ʼಲವ್ ಜಿಹಾದ್’ ಹೆಸರಿನಲ್ಲಿ ಉತ್ತರ ಪ್ರದೇಶ ಸರ್ಕಾರದ ವಿವಾದಾತ್ಮಕ ಮತಾಂತರ ವಿರೋಧಿ ಸುಗ್ರೀವಾಜ್ಞೆಯು ರಾಜ್ಯವನ್ನು “ದ್ವೇಷ, ವಿಭಜನೆ ಮತ್ತು ಧರ್ಮಾಂಧತೆಯ ರಾಜಕೀಯದ ಕೇಂದ್ರಬಿಂದುವಾಗಿ” ಪರಿವರ್ತಿಸಿದೆ ಎಂದು 104 ಮಾಜಿ ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ..
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪ್ರಧಾನ ಮಂತ್ರಿ ಮಾಜಿ ಸಲಹೆಗಾರ ಟಿಕೆಎ ನಾಯರ್ ಸೇರಿದಂತೆ ಒಟ್ಟು 104 ಮಾಜಿ ಐಎಎಸ್ ಅಧಿಕಾರಿಗಳು “ಅಕ್ರಮ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು” ಎಂದು ಪತ್ರ ಬರೆದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಒಂದು ಕಾಲದಲ್ಲಿ ಗಂಗಾ-ಯಮುನಾ ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಈಗ ದ್ವೇಷ, ವಿಭಜನೆ ಮತ್ತು ಧರ್ಮಾಂಧತೆಯ ರಾಜಕಾರಣದ ಕೇಂದ್ರಬಿಂದುವಾಗಿದೆ, ಹಾಗೂ ಆಡಳಿತ ಸಂಸ್ಥೆಗಳು ಕೋಮು ವಿಷ ಹರಡುವಲ್ಲಿ ಮುಳುಗಿವೆ.” ಎಂದು ಪತ್ರದಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.
‘ಆಯ್ಕೆಯ ಸ್ವಾತಂತ್ರ್ಯದ ಮೇಲೆ ಆಕ್ರಮಣ’
ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ಹಲವಾರು ಉದಾಹರಣೆಗಳನ್ನು ಈ ಪತ್ರವು ಎತ್ತಿ ತೋರಿಸಿದೆ.
ಕಳೆದ ವಾರ, ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಇಬ್ಬರು ಹದಿಹರೆಯದವರನ್ನು ಕಿರುಕುಳ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಬಾಲಕಿ ಮತ್ತು ಆಕೆಯ ತಾಯಿಯ ಆಕ್ಷೇಪಣೆಗಳ ನಡುವೆಯೂ ‘ಲವ್ ಜಿಹಾದ್’ ಪ್ರಕರಣ ದಾಖಲಾಗಿದೆ. 16 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ ಬಾಲಕ ಒಂದು ವಾರದಿಂದ ಜೈಲಿನಲ್ಲಿದ್ದಾನೆ.
“ಮತಾಂತರ ವಿರೋಧಿ ಸುಗ್ರೀವಾಜ್ಞೆ ವಿಶೇಷವಾಗಿ ಮುಸ್ಲಿಮರಾದ ಭಾರತೀಯ ಪುರುಷರು ಮತ್ತು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಚಲಾಯಿಸಲು ಧೈರ್ಯವಿರುವ ಮಹಿಳೆಯರನ್ನು ಬಲಿಪಶು ಮಾಡಲು ಆಯುಧದಂತೆ ಬಳಸಲಾಗುತ್ತಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
Also Read: ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯ ನಿರಾಕರಿಸುವ ಷಡ್ಯಂತ್ರ್ಯ -AILAJ
ಅಲಹಾಬಾದ್ ಹೈಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್‌ಗಳು, ಒಬ್ಬರು ತಮ್ಮ ಜೀವನ ಸಂಗಾತಿಯನ್ನು ಆರಿಸುವುದು ಸಂವಿಧಾನವು ಖಾತರಿಪಡಿಸುವ ಮೂಲಭೂತ ಹಕ್ಕು ಎಂದು ನಿಸ್ಸಂದಿಗ್ಧವಾಗಿ ತೀರ್ಪು ನೀಡಿದೆ, ಆದರೆ “ಉತ್ತರ ಪ್ರದೇಶ ರಾಜ್ಯವು ಆ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ” ಎಂದು ಸಹಿ ಮಾಡಿದ ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ.
Also Read: ಲವ್ ಜಿಹಾದ್ ಕಾನೂನಿಗೆ ಒಂದು ತಿಂಗಳಾಗುವಾಗ 35 ಮಂದಿಯನ್ನು ಬಂಧಿಸಿದ ಉ.ಪ್ರ ಪೊಲೀಸರು
ಮುಕ್ತ ದೇಶದ ಮುಕ್ತ ಪ್ರಜೆಗಳಾಗಿ ತಮ್ಮ ಜೀವನವನ್ನು ಸರಳವಾಗಿ ಬದುಕಲು ಬಯಸುವ ಯುವ ಭಾರತೀಯರ ಮೇಲೆ ಉತ್ತರ ಪ್ರದೇಶ ಸರ್ಕಾರ ಸರಣಿ ದೌರ್ಜನ್ಯ ಎಸಗುತ್ತಿದೆಯೆಂದು ಪತ್ರದಲ್ಲಿ ಆರೋಪಿಸಲಾಗಿದೆ.
ಹೊಸ ಸುಗ್ರೀವಾಜ್ಞೆಯಡಿ ಉತ್ತರ ಪ್ರದೇಶ ಪೊಲೀಸರು ಸರಣಿ ಪ್ರಕರಣಗಳನ್ನು ದಾಖಲಿಸಿದ ಬಳಿಕ ಮಾಜಿ ಐಎಎಸ್ ಅಧಿಕಾರಿಗಳ ಈ ಪತ್ರ ಬಂದಿದೆ.