ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ಅ 10ರ ಬೆಳಿಗ್ಗೆ 11ಗಂಟೆಗೆ ಭಾರತೀಯ ಕಿಸಾನ್ ಸಂಘವು ಪ್ರತಿಭಟನೆ ನಡೆಸಿತು ಭಾರತೀಯ ಕಿಸಾನ್ ಸಂಘದ ರಾಜ್ಯ ಕೇಂದ್ರ ಕಚೇರಿಯಿಂದ BJPಯ ರಾಜ್ಯ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿ BJP ರಾಜ್ಯಾಧ್ಯಕ್ಷರಿಗೆ ಪತ್ರದ ಮುಖೇನ ಆಗ್ರಹಿಸಲಾಯಿತು.
ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಮಾತನಾಡಿ ಕೈಗಾರಿಕೆಗಳಿಗೆ ಕೃಷಿಭೂಮಿ ಏತಕೆ, ಬಂಜರು ಭೂಮಿ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತು ಮುಂದಿನ ಪೀಳಿಗೆಗೆ ಆಹಾರ ಕೂರತೆ ಮಾಡದೆ ಕಾಯ್ದೆಯ ಸಾದಕ ಬಾಧಕಗಳನ್ನು ಸದನ, ರೈತರ, ರೈತ ಸಂಘಟನೆಗಳ,ತಜ್ಞರ ಸಲಹೆಯನ್ನು ಪಡೆದು ನಿಮ್ಮ ಈ ದೋಷಪೂರಿತ ಸುಗ್ರೀವಾಜ್ಞೆ ಹಿಂಪಡೆಯಿರಿ, ಕಲಂ 79A, B ಹೋರತುಪಡಿಸಿ ಉಳಿದ ಯಾವುದೇ ಕಲಂಗಳಿಗೆ ತಿದ್ದುಪಡಿ ತರಬಾರದು ಎಂದು ಸರ್ಕಾರಕ್ಕೆ ಹೆಚ್ಚರಿಕೆ ನೀಡದರು.
ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡರು ಮಾತನಾಡಿ ಮಾರಕ ಖಾಯಿಲೆಯಾದ ಕೋವಿಡ್ 19 ಅಟ್ಟಹಾಸದ ನಡುವೆ ಈ ಸುಗ್ರೀವಾಜ್ಞೆ ಮಾಡಿದ ಹಿಂದಿರುವ ಹುನ್ನಾರವೇನು? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ದಕ್ಷಿಣ ಪ್ರಾಂತ್ಯ ಅಧ್ಯಕ್ಷರಾದ ರಾಜೇಂದ್ರ ರಾಮಾಪುರ ಮಾತನಾಡಿ ರೈತನಾಯಕರೆಂದು ಹೇಳಿಕೊಳ್ಳುವ ನಿಮಗೆ ರೈತರ ಕೂಗು ಕೇಳುವುದಿಲ್ಲವೇ ರೈತವಿರೋಧಿ ಆಡಳಿತಕ್ಕೆ ಉಳಿಗಾಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.