ಮಾಜಿ ಪ್ರಧಾನಿ ಮನನೋಹನ್ ಸಿಂಗ್ (Manmohan singh) ಅವರು ತಮ್ಮ 92ನೇ ವಯಸ್ಸಿಗೆ ತಮ್ಮ ಪ್ರಯಾಣ ಮುಗಿಸಿದ್ದು ಇಹಲೋಕ ತ್ಯಜಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಸುದೀರ್ಘ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ವಯೋಸಹಜವಾಗಿ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಸತತ 10 ವರ್ಷಗಳ ಭಾರತದ ಪ್ರಧಾನಿಯಾಗಿ (Indian prime minister) ಸೇವೆ ಸಲ್ಲಿಸಿದ ಅವರ. ಹೆಜ್ಜೆಗುರುತುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.
1932 ಸೆ. 26ರಂದು ವಿಭಜನಪೂರ್ವ ಪಾಕಿಸ್ತಾನದ (Pakistan) ಪಂಜಾಬ್ನಲ್ಲಿ ಮನಮೋಹನ್ ಸಿಂಗ್ ಜನಿಸಿದ್ದರು.ಅಮೃತಸರದ ಹಿಂದೂ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದರು.ಆ ನಂತರ ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ (1952) ಹಾಗೂ ಸ್ನಾತಕೋತ್ತರ ಪದವಿ (1954)ಯನ್ನು ಪಡೆದಿಕೊಂಡಿದ್ದಾರೆ.
ಇದಾದ ಬಳಿಕ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ 1957ರಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿ ಪಡೆಯುತ್ತಾರೆ.ಆಕ್ಸ್ಫರ್ಡ್ ವಿ.ವಿಯಿಂದ 1962ರಲ್ಲಿ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಪೂರ್ಣಗೊಳಿಸುತ್ತಾರೆ.
ಅದಾದ ಬಳಿಕ ಪಂಜಾಬ್ ವಿಶ್ವವಿದ್ಯಾಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಕೆಲಕಾಲ ಬೋಧನೆಯಲ್ಲಿ ತೊಡಗಿದ್ದರು. ಆ ನಂತರ ಭಾರತ ರಾಜಕಾರಣಕ್ಕೆ ಮನಮೋಹನ್ ಸಿಂಗ್ ಅವರ ಪ್ರವೇಶವಾಗುತ್ತೆ. ಹಂತ ಹಂತವಾಗಿ ಬೆಳುದುಬಂದ ಅವರು ಭಾರತಕ್ಕೆ ಯಾರು ತಳ್ಳಿಹಾಕಲಾರದ ಕೊಡುಗೆ ನೀಡಿದ್ದಾರೆ.