ಕರೋನಾ ಸೋಂಕಿತರ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ. ʼಮಿಶನ್ ಬಿಗಿನ್ ಅಗೈನ್ʼ ಹೆಸರಲ್ಲಿ ಹೊಸ ಮಾರ್ಗಸೂಚಿಗಳನ್ನು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದು ಅನಗತ್ಯ ಕೆಲಸಗಳಿಗೆ ಹೊರಗಡೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ.
ದೇಶದಲ್ಲೇ ಅತ್ಯಧಿಕ ಕರೋನಾ ಪ್ರಕರಣ ದಾಖಲಾಗಿರುವ ಮಹಾರಷ್ಟ್ರದಲ್ಲಿ ಇದುವರೆಗೂ 1 ಲಕ್ಷದ 64 ಸಾವಿರ ಪ್ರಕರಣಗಳು ಕಂಡುಬಂದಿವೆ. 86,575 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರೋನಾ ಸೋಂಕಿನಿಂದಾಗಿ 7,429 ಮಂದಿ ಅಸುನೀಗಿದ್ದಾರೆ. ಮಹಾರಷ್ಟ್ರದಲ್ಲಿ ನಿನ್ನೆ 5 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡಬಂದಿದೆ. ಇದು ಸರ್ಕಾರವನ್ನು ಆತಂಕಕ್ಕೆ ದೂಡಿದೆ.
ಲಾಕ್ಡೌನ್ ಸಮಯದಲ್ಲಿ ಅಗತ್ಯದ ಕಾರ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.