ಭಾರ್ತದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ವಿಶ್ವದಲ್ಲಿ ಅತೀ ಹೆಚ್ಚು ಪತ್ತೆಯಾಗಿರುವ ದೇಶಗಳ ಪಟ್ಟಿಯಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದುಕೊಂಡಿರುವ ಭಾರತ, ಅತೀ ಹೆಚ್ಚು ಕರೋನಾ ಪ್ರಕರಣ ಸಕ್ರಿಯವಾಗಿರುವ ದೇಶಗಳಲ್ಲಿ 5 ನೇ ಸ್ಥಾನ ಪಡೆದಿದೆ.
ಜೂನ್ ಎರಡರ ಅಂಕಿಅಂಶದ ಪ್ರಕಾರ ಕಳೆದ ಒಂದು ದಿನದಲ್ಲಿ 8,392 ಹೊಸ ಪ್ರಕರಣ ದಾಖಲಾಗುವದರೊಂದಿಗೆ 1 ಲಕ್ಷದ 99 ಸಾವಿರದ ಗಡಿ ದಾಟಿದೆ. ಕರೋನಾ ಕಂಡು ಬಂದ ಸೋಂಕಿತರಲ್ಲಿ ಸುಮಾರು ಅರ್ಧದಷ್ಟು ಮಂದಿ ಅಂದರೆ 95,527 ಮಂದಿ ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಇಂದು 230 ಮಂದಿ ಕರೋನ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿರುವ ಸಂಖ್ಯೆ 5,598 ತಲುಪಿದೆ. ಅದರಲ್ಲಿ ಸುಮಾರು ಅರ್ಧದಷ್ಟು ಅಂದರೆ 2,286 ಮಂದಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಅಸುನೀಗಿದ್ದಾರೆ.
ಕರ್ನಾಟಕದಲ್ಲಿ ಇಂದು 388 ಹೊಸ ಕರೋನಾ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3,796 ತಲುಪಿದೆ. ರಾಜ್ಯದಲ್ಲಿ ಇದುವರೆಗೂ 1403 ಮಂದಿ ಕರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡಗಡೆಗೊಂಡಿದ್ದಾರೆ. ಇಂದು ಪತ್ತೆಯಾಗಿರುವ 388 ಪ್ರಕರಣಗಳಲ್ಲಿ 367 ಮಂದಿ ಅಂತರಾಜ್ಯದಿಂದ ಬಂದವರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.