• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಂಬೈ ಕನ್ನಡಿಗರ ರಕ್ಷಣೆಗೆ ದನಿ ಎತ್ತಿದ್ದ ‘ಪ್ರತಿಧ್ವನಿ’ಗೆ ಸಚಿವರ ಧ್ವನಿ..!

by
April 24, 2020
in ಕರ್ನಾಟಕ
0
ಮುಂಬೈ ಕನ್ನಡಿಗರ ರಕ್ಷಣೆಗೆ ದನಿ ಎತ್ತಿದ್ದ ‘ಪ್ರತಿಧ್ವನಿ’ಗೆ ಸಚಿವರ ಧ್ವನಿ..!
Share on WhatsAppShare on FacebookShare on Telegram

ಕರೋನಾ ಸಂಕಷ್ಟದಿಂದ ಜಗತ್ತು ಪರಿತಪಿಸುತ್ತಿದೆ. ಲಸಿಕೆ ಸಿಗದೆ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಮುಂಬೈ ನಗರ ನರಕ ಸದೃಶ್ಯವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಲಕ್ಷಾಂತರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಭಾರತ ಸರ್ಕಾರ ಏಕಾಏಕಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಇಡೀ ಕನ್ನಡಿಗ ಕಾರ್ಮಿಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಕೆಲಸವೂ ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದರೆ, ಇತ್ತ ಹಳ್ಳಿಗಳಲ್ಲಿ ಅವರ ಕುಟುಂಬ ವರ್ಗ ಜೀವನ ನಿರ್ವಹಣೆ ಮಾಡಲು ಹಣಕಾಸಿನ ನೆರವಿಲ್ಲದೆ ಪರಿತಪಿಸುತ್ತಿದೆ. ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಗಮನ ಹರಿಸಲು ಸಾಧ್ಯವಿಲ್ಲ. ಕಾರ್ಮಿಕರ ಸಚಿವರಾದರೂ ಈ ಬಗ್ಗೆ ಗಮನ ಹರಿಸಿ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತಂದು ಕ್ವಾರಂಟೈನ್ಗೆ ವ್ಯವಸ್ಥೆ ಮಾಡಿ ಆ ಬಳಿಕ ಬಿಡುಗಡೆ ಮಾಡಬೇಕು ಎಂದು ಪ್ರತಿಧ್ವನಿ ದನಿ ಎತ್ತಿತ್ತು.

ADVERTISEMENT

Also Read: ಕರ್ತವ್ಯ ಮರೆತರೇ ಕರ್ನಾಟಕದ ಕಾರ್ಮಿಕ ಸಚಿವ?

ಮುಂಬೈ ನಗರದಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡು ಕನ್ನಡಿಗರ ಸಂಘ ಕಟ್ಟಿಕೊಂಡು ರಾಜಕೀಯವಾಗಿ ಬೆಳೆದ ಸಚಿವ ನಾರಾಯಣಗೌಡರು ಈ ಬಗ್ಗೆ ಗಮನಹರಿಸಿ ಕನ್ನಡಿಗರನ್ನು ವಾಪಸ್ ಕರೆತರಲು ಶ್ರಮಿಸಬೇಕು ಎಂದು ಆಗ್ರಹ ಮಾಡಲಾಗಿತ್ತು. ಆದರೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣಿಸಿಲ್ಲ. ಆದರೆ, ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಮ್ಮ ಪ್ರತಿಧ್ವನಿಯ ಸಣ್ಣ ದನಿಗೆ ಧ್ವನಿಗೂಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರವಾಗಿ ಪತ್ರ ಬರೆದಿದ್ದು, ಮುಂಬೈ ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಿ ಎಂದು ಆಗ್ರಹ ಮಾಡಿದ್ದಾರೆ.

ಮುಂಬೈ ಕನ್ನಡಿಗರ ರಕ್ಷಣೆ ಕೋರಿ ಪತ್ರ ಬರೆದಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕನ್ನಡಿಗರು ಮುಂಬೈ ಸೇರಿದಂತೆ ರಾಷ್ಟ್ರಾದ್ಯಂತ ಇದ್ದಾರೆ. ಇದೀಗ ಲಾಕ್‌ಡೌನ್‌ಸಮಯದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ಸಾರೆ. ಅವರ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಅವರ ಅಹವಾಲು ಕೇಳಲು ಟೋಲ್ ಫ್ರೀ ಸಂಖ್ಯೆ ಸ್ಥಾಪಿಸಿ, ಬಂದ ದೂರುಗಳ ಗಮನಿಸಿ, ಆಯಾ ರಾಜ್ಯಗಳ ವ್ಯಾಪ್ತಿಯ ಜಿಲ್ಲಾಧಿಕಾರಿಗೆ ಸೂಚನೆಯನ್ನಾದರೂ ನೀಡಬೇಕು. ಸಂತ್ರಸ್ತರಿಗೆ ತುರ್ತು ಆಹಾರ ಸಾಮಾಗ್ರಿಗಳು, ಔಷಧಿಗಳು ಮತ್ತು ಭದ್ರತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಗರ್ಭಿಣಿ ಮತ್ತು ಹೆತ್ತವರಿಂದ ದೂರವಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಮಾಡಿ, ಅಗತ್ಯ ತುರ್ತು ಕ್ರಮ ಕೈಗೊಳ್ಳಿ ಎಂದು ತಮ್ಮದೇ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಮೂಲಕ ಅಂತರಾಜ್ಯ ಗಡಿ, ಭದ್ರತೆ ಗಮನದಲ್ಲಿಟ್ಟುಕೊಂಡು ಕನ್ನಡಿಗರಿಗೆ ರಕ್ಷಣೆ ಕೊಡಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಆಗ್ರಹ ಮಾಡಿದ್ದಾರೆ.ಮುಜರಾಯಿ ಹಾಗೂ ಮೀನುಗಾರಿಕೆ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಮುಂಬೈ ಕನ್ನಡಿಗರು ಸೇರಿದಂತೆ ದೇಶಾದ್ಯಂತ ಇರುವ ಕನ್ನಡಿಗರ ರಕ್ಷಣೆಗೆ ಮನವಿ ಮಾಡಿದ್ದ ಪ್ರತಿಧ್ವನಿಗೆ ಸ್ಪಂಧಿಸಿದ್ದಾರೆ. ಒಟ್ಟಾರೆ, ಕನ್ನಡಿಗರು ದೇಶದ ನಾನಾ ಕಡೆ ಅತ್ಯುತ್ತಮ ಕಾರ್ಮಿಕರಾಗಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇದೀಗ ಕರೋನಾ ಸೋಂಕು ಆವರಿಸಿದ್ದು, ಕರ್ನಾಟಕದಲ್ಲಿರುವ ಕಾರ್ಮಿಕ ಕುಟುಂಬಗಳು ಕಣ್ಣೀರು ಹಾಕುತ್ತಿವೆ.

ಅತ್ತ ಕಾರ್ಮಿಕರು ಕೂಲಿಯೂ ಇಲ್ಲದೆ, ಮನೆಯಿಂದ ಹೊರಕ್ಕೂ ಬಾರಲಾಗದೆ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂಬೈ ಸೇರಿದಂತೆ ದೇಶದ ಇತರ ಕಡೆಗಳಲ್ಲಿ ಸಿಲುಕಿರುವ ಕನ್ನಡಿಗ ಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.

Tags: CM BSYKota Srinivasa PoojaryPratidhvaniಕೋಟಾ ಶ್ರೀನಿವಾಸ ಪೂಜಾರಿಪ್ರತಿಧ್ವನಿಮುಖ್ಯಮಂತ್ರಿ ಯಡಿಯೂರಪ್ಪಮುಂಬೈ ಕನ್ನಡಿಗರು
Previous Post

PMNRF ಗೆ ನೀಡಿದ ದೇಣಿಗೆಯನ್ನು PM CARES ಗೆ ವರ್ಗಾಯಿಸಿದ ದೆಹಲಿ ವಿವಿ ಕುಲಪತಿ

Next Post

ಡಾ. ರಾಜ್ ಎಂಬ ನೆಲಕ್ಕಂಟಿದ ನಕ್ಷತ್ರ ಹೇಳಿಕೊಟ್ಟ ಸಭ್ಯತೆ-ಸಹಬಾಳ್ವೆಯ ಪಾಠ!

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
Next Post
ಡಾ. ರಾಜ್ ಎಂಬ ನೆಲಕ್ಕಂಟಿದ ನಕ್ಷತ್ರ ಹೇಳಿಕೊಟ್ಟ ಸಭ್ಯತೆ-ಸಹಬಾಳ್ವೆಯ ಪಾಠ!

ಡಾ. ರಾಜ್ ಎಂಬ ನೆಲಕ್ಕಂಟಿದ ನಕ್ಷತ್ರ ಹೇಳಿಕೊಟ್ಟ ಸಭ್ಯತೆ-ಸಹಬಾಳ್ವೆಯ ಪಾಠ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada