• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

‘ಮೊದಲು ಇಲ್ಲಿರುವವರಿಗೆ ಅನ್ನ, ಉದ್ಯೋಗ ನೀಡಿ’

by
December 22, 2019
in ಅಭಿಮತ
0
‘ಮೊದಲು ಇಲ್ಲಿರುವವರಿಗೆ ಅನ್ನ
Share on WhatsAppShare on FacebookShare on Telegram

ಪ್ರತಿಧ್ವನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ದೇಶದಲ್ಲಿ ತತ್ ಕ್ಷಣಕ್ಕೆ ಆಗಬೇಕಿರುವ ಕೆಲಸಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ:-

ADVERTISEMENT

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆ ಮತ್ತು ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಇಬ್ಬರು ಮಾತ್ರ ಬಲಿಯಾಗಿಲ್ಲ. ದೇಶದ್ಯಾಂತ ಪ್ರತಿಭಟನೆ ಮಾಡಿ, ಪೋಲಿಸರ ಗುಂಡಿಗೆ ಎಷ್ಟು ಜನ ಬಲಿಯಾಗಿದ್ದಾರೆ ಎಂಬುದನ್ನು ಗಮನಿಸಿದರೆ, ಅದರ ಸಂಖ್ಯೆ ಇನ್ನು ಹೆಚ್ಚಿರುತ್ತದೆ. ಇಲ್ಲಿ ಇಬ್ಬರು ಪ್ರಾಣ ಕಳೆದುಕೊಂಡರು, ಐದು ಜನ ಸತ್ತರು ಎನ್ನುವುದಕ್ಕಿಂತ ಈ ವಿಚಾರ ಪ್ರಾಣ ಕಳೆದುಕೊಂಡಿರುವುದು ಬಹಳ ಘಟನಾವಳಿ. ಆದರೆ ಇದು ದೇಶಾದ್ಯಂತ ಎಲ್ಲರ ಆತಂಕವನ್ನು ಹೆಚ್ಚಿಸುತ್ತಿದೆ. ಕಾನೂನಿ ವಿರುದ್ಧ ಪ್ರತಿಭಟಿಸಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುತ್ತಾ ಹೇಳುತ್ತಿದ್ದೇನೆ ಕೇಳಿ, ತೂಗುಯ್ಯಾಯಲ್ಲಿ ಇಟ್ಟಿರುವ 1.2 ಬಿಲಿಯನ್‌ ಅಥವಾ 1.3 ಬಿಲಿಯನ್‌ನಷ್ಟು ಜನಸಂಖ್ಯೆಯನ್ನು ನೀವು ನಮ್ಮ ನಾಗರಿಕರೋ, ಅಲ್ಲವೋ, ಪೌರತ್ವದ ದಾಖಲೆಗಳು ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಸದಾ ಆತಂಕದ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಈ ಪೌರತ್ವ ತಿದ್ದುಪಡಿ ಕೂನೂನು ಮಾತ್ರ ಮುಖ್ಯವಲ್ಲ. ಇದರ ನಂತರ ಏನು ಬರುತ್ತದೆ ಎನ್ನುವುದು ಕೂಡ ಮುಖ್ಯ. ಅಂದರೆ ಎನ್‌ ಆರ್‌ ಸಿ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳುತ್ತಿರುವುದು ಏನೆಂದರೆ, CAA ನಂತರ ನಾವು ದೇಶಾದ್ಯಂತ ಎನ್‌ಆರ್‌ಸಿ ಯನ್ನು ಜಾರಿಗೊಳಿಸುತ್ತೇವೆ ಎಂದು.

ಎನ್‌ಆರ್‌ಸಿ ಇತಿಹಾಸವನ್ನು ನೀವು ಚೆನ್ನಾಗಿ ತಿಳಿದುಕೊಂಡಿರಬೇಕು. ಇದು ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿತ್ತು. ಇದು ಅಸ್ಸಾಂನ ಒಂದು ದೊಡ್ಡ ಸಮಸ್ಯೆಗೆ ಪರಿಹಾರ ಕೊಡುವುದಕ್ಕೆ. ಅಂದರೆ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾದಂತಹ ಕಾನೂನನ್ನು ಜಾರಿಗೆ ತರಲಾಯಿತು. ಅದನ್ನು 2013-14ರಲ್ಲಿ ಸುಪ್ರೀಂ ಕೋರ್ಟ್‌ ಸಹ ಬೇಗ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಿ ಎಂದು ಹೇಳಿತು. ನಂತರ ಪಟ್ಟಿ ಹೊರಬಂದಾಗ 19 ಲಕ್ಷ ಮಂದಿ ಹೊರಗುಳಿದರು. ಆಗ ಬಿಜೆಪಿಯವರಿಗೆ ತುಂಬಾ ಆತಂಕವಾಯಿತು. ಏಕೆಂದರೆ ಇದು ಮುಸ್ಲಿಂ ಜನಾಂಗಕ್ಕೆ ಎಫೆಕ್ಟ್‌ ಆಗುತ್ತೆ, ಮುಸ್ಲಿಂ ಜನಾಂಗದವರನ್ನು ಹೊರಗಿಡಬಹುದು ಎಂದು. ಬರೀ ಹಿಂದೂ ಜನರು ಮಾತ್ರ ಇರಲು ಸಾಧ್ಯವಾಗುತ್ತದೆ ಎಂದು. ಆದರೆ ಇದು ಹೀಗಾಗಲಿಲ್ಲ, ಏಕೆಂದರೆ ದೇಶಾದ್ಯಂತ ಈ ಕಾನೂನನ್ನು ಜಾರಿಗೆ ತರಲು ಹೊರಟರೆ ಎಲ್ಲರಲ್ಲೂ ದಾಖಲೆಗಳು ಇರುತ್ತದೆಯೇ?

ಸಂವಿಧಾನ ಹೇಳುವುದು ಜಾತಿ ಆಧಾರದ ಮೇಲೆ, ಧರ್ಮದ ಆಧಾರದ ಮೇಲೆ ಅಥವಾ ಭಾಷೆಯ ಆಧಾರದ ಮೇಲೆ ಯಾರನ್ನು ಅಳೆಯಲು ಸಾಧ್ಯವಿಲ್ಲ. ಇದನ್ನು ಸಂವಿಧಾನದ ಅನೇಕ ಕಾನೂನುಗಳಲ್ಲಿ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರ ಎನ್‌ಆರ್‌ಸಿ ಪಟ್ಟಿಯಲ್ಲಿ ಹೊರಗುಳಿದ ಹಿಂದೂಗಳಿಗೆ ರಾಷ್ಟ್ರೀಯ ನೋಂದಣಿ ಕೊಡವುದಲಿಲ್ಲ, ಇದು ಕಾನೂನು ಬಾಹಿರ ಎಂದು ಹೇಳುತ್ತದೆ. ಆದರೆ, ಈಗ ಸರ್ಕಾರ ಏನು ಮಾಡುತ್ತಿದೆ ಎಂದರೆ, ಅವರಿಗೆ ಒಂದು ಸೇಫ್ಟಿ ನೆಟ್‌ ಕ್ರಿಯೆಟ್‌ ಮಾಡಿತು. ಅದೇನೆಂದರೆ, ಪೌರತ್ವ ತಿದ್ದುಪಡಿ ಕಾನೂನಿನ ಮೂಲಕ. ಹಿಂದು ಅಲ್ಪಸಂಖ್ಯಾತರು ಹೊರಬಿದ್ದರೂ ಪರವಾಗಿಲ್ಲ, ನಿಮಗೆ ನಾವು ಪೌರತ್ವವನ್ನು ಕೊಡುತ್ತೇವೆ, ಆದರೆ ಎನ್‌ಆರ್‌ಸಿಯಲ್ಲಿ ಒಬ್ಬ ಮುಸಲ್ಮಾನ ಹೊರಬಿದ್ದರೆ, ಅವನಿಗೆ ಪೌರತ್ವ ಕೊಡಲು ಸಾಧ್ಯವೇ?

ನಾನು ನೋಡಿದ ಈ ವಾರದ ಪತ್ರಿಕೆಗಳಲ್ಲಿ, ಅಸ್ಸಾಂನ ಮುಖ್ಯಮಂತ್ರಿ ಬಿಜೆಪಿ ಪಕ್ಷದವರು, ಅವರ ಬಳಿ 12 ಜನ ಎಂಎಲ್‌ಎಗಳು ಪ್ರಧಾನ ಮಂತ್ರಿಗಳ ಹತ್ತಿರ ಹೋಗಿ ದಯವಿಟ್ಟು ಇದನ್ನು ವಾಪಸ್ಸು ಪಡೆಯುವುದಕ್ಕೆ ಹೇಳಿ, ನಾವು ಮನೆಯಿಂದ ಹೊರಗೆ ಬರುವುದಕ್ಕೆ ಆಗುತ್ತಿಲ್ಲ ಎಂದು ಕೇಳಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಎಂಎಲ್ಎಗಳೂ ಸಹ ಅವರದ್ದೇ ಆದ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದಾರೆ. ಏಕೆ ರಾಜಕಾರಣಿಗಳು ಹಿಂದೆ ಸರಿಯುತ್ತಿದ್ದಾರೆಂದರೆ, ಅವರಿಗೆ ಪಬ್ಲಿಕ್‌ ಪ್ರೆಶರ್‌ ತಟ್ಟಿದಾಗ ಮತ್ತು ಮುಟ್ಟಿದಾಗ ಈ ರೀತಿ ಆಗುತ್ತದೆ.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಾಮಾನ್ಯ ಜನ ಬಂದು ಕೈ ಜೋಡಿಸಿದ್ದಾರೆ, ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿ ನಮಗೆ ಬಹಳ ಸಮಾಧಾನ ಆಗುವ ವಿಚಾರವೇನೆಂದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 75ರಷ್ಟು ಯುವಕರಿಂದ ಕೂಡಿದೆ. ಅಂದರೆ 30 ವಯಸ್ಸಿನ ಕೆಳಗಿನವರೇ ಇರುವುದು. ಈ ಯುವಕರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮ ಭವಿಷ್ಯವನ್ನು ಕಾಯ್ದುಕೊಳ್ಳುವ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ. ನಾವು ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ

ನಾವು ಬರೀ ಜಾತಿ ರಾಜಕಾರಣ ಮಾತ್ರ ಶ್ರೇಷ್ಠ ರಾಜಕಾರಣ ಎಂದು ಅಂದುಕೊಂಡು, ನನ್ನ ಜಾತಿಗೆ ಏನೂ ತೊಂದರೆ ಆಗುತ್ತಿಲ್ಲ, ತೊಂದರೆ ಆದಾಗ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದರೆ ಹೇಗೆ? ಹೀಗಾಗಿ ನೋಡಿ ಇವತ್ತು ಏನಾಗಿದೆ ಎಂದರೆ, ದಲಿತ ಸಂಘಟನೆಗಳು ಹೊಡೆದು ಚೂರಾಗಿವೆ. ಸಂವಿಧಾನಕ್ಕೆ ಬಿಕ್ಕಟ್ಟು ಬಂದಿದೆ. ಕರ್ನಾಟಕದ ದಲಿತ ಸಂಘಟನೆಗಳೆಲ್ಲಾ ಬೀದಿಯಲ್ಲಿರಬೇಕಿತ್ತು, ರೈತ ಸಂಘಟನೆಗಳೆಲ್ಲಾ ಬೀದಿಯಲ್ಲಿರಬೇಕಿತ್ತು, ಬುದ್ಧಿಜೀವಿಗಳೆಲ್ಲಾ ಎಲ್ಲಿ ಹೋಗಿದ್ದಾರೆ, ಎಲ್ಲರೂ ನಮ್ಮನ್ನು ಅಕಾಡೆಮಿಗಳಿಗೆ ಅಧ್ಯಕ್ಷರನ್ನಾಗಿ, ಕಾರ್ಯದರ್ಶಿಗಳನ್ನಾಗಿ, ಕುಲಪತಿಗಳನ್ನಾಗಿ ಮಾಡಿ ರಾಜ್ಯೋತ್ಸವಕ್ಕೆ ಪ್ರಶಸ್ತಿಗಳನ್ನು ಕೊಡಿ, ಮತ್ತೊಂದು ಕೊಡಿ ಎನ್ನುವವರೆಲ್ಲಾ ತುಟಿ ಬಿಚ್ಚುತ್ತಿಲ್ಲ ಏಕೆ? ತುಟಿ ಬಿಚ್ಚಿದರೆ ಈ ಸರ್ಕಾರವನ್ನು ಎದುರಾಕಿಕೊಳ್ಳಬೇಕು. ಇನ್ನೂ ಈ ಸರ್ಕಾರ ಹಲವಾರು ದಿನಗಳ ಕಾಲ ಇರುತ್ತದೆ. ಈ ಸರ್ಕಾರದ ಪರವಾಗಿ ಮಾತನಾಡುವ ಬುದ್ಧಿಜೀವಿಗಳು ಒಂದು ಗುಂಪು. ಮತ್ತೊಂದು ಸರ್ಕಾರ ಬಂದಾಗ ಮತ್ತಷ್ಟು ಬುದ್ಧಜೀವಿಗಳು ಆ ಗುಂಪು. ಇವತ್ತು ಎಲ್ಲರ ಅಸ್ಥಿತ್ವಕ್ಕೆ ತೊಂದರೆ ಇದೆ, ಸಂವಿಧಾನಕ್ಕೆ ತೊಂದರೆ ಇದೆ. ಈ ಘಳಿಗೆಯಲ್ಲಿ ಗಾಂಧೀ ಮತ್ತು ಅಂಬೇಡ್ಕರ್‌ ಅವರನ್ನು ಒಟ್ಟಿಗೆ ನೆನೆಯಬೇಕು. ಇಲ್ಲವಾದರೆ ದೇಶವನ್ನು ಒಡೆದು ಆಳುವ, ಬರೀ ದ್ವೇಷದ ಮೇಲೆ ವಿಭಜನೆ ಮಾಡುವ ಸಿದ್ಧಾಂತಗಳು ಎದ್ದು ನಿಲ್ಲುತ್ತವೆ.

ಕೇಂದ್ರ ಸರ್ಕಾರ ಜನರ ಅಭಿಪ್ರಾಯವನ್ನು ತೆಗೆದುಕೊಂಡು ಜಾರಿಗೆ ತರಬೇಕು ಎನ್ನುವ ಮನಸ್ಥಿತಿ ಅವರಲ್ಲಿ ಇಲ್ಲ. ಅವರು ಅಂದುಕೊಂಡದ್ದು, ಆರು ತಿಂಗಳ ಹಿಂದೆ ಎಲೆಕ್ಷನ್‌ ನಡೆಯಿತು. ನಮಗೆ 303 ಸೀಟುಗಳು ಬಂದಿವೆ. ನಮಗೆ ಎಲ್ಲಾ ಕಾನೂನನ್ನು ಜಾರಿಗೆ ತರುವ ಅಧಿಕಾರವಿದೆ ಎಂದು ಬಿಜೆಪಿ ಸರ್ಕಾರ ಅಂದುಕೊಂಡಿದೆ. ಇವರ ಅಜೆಂಡಾ ತುಂಬಾ ಕ್ಲಿಯರ್‌ ಆಗಿದೆ. ಬಿಜೆಪಿಯವರ ಅಜೆಂಡಾದಲ್ಲಿ ಇದೆಲ್ಲಾ ಇದೆ ಎಂಬುದನ್ನು ವಿರೋಧ ಪಕ್ಷಗಳು ಜನರಿಗೆ ತಿಳಿಸಲ್ಲ. ಇವರು ರಾಮ ಮಂದಿರ ಕಟ್ಟುತ್ತೇವೆ ಎಂದು ಇವತ್ತಿನಿಂದ ಹೇಳುತ್ತಿಲ್ಲ, ಮುಸ್ಲಿಂರಿಗೆ ಹಾಗೆ ಹೀಗೆ ಮಾಡುತ್ತೇವೆ ಎಂದು ಇವತ್ತಿನಿಂದ ಹೇಳುತ್ತಿಲ್ಲ, ಹೀಗಾಗಿ ಇದರ ವಿರುದ್ಧ ರಾಜಕೀಯ ಪಕ್ಷಗಳು ಏನು ಮಾಡಿದವು? 70 ವರ್ಷದಿಂದ ಈ ದೇಶ ಒಂದು ದಿಕ್ಕಿನಲ್ಲಿ ಹೋಗಿದೆ ಅಲ್ವಾ? ನಾವು ಅವರಿಗೆ ಬೈಯಬೇಕು, ಇವರಿಗೆ ಬೈಯಬಾರದು ಎಂಬುದೇನಿಲ್ಲ. ನಾವು ಮನವರಿಕೆ ಮಾಡಿಕೊಳ್ಳಬೇಕಿದೆ. ನನಗೆ ಬೇಸರ ತಂದಿರುವ ವಿಚಾರವೇನೆಂದರೆ, ಪೌರತ್ವದ ಬಗ್ಗೆ ಇಷ್ಟೊಂದು ಚರ್ಚೆ ಆಗುತ್ತಿದೆ, ಪ್ರತಿಭಟನೆಗಳು ನಡೆಯುತ್ತಿವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇಷ್ಟೆಲ್ಲಾ ಆದರೂ ಕೂಡ ಟ್ವಿಟ್ಟರ್‌ನಲ್ಲಿ ಒಂದು ಹ್ಯಾಶ್‌ಟ್ಯಾಗ್‌ ಕ್ರಿಯೆಟ್ ಮಾಡುತ್ತಾರೆ, ಸೇವ್‌ ಇಂದಿರಾ ಕ್ಯಾಂಟೀನ್‌ ಎಂದು. ನಿಮಗೆ ಪ್ರಮುಖವಾದದ್ದು ಇದಾ?

ದೇಶಕ್ಕೆ ಪೌರತ್ವ ಕಾನೂನು ತರುವ ಅಗತ್ಯವಿಲ್ಲ. ದೇಶದ ಆರ್ಥಿಕತೆಗೆ ಆಗುತ್ತಿರುವ ತೊಂದರೆ. ನಮ್ಮನ್ನು ಇನ್ನೂ 10 ವರ್ಷ ಕಾಡುತ್ತೆ. ಅಪನಗದೀಕರಣದಿಂದ ದೇಶದ ಅರ್ಧ ಜನರ ಬೆನ್ನು ಮೂಳೆ ಮುರಿದಿದ್ದಾರೆ. ಜಿಎಸ್‌ಟಿ ಯನ್ನು ಜಾರಿಗೆ ತಂದ ರೀತಿ ತುಂಬಾ ಗೊಂದಲವಿದೆ. ತೆರಿಗೆಗಳು ಬದಲಾಗುತ್ತಿವೆ. ಇದೆಲ್ಲವೂ ಸಮಸ್ಯೆಗಳೆ ಅಲ್ಲವೇ? ಮತ್ತೆ ಇನ್ನೊಂದು ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆಯಾ? ಗೊತ್ತಿಲ್ಲ. ಸರ್ಕಾರ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗದಿದ್ದರೆ, ಹುಡುಗರೆಲ್ಲಾ ಹೊರಗಡೆ ಉಳಿಯುವಂತಹ ಪರಿಸ್ಥಿತಿ ಬಂದಿದೆ. ಇವರೆಲ್ಲಾ ಇನ್ನೇನು ಮಾಡಲು ಸಾಧ್ಯ? ಪೌರತ್ವ ತಿದ್ದುಪಡಿ ಕಾನೂನಿಂದ 19 ಲಕ್ಷ ಜನರನ್ನು ಅಥವಾ ಇಡೀ ದೇಶಕ್ಕೆ ಅನ್ವಯಿಸಿದಾಗ ಕೋಟ್ಯಾಂತರ ಜನರನ್ನು ಹೊರಕ್ಕೆ ದಬ್ಬಿದರೆ, ಅವರನ್ನು ಏನು ಮಾಡುತ್ತೀರಿ? ನೋಡಿ ಪಟ್ಟಿ ಮಾಡಿ ಎಂದಾಕ್ಷಣ ಒಂದು ಪೆನ್ನು ಪೇಪರ್‌ ಸಾಕು. ಕೂತು ಪಟ್ಟಿ ಮಾಡಬಹುದು. ನೀವು ನಮ್ಮ ಕಡೆ ಅಲ್ಲ, ಅವರು ನಮ್ಮ ಕಡೆ ಅಲ್ಲ, ಇವನ ಬಳಿ ಡಾಕ್ಯೂಮೆಂಟ್‌ ಸರಿಯಿಲ್ಲ ಎಂದು ಹೊರಗುಳಿಸಬಹುದು. ನಂತರ ಏನು ಮಾಡಬೇಕು? ಕೇಂದ್ರ ಸರ್ಕಾರದ ಆರ್ಥಿಕತೆ ದೇಶ ನಡೆಸುವುದಲ್ಲ, ಕಾನೂನು ಬಾಹಿರವಾಗಿರುವುದೇ ಒಂದು ಆರ್ಥಿಕತೆಯಾಗಿದೆ. ಈಗ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದುಗಳಿಗೆ ನಾವು ಪೌರತ್ವ ಕೊಡುತ್ತೇವೆ ಎಂದು ಹೇಳುತ್ತಿದ್ದಾರಲ್ಲ ಸರಿ. ಆದರೆ ಅಲ್ಲಿರುವವರ ಬಗ್ಗೆ ನಿಮಗೆ ಹೃದಯ ಕರಗುತ್ತಿದೆಯಲ್ಲಾ, ಅವರಿಗೆ ಪೌರತ್ವ ಕೊಟ್ಟು, ನೌಕರಿ ಕೊಟ್ಟು, ಅವರಿಗೆ ಊಟ ಕೊಡುತ್ತೇವೆ ಎಂದು ಮಾತನಾಡುತ್ತಿದ್ದಾರಲ್ಲ. ಆದರೆ ನಿಮ್ಮ ದೇಶದಲ್ಲಿ ಬದ್ಧವಾಗಿ, ಇಲ್ಲೇ ಬದುಕುತ್ತಿರುವ 1.2 ಬಿಲಿಯನ್‌ ಜನಕ್ಕೆ ಮೊದಲು ಸರಿಯಾಗಿ ಊಟ ಕೊಡಿ ಸ್ವಾಮಿ, ಮೊದಲು ಅವರಿಗೆ ಕೆಲಸ ಕೊಡಿ ಸ್ವಾಮಿ. ಹೊರದೇಶದಿಂದ ಬಂದಿರುವ 2 ಕೋಟಿ ಜನಕ್ಕೆ, ಅಷ್ಟೊಂದು ಕಾಳಜಿ ತೋರಿಸುತ್ತಿದ್ದೀರಲ್ಲ, ಇದು ಎಷ್ಟರ ಮಟ್ಟಿಗೆ ಸರಿ?

Tags: Against CAAAmit ShahBangaloreCurfewMangaloreMuslimsNarendra ModiprotestSugata shrinivasarajuUttara Pradeshಅಮಿತ್ ಶಾಉತ್ತರ ಪ್ರದೇಶಕರ್ಪ್ಯೂನರೇಂದ್ರ ಮೋದಿಪೌರತ್ವ ಕಾನೂನು ವಿರುದ್ಧಪ್ರತಿಭಟನೆಬೆಂಗಳೂರುಮಂಗಳೂರುಮುಸ್ಲಿಂ ಜನಾಂಗಸುಗತ ಶ್ರೀನಿವಾಸರಾಜು
Previous Post

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿಯೇ?

Next Post

ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳೇನು ಗೊತ್ತೇ?

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳೇನು ಗೊತ್ತೇ?

ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳೇನು ಗೊತ್ತೇ?

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada