ಜನರ ಆತಂಕವನ್ನು ಕಡಿಮೆ ಮಾಡಬೇಕಾದ ಕರ್ನಾಟಕದ ದೃಶ್ಯ ಮಾಧ್ಯಮಗಳು ಆತಂಕವನ್ನು ಹೆಚ್ಚು ಮಾಡುತ್ತಿದೆ. ಯಾವುದು ಸರಿ,ಸಂವಿಧಾನತ್ಮಕವಾಗಿ ನಾವು ಯಾವುದನ್ನು ಅನುಸರಿಸಬೇಕು ಅನ್ನುವುದು ಇವರಿಗೆ ಮೂಖ್ಯವಲ್ಲ. ಬಹುಸಂಖ್ಯಾತ ನೋಡುಗರ ಆಸಕ್ತಿಗೆ ತಕ್ಕ ಹಾಗೆ ಸುದ್ದಿಗಳನ್ನ ವರದಿ ಮಾಡುತ್ತಿದೆ. ಹಾಗೆ ಮಾಡುವುದರಿಂದ ನೋಡುಗರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಹಾಗಾಗುವುದಿಲ್ಲ. ಹಾಗೇನಾದ್ರೂ ಆಗುವುದಿದ್ರೆ ಕೆಲವು ಕೋಮುವಾದಿ ಪತ್ರಿಕೆಗಳು ನಂಬರ್ ಒನ್ ಸ್ಥಾನದಲ್ಲಿರುತ್ತಿತ್ತು. ಕೇರಳ, ತಮಿಳುನಾಡಿನಲ್ಲಿ ಪತ್ರಿಕೆಗಳು ಓಡುವಂತೆ ಕನ್ನಡದ ಪತ್ರಿಕೆಗಳು ಓಡುವುದಿಲ್ಲ. ಕನ್ನಡ ನ್ಯೂಸ್ ಚಾನೆಲ್‌ಗಳನ್ನು ಬಹಳ ಕಡಿಮೆ ಸಂಖ್ಯೆಯ ಜನ ನೋಡುತ್ತಿದ್ದಾರೆ. ಚಾನೆಲ್‌ನವರು ತಮಗೂ ವೀಕ್ಷಕರಿರಲಿ ಎಂದು ಮನರಂಜನೆಯ ಕಾರ್ಯಕ್ರಮಗಳನ್ನು ಹಾಕುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮವನ್ನು ಈ ಮಟ್ಟಿಗೆ ತಂದವರು ಯಾರು?
ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!
https://youtube.com/live/Sh2S-y9CYsE
Read moreDetails