಆದರೆ ಹಸಿವಿನ ಸೂಚ್ಯಂಕದಲ್ಲಿ ನೀವು ಖಾಲಿ ಹೊಟ್ಟೆಯಲ್ಲಿ ಮಲಗಲು ಹೋಗುತ್ತೀರೋ ಇಲ್ಲವೋ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವುದಿಲ್ಲ. ಇದು ಹೆಚ್ಚಾಗಿ ಪೌಷ್ಠಿಕಾಂಶದ ಬಗ್ಗೆ ಮಾತ್ರ ಆಗಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ವಿಶ್ವದಲ್ಲೆ ಅತ್ಯಂತ ದೊಡ್ಡ ಆಹಾರ ಭದ್ರತೆ ಕಾರ್ಯಕ್ರಮವನ್ನು ಹೊಂದಿದ್ದರೂ ಪ್ರಗತಿ ಶೂನ್ಯವೇ ಆಗಿದೆ. ಆದರೆ 1998-99ರ ನಂತರ ಮೊದಲ ಬಾರಿಗೆ, ಮಕ್ಕಳ ಅಪೌಷ್ಟಿಕತೆಯ ಕುಸಿತವನ್ನು ಭಾರತ ತಡೆದಿದೆ. ಇದು ಸಮೀಕ್ಷೆಯ ಮೊದಲ ಹಂತವಾಗಿದ್ದು ಕೆಲವು ಪ್ರಮುಖ ರಾಜ್ಯಗಳು ಎರಡನೆಯ ಹಂತದ ಸಮೀಕ್ಷೆಯಲ್ಲಿ ಕಾಣಿಸಿಕೊಳ್ಳಲಿವೆ. ಆದರೆ ಸಮೀಕ್ಷೆಯಲ್ಲಿ ಪ್ರಮುಖ ರಾಜ್ಯಗಳಾದ ಕೇರಳ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪರಿಸಿತಿ ಸಾಕಷ್ಟು ಕೆಟ್ಟದಾಗಿದೆ, ಅಲ್ಲಿ ನಮ್ಮ ಐದು ವರ್ಷದೊಳಗಿನ ಮಕ್ಕಳು ಬೆಳವಣಿಗೆಯ ಕುಂಠಿತ, ಮತ್ತು ಕಡಿಮೆ ಶರೀರ ತೂಕವನ್ನು ಹೊಂದಿರುವುದು ತಿಳಿದುಬಂದಿದೆ. ಆದರೆ ಹೆಚ್ಚಿನ ರಾಜ್ಯಗಳಲ್ಲಿ ಮಕ್ಕಳ ಶರೀರದ ತೂಕ ಮತ್ತು ಸಂಖ್ಯೆ ಹೆಚ್ಚಾಗಿದೆ. ಈಗ, ನಮ್ಮ ಮಕ್ಕಳು ಒಂದೇ ಸಮಯದಲ್ಲಿ ದುರ್ಬಲ ಮತ್ತು ದಪ್ಪವಾಗುವುದು ಹೇಗೆ?

ಪ್ರಧಾನಿ ಮೋದಿಯವರು ತಮ್ಮ ಎಲ್ಲ ಯೋಜನೆಗಳಾದ ಸ್ವಚ್ಚ ಭಾರತ್ ಮಿಷನ್, ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಮುಂತಾದವುಗಳಲ್ಲಿ ಉತ್ಪ್ರೇಕ್ಷಿತ ಅಂಕಿ ಅಂಶಗಳನ್ನು ನೀಡುತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದು ಈಗ ನಿಜವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ, ನಮ್ಮ ಆರ್ಥಿಕ ಬೆಳವಣಿಗೆಯ ದರ ನಿಧಾನವಾಗಿದೆ. ನಮ್ಮ ಜನಸಂಖ್ಯೆಯ ಬಡ ವರ್ಗದ ಕುಟುಂಬಗಳು ಪೌಷ್ಠಿಕ ಆಹಾರಕ್ಕಾಗಿ ಕಡಿಮೆ ವೆಚ್ಚ ಮಾಡುತ್ತಿವೆ. ಹೀಗಿರುವಾಗ ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಅಂಕಿ ಅಂಶಗಳು ಸಂದೇಹಾಸ್ಪದ ಆಗಿದ್ದು ಮೋದಿ ಅವರಿಗೆ ಮಾತ್ರ ಜನಪ್ರಿಯತೆ ತಂದು ಕೊಟ್ಟಿವೆ.









