• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮನೆ ಬಾಗಿಲಿಗೆ ಬಂದ ರಾಜದ್ರೋಹ ಕಾನೂನಿನ ಬಿಸಿ!

by
January 10, 2020
in ಕರ್ನಾಟಕ
0
ಮನೆ ಬಾಗಿಲಿಗೆ ಬಂದ ರಾಜದ್ರೋಹ ಕಾನೂನಿನ ಬಿಸಿ!
Share on WhatsAppShare on FacebookShare on Telegram

ಮರಿದೇವಯ್ಯ…ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿರುವ ದಲಿತ ಯುವಕ. ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರೂ ಹೌದು. ಮೈಸೂರಿನಲ್ಲಿ ನಡೆಯುವ ಯಾವುದೇ ಸಾಮಾಜಿಕ ಪ್ರತಿಭಟನೆಗಳಿರಲಿ ಇವರು ಅಲ್ಲಿ ಹಾಜರ್. ಸಾಮಾಜಿಕ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಇವರು ಇದೀಗ ರಾಷ್ಟ್ರದ್ರೋಹದ ಆರೋಪ ಎದುರಿಸುತ್ತಿದ್ದಾರೆ. ನವದೆಹಲಿಯ ಜೆಎನ್‍ಯುನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿರುದ್ಧ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಹೋರಾಟದ ಸಮಯದಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಘೋಷಣೆಯ ಫಲಕ ಹಿಡಿದ ಘಟನೆಗೆ ಸಂಬಂಧಿಸಿ, ಮರಿದೇವಯ್ಯ ಮೇಲೆ ರಾಜದ್ರೋಹದ ಕಾನೂನಿನ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಇವೆಲ್ಲದರ ನಡುವೆ ಈ ಯುವತಿ ಸಿಎಎ ವಿರುದ್ಧ-ಜೆಎನ್‍ಯು ಪರ ಹೋರಾಟದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಮೂಲಕ ಎಬಿವಿಪಿಗೆ ಪರೋಕ್ಷವಾಗಿ ಕ್ಯಾಂಪಸ್‍ನಲ್ಲಿ ತಳವೂರಲು ನೆರವಾಗಿದ್ದಾರೆ ಎಂಬ ಆರೋಪ ಪ್ರಗತಿಪರ ವಿದ್ಯಾರ್ಥಿಗಳಿಂದಲೇ ಕೇಳಿ ಬಂದಿದೆ.

ADVERTISEMENT

“ನಮ್ಮ ಹೋರಾಟವೇನಿದ್ದರೂ, ಜೆಎನ್‍ಯು ಆಡಳಿತದ ವಿರುದ್ಧವಾಗಿತ್ತು. ಅಲ್ಲಿನ ಉಪಕುಲಪತಿ ರಾಜೀನಾಮೆಗೆ ಒತ್ತಾಯ, ವಿದ್ಯಾರ್ಥಿಗಳಿಗೆ ರಕ್ಷಣೆ, ಗಲಭೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾವು ಐದು ಸಂಘಟನೆಗಳ ಜತೆ ಸೇರಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಈ ಪ್ರತಿಭಟನೆಗೂ, ಇಡೀ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ,” ಎನ್ನುತ್ತಾರೆ ಮರಿದೇವಯ್ಯ.

“ನಾವ್ಯಾಕೆ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಲಿ? ನಮಗೆ ಇಡೀ ಈ ಫ್ರೀ ಕಾಶ್ಮೀರದ ಫಲಕ ಹಿಡಿದ ಯುವತಿ ಯಾರೆಂದೇ ತಿಳಿದಿಲ್ಲ. ನಮಗೂ ಆಕೆಗೂ ಸಂಬಂಧವಿಲ್ಲ. ಆಕೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅಲ್ಲ,” ಎನ್ನುತ್ತಾರೆ ಮರಿದೇವಯ್ಯ.

“ನಮ್ಮ ಪ್ರತಿಭಟನೆ ಏನಿದ್ದರೂ ಜೆಎನ್‍ಯು ವಿದ್ಯಾರ್ಥಿಗಳಿಗೆ ನೀಡುವುದಾಗಿತ್ತು. ನಮಗೂ ಕಾಶ್ಮೀರ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ ಮರಿದೇವಯ್ಯ.

ಅಷ್ಟಕ್ಕೂ ಪೊಲೀಸರು ರಾಜದ್ರೋಹದ ಆರೋಪ ಹೊರಿಸಿದ್ದೇಕೆ? ಇದೊಂದು ಆಸಕ್ತಿದಾಯಕ ಸಂಗತಿ. ಪೊಲೀಸರು ಇಡೀ ಘಟನೆಗೆ ಸಂಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿರುವುದು ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ನೀಡಿರುವ ದೂರನ್ನು ಆಧರಿಸಿ. ಈ ಕಾನ್‍ಸ್ಟೇಬಲ್ ಅವರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಬೀಟ್ ಪೊಲೀಸ್. ಅವರು ತಮ್ಮ ದೂರಿನಲ್ಲಿ ಫ್ರೀ ಕಾಶ್ಮೀರ ಎಂಬ ಫಲಕ ಹಿಡಿಯುವ ಮೂಲಕ ಈ ಹೋರಾಟಗಾರರು ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರನ್ನು ಆಧಾರವಾಗಿಟ್ಟುಕೊಂಡು ಪೊಲೀಸರ ರಾಜದ್ರೋಹದ ಆರೋಪವನ್ನು ಮರಿದೇವಯ್ಯ ಮತ್ತಿತರರ ವಿರುದ್ಧ ದಾಖಲಿಸಿಕೊಂಡಿದ್ದಾರೆ. ಆದರೆ ಯಾರೋ ಮಾಡಿದ ತಪ್ಪಿಗೆ ಹೋರಾಟಗಾರರ ಮೇಲೆ ಇಷ್ಟು ಕಠಿಣವಾದ ಮೊಕದ್ದಮೆ ದಾಖಲಿಸಬೇಕಿತ್ತೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ.

“ಇಂತಹ ಮೊಕದ್ದಮೆಗಳಿಂದ ಹೊರಬರುವುದು ಸುಲಭದ ಸಂಗತಿಯಲ್ಲ. ಪೊಲೀಸರು ಮರಿದೇವಯ್ಯನನ್ನು ಬಂಧಿಸದಿರಬಹುದು. ಆದರೆ ಮೊಕದ್ದಮೆ ಇನ್ನೂ 2-3 ವರ್ಷಗಳ ಕಾಲ ಮುಂದುವರಿಯುತ್ತದೆ. ಆತನ ಭವಿಷ್ಯ ಏನು? ಆತನ ಜತೆ ಇನ್ನೊಂದಿಷ್ಟು ಹುಡುಗರ ಮೇಲೂ ಪೊಲೀಸರು ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ. ಅವರೆಲ್ಲರ ಭವಿಷ್ಯ ಮುಸುಕಾದಂತೆಯೆ,” ಎನ್ನುತ್ತಾರೆ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕರೊಬ್ಬರು.

ಈ ಎಲ್ಲದರ ನಡುವೆ, ಫ್ರೀ ಕಾಶ್ಮೀರ ಎಂಬ ಫಲಕ ಹಿಡಿದ ಯುವತಿಯ ಮೇಲೂ ವಿದ್ಯಾರ್ಥಿಗಳ ಸಿಟ್ಟು ತಿರುಗಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲ ವಿದ್ಯಾರ್ಥಿಗಳ ಪ್ರಕಾರ, ಈ ಜೆಎನ್‍ಯು ಪರ ಹೋರಾಟಕ್ಕೆ ಕಾಶ್ಮೀರ ವಿವಾದವನ್ನು ಎಳೆಯುವ ಮೂಲಕ, ಬಲಪಂಥೀಯರು ಪ್ರಬಲವಾಗುವಂತೆ ಮಾಡಲಾಗಿದೆ. “ಜೆಎನ್‍ಯು, ಸಿಎಎ ವಿರುದ್ಧ ದೊಡ್ಡ ಮಟ್ಟದಲ್ಲಿ ಮೈಸೂರು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಕಾಶ್ಮೀರ ವಿವಾದಕ್ಕೂ ಇವಕ್ಕೂ ಏನೆನು ಸಂಬಂಧವಿಲ್ಲ. ಈಗ ಸಿಎಎ ವಿರೋಧಿಗಳು, ಜೆಎನ್‍ಯು ಪರವಿರುವವರು ದೇಶದ್ರೋಹಿಗಳು ಎಂದು ಅಪಪ್ರಚಾರ ಮಾಡಲು ಎಬಿವಿಪಿಗೆ ಅವಕಾಶ ಸಿಕ್ಕಿದೆ. ಇದೆಲ್ಲಾ ಬೇಕಿರಲಿಲ್ಲ. ನಮ್ಮ ದಾರಿ ನಮಗೆ ಸ್ಪಷ್ಟವಾಗಿರಬೇಕಿದೆ,” ಎನ್ನುತ್ತಾರೆ ಓರ್ವ ವಿದ್ಯಾರ್ಥಿ.

“ಇದು ಕೇರಳ-ತಮಿಳುನಾಡಲ್ಲ. ಇಲ್ಲಿ ಬಲಪಂಥೀಯ ವಿದ್ಯಾರ್ಥಿಗಳ ಜತೆಗೆ ಗುದ್ದಾಡುವುದು ಸುಲಭದ ಸಂಗತಿಯಲ್ಲ. ಇದೀಗ ಶೂದ್ರ ಸಮುದಾಯದ ವಿದ್ಯಾರ್ಥಿಗಳನ್ನು ನಮ್ಮ ವಿರೋಧಿಗಳನ್ನಾಗಿಸಲು ಈ ನಾಮಫಲಕ ವಿವಾದವೊಂದೇ ಸಾಕು,” ಎನ್ನುತ್ತಾರೆ ಅವರು.

Tags: CAAMaridevaiahMysoreprotestseditionsedition CaseStudentsUniversity of Mysoreದೇಶದ್ರೋಹ ಆರೋಪಪ್ರತಿಭಟನೆಮರಿದೇವಯ್ಯಮೈಸೂರುಮೈಸೂರು ವಿಶ್ವವಿದ್ಯಾಲಯವಿದ್ಯಾರ್ಥಿಗಳುಸಿಎಎ
Previous Post

‘ಸಿಎಎ ಜಾರಿಗೆ ತಂದಿರುವುದು ಕೇಂದ್ರ ಸರ್ಕಾರದ ಭಾವನಾತ್ಮಕ ಆಟ’

Next Post

HDK ಸಿ ಡಿ ಬಿಚ್ಚಿಟ್ಟ ಕುಡ್ಲ ಪೊಲೀಸರ ಅಸಲಿಯತ್ತು!

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
HDK ಸಿ ಡಿ ಬಿಚ್ಚಿಟ್ಟ ಕುಡ್ಲ ಪೊಲೀಸರ ಅಸಲಿಯತ್ತು!

HDK ಸಿ ಡಿ ಬಿಚ್ಚಿಟ್ಟ ಕುಡ್ಲ ಪೊಲೀಸರ ಅಸಲಿಯತ್ತು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada