ಮುಂದಿನ ಐದರಿಂದ ಏಳು ವರ್ಷಗಳೊಳಗೆ 10 ಬಿಲಿಯನ್ ಡಾಲರ್ (75,000 ಕೋಟಿ ರುಪಾಯಿ)ಗಳನ್ನು ಗೂಗಲ್ ಭಾರತದಲ್ಲಿ ಹೂಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. “ಭಾರತಕ್ಕಾಗಿ ಗೂಗಲ್” (Google for India) ವರ್ಚ್ಯುವಲ್ ಈವೆಂಟ್‌ನ ಆರನೇ ವಾರ್ಷಿಕ ಆವೃತ್ತಿಯಲ್ಲಿ ಭಾರತದಲ್ಲಿ ಡಿಜಟಲೀಕೃತ ನಿಧಿಯನ್ನು ಹೂಡುವ ಕುರಿತು ಹೇಳಿದ್ದಾರೆ.
ಈ ಹೂಡಿಕೆಯಿಂದ ಭಾರತದಲ್ಲಿ ಭಾಷೆಗಳ ಹೊರತಾಗಿಯೂ, ಪ್ರತಿಯೊಬ್ಬ ಭಾರತೀಯನಿಗೆ ಕೈಗೆಟಕುವ ದರದಲ್ಲಿ, ಸ್ಥಳೀಯ ಭಾಷೆಯಲ್ಲಿ ಮಾಹಿತಿ ಲಭ್ಯವಾಗಲು ಹಾಗೂ ಆ ಮೂಲಕ ಸ್ಥಳೀಯ ಉದ್ಯಮಗಳು ಡಿಜಿಟಲೀಕರಣಗೊಳಿಸಲು ಗೂಗಲ್ ಉದ್ದೇಶಿಸಿದೆ. ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Integellince)ಅನ್ನು ಬಳಸುವ ನಿಟ್ಟಿನಲ್ಲೂ ಇದು ಕೆಲಸ ಮಾಡುತ್ತದೆ.
ಉದಾಹರಣೆಗೆ ಗೂಗಲ್ ಪರಿಚಯಿಸಲು ಬಯಸುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಪ್ರವಾಹ ಮುನ್ಸೂಚನೆ ವ್ಯವಸ್ಥೆಯು ನೈಸರ್ಗಿಕ ವಿಪತ್ತಿನಿಂದ ಪ್ರಭಾವಿತವಾಗಬಹುದಾದ ಪ್ರದೇಶಗಳನ್ನು ಎಚ್ಚರಿಸಲು ಮತ್ತು ಸ್ಥಳಾಂತರಿಸಲು ಸಹಾಯ ಮಾಡುತ್ತದೆ. ಅಲ್ಲದೆ, AI ಚಾಲಿತ ರೀಡಿಂಗ್ ಟ್ಯೂಟರ್ ಅಪ್ಲಿಕೇಶನ್ ಮಕ್ಕಳಿಗೆ ಸ್ವಂತವಾಗಿ ಓದಲು ಮತ್ತು ಕಲಿಯಲು ಸಹಾಯ ಮಾಡುತ್ತದೆ ಎಂದು ಪಿಚೈ ಹೇಳಿದ್ದಾರೆ.
ಇಂಟರ್ನೆಟ್ ಸಾಥಿಯಂತಹ ಕಾರ್ಯಕ್ರಮಗಳ ಯಶಸ್ಸನ್ನು ಹಂಚಿಕೊಂಡಿರುವ ಪಿಚೈ ಇದು ಭಾರತದಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಡಿಜಿಟಲ್ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ತನ್ನ ಕನಸು ಡಿಜಿಟಲ್ ಇಂಡಿಯಾದ ಮೂಲಕ ಅಗ್ಗದ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ದತ್ತಾಂಶಗಳು ಮತ್ತು ವಿಶ್ವ ದರ್ಜೆಯ ಟೆಲಿಕಾಂ ಮೂಲಸೌಕರ್ಯಗಳ ನೀಡಿ ಭಾರತೀಯರಿಗೆ ಅಂತರ್ಜಾಲವನ್ನು ಪ್ರವೇಶಿಸುವಂತೆ ಮಾಡಿದುದಕ್ಕಾಗಿ ಭಾರತದ ಪ್ರಧಾನಿಯನ್ನು ಗೂಗಲ್ ಸಿಎಒ ಶ್ಲಾಘಿಸಿದ್ದಾರೆ. ಇದು ತನ್ನ ಕನಸಿನ ಕಾರ್ಯಯೋಜನೆಗಳಿಗೆ ನೆರವಾಗಬಲ್ಲದು ಎಂದು ಸುಂದರ್ ಪಿಚೈ ಭಾವಿಸಿದ್ದಾರೆ.
