ಮಾನವ ಹಕ್ಕುಗಳಿಗಾಗಿ ದನಿ ಎತ್ತುತ್ತಿರುವ ವಿಶ್ವದ ದೊಡ್ಡ ಮಾನವ ಹಕ್ಕು ಸಂಘಟನೆ ಭಾರತದಲ್ಲಿ ತನ್ನ ಕಚೇರಿಗಳನ್ನು ಮುಚ್ಚುವ ನಿರ್ಧಾರ ಪ್ರಕಟಿಸಿದೆ. ಕಳೆದ ಒಂದು ದಶಕದಿಂದ ಆಮ್ನೆಸ್ಟಿಯು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆದಾಗಲೆಲ್ಲ ದನಿ ಎತ್ತುತ್ತ ಬಂದಿದೆ. ದೇಶದಲ್ಲಿ ಪ್ರತಿ ನಿತ್ಯವೂ ವರದಿ ಆಗುವ ದಲಿತರ, ಮುಸ್ಲಿಮರ ಮತ್ತು ಕೆಳ ವರ್ಗದವರ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ವಿರುದ್ದ ಆಮ್ನೆಸ್ಟಿಯು ದನಿ ಎತ್ತಿದೆ. ಅಲ್ಲದೆ ಈ ದೌರ್ಜನ್ಯಗಳ ವಿರುದ್ದ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲೂ ಗಮನ ಸೆಳೆಯುವ ಕೆಲಸ ಮಾಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದಲ್ಲಿ ಆಮ್ನೆಸ್ಟಿಯು 150 ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು ಫೆರಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದ್ದು ಇದರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರ ಆಮ್ನೆಸ್ಟಿ ಈ ನಿರ್ಧಾರಕ್ಕೆ ಬಂದಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್‌ಎ) ಉಲ್ಲಂಘನೆ ಆರೋಪದ ಮೇಲೆ 2019 ರ ನವೆಂಬರ್ 5 ರಂದು ಕೇಂದ್ರ ತನಿಖಾ ದಳವು (ಸಿಬಿಐ) ಅಮ್ನೆಸ್ಟಿ ವಿರುದ್ದ ಎಫ್ಐಆರ್ ದಾಖಲಿಸಿದನ್ನು ಆಧರಿಸಿ ಜಾರಿ ನಿರ್ದೇಶನಾಲಯ ಕಳೆದ ವರ್ಷ ಪ್ರತ್ಯೇಕ ತನಿಖೆಗೆ ಚಾಲನೆ ನೀಡಿತ್ತು. ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿ ಇಡಿ ಈಗ ಪ್ರಾಥಮಿಕ ವಿಚಾರಣೆಯನ್ನು ಇಸಿಐಆರ್ (ಎಫ್ಐಆರ್ ಗೆ ಸಮಾನ) ಆಗಿ ಪರಿವರ್ತಿಸಿದೆ.
ಇಡಿ ಈ ಬಾರಿ ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಮೂಲಕ ಅಮ್ನೆಸ್ಟಿ ಮೇಲೆ ಮೊಕದ್ದಮೆ ಹೂಡಿದೆ. ಈ ಕುರಿತು ಪತ್ರಿಕಅ ಹೇಳಿಕೆ ಬಿಡುಗಡೆ ಮಅಡಿರುವ ಆಮ್ನೆಸ್ಟಿ ಭಾರತ ಕಚೇರಿಯು “ಸೆಪ್ಟೆಂಬರ್ 10, 2020 ರಂದು, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ತನ್ನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯವು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ, ಇದರಿಂದಾಗಿ ಮಾನವ ಹಕ್ಕುಗಳ ಸಂಘಟನೆಯ ಹೆಚ್ಚಿನ ಕೆಲಸಗಳನ್ನು ಸ್ಥಗಿತಗೊಳಿಸಿದೆ. ಅದು ಸರ್ಕಾರವು ತನ್ನ ವಿರುದ್ದ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಆರೋಪಿಸಿದ್ದು ಆಧಾರರಹಿತ ಮತ್ತು ಪ್ರೇರಿತ ಆರೋಪಗಳ ಮೇಲೆ ಭಾರತ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ಅರೋಪಿಸಿದೆ.
ಕಳೆದ ವರ್ಷ ಜುಲೈನಲ್ಲಿ, ಜಾರಿ ನಿರ್ದೇಶನಾಲಯವು 51.72 ಕೋಟಿ ರೂ. ವರ್ಗಾವಣೆ ಮಾಡಿರುವುದಕ್ಕೆ ನೋಟೀಸ್ ಜಾರಿಗೊಳಿಸಿತ್ತು. ಸಿಬಿಐ ತನ್ನ ಪ್ರಕರಣದಲ್ಲಿ ಫೆರಾ ವನ್ನು ಅನ್ವಯಿಸಲಾಗಿದ್ದರೂ,, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಯನ್ನು ಹೇರಲಾಗಿದೆ. ಮತ್ತು ಐಬಿಸಿಯ ಸೆಕ್ಷನ್ 120-ಬಿ ಅನ್ನು ಸಿಬಿಐ ಎಫ್ ಐ ಆರ್ ನಲ್ಲಿ ಅಪರಾಧವೆಂದು ಪರಿಗಣಿಸಲಾಗಿರುವುದರಿಂದ, ಇದು ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಲು ಜಾರಿ ನಿರ್ದೇಶನಾಲಯವನ್ನು ಶಕ್ತಗೊಳಿಸಿದೆ.
ಅಮ್ನೆಸ್ಟಿಯು ದೇಶದಲ್ಲಿ ಹೊಂದಿರುವ 150 ಉದ್ಯೋಗಿಗಳಲ್ಲಿ ಸಂಶೋಧನೆ, ಅಭಿಯಾನಗಳು, ವಕಾಲತ್ತು ಮತ್ತು ಟೆಲಿ-ಕರೆ ಮಾಡುವ ತಂಡಗಳು ಸೇರಿವೆ. ಸಂಸ್ಥೆಯ ಪ್ರಸ್ತುತ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಆವರಾಗಿದ್ದು ಅವರ ಹಿಂದಿನ ಮತ್ತು ಪ್ರಸಿದ್ಧ ಅಂಕಣಕಾರ ಆಕರ್ ಪಟೇಲ್ ಅವರ ಅಧಿಕಾರಾವಧಿ ಮುಗಿದ ನಂತರ ಅವಿನಾಶ್ ಅವರು ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡರು. ಸಂಸ್ಥೆಗೆ ಹಲವಾರು ಉದ್ಯೋಗಿಗಳು ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಇದು ಸರ್ಕಾರದ ಹಠಾತ್ ನಿರ್ಧಾರ ಆದರೆ ಇದು ಬಹಳ ಸಮಯದಿಂದ ಬರುವ ನಿರೀಕ್ಷೆ ಇತ್ತು ಪ್ರಚಾರಕರೊಬ್ಬರು ಹೇಳಿದರು, ಅವರು ಹಲವಾರು ವರ್ಷಗಳಿಂದ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಆದಾಗ್ಯೂ, ಅಔಗಿIಆ-19 ಬಿಕ್ಕಟ್ಟಿನ ಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಸಂಸ್ಥೆ ವಿಶೇಷವಾಗಿ ಕಾಳಜಿ ವಹಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆ ವ್ಯವಹಾರ ಮತ್ತು ಮಾನವ ಹಕ್ಕುಗಳು, ಸಂಕಟದಲ್ಲಿರುವ ವ್ಯಕ್ತಿಗಳು, ಲಿಂಗ ಆಧಾರಿತ ಹಿಂಸೆ, ಮಾನವ ಹಕ್ಕುಗಳ ಶಿಕ್ಷಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಯದ ಪ್ರವೇಶ ಎಂಬ ಐದು ನಿರ್ಣಾಯಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪೂರ್ಣ ಪ್ರಮಾಣದ ಯೋಜನೆಗಳಲ್ಲದೆ, ಆಮ್ನೆಸ್ಟಿ ಇಂಡಿಯಾ ಕೂಡ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಹೇಳಿಕೆಗಳನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತು ಈಶಾನ್ಯ ದೆಹಲಿಯಲ್ಲಿನ ಗಲಭೆಗಳ ಕುರಿತು ಎರಡು ಸಮಗ್ರ ವರದಿಗಳು ಅವರ ಇತ್ತೀಚಿನ ಕೊಡುಗೆಗಳಾಗಿವೆ. ಆಗಸ್ಟ್ 5, 2020 ರಂದು, ಭಾರತದ ಸಂವಿಧಾನದ 370 ನೇ ವಿಧಿಯನ್ನು ದುರ್ಬಲಗೊಳಿಸಿದ ಮೊದಲ ವಾರ್ಷಿಕೋತ್ಸವವನ್ನು ಗುರುತಿಸಿ, ಜಮ್ಮು ಮತ್ತು ಕಾಶ್ಮೀರದ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿತು.
ದೆಹಲಿಯಲ್ಲಿನ ಗಲಭೆಯ ಆರು ತಿಂಗಳ ನಂತರ, ಆಗಸ್ಟ್ 28, 2020 ರಂದು, ಆಮ್ನೆಸ್ಟಿ ಇಂಡಿಯಾ ಹಿಂಸಾಚಾರದಲ್ಲಿ ದೆಹಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಕೂಡ ವರದಿಯನ್ನು ಬಿಡುಗಡೆ ಮಾಡಿತು, ಈ ಗಲಭೆಯಲ್ಲಿ ಕನಿಷ್ಠ 53 ಜನರ ಪ್ರಾಣವನ್ನು ಕಳೆದುಕೊಂಡರು. ಮೃತಪಟ್ಟ ಸಂತ್ರಸ್ಥರಲ್ಲಿ ಅಲ್ಪಸಂಖ್ಯಾತ ಮುಸ್ಲಿಮ ಸಮುದಾಯದವರೇ ಹೆಚ್ಚು. ಮೇಲಿನ ಎರಡು ವರದಿಗಳ ಕಾರಣದಿಂದಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾವನ್ನು ತನ್ನ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ಮತ್ತು ಬೆದರಿಕೆ ಮುಲಕ ಸರ್ಕಾರವು ಹದ್ದು ಬಸ್ತಿನಲ್ಲಿಡಲು ಯೋಜಿಸಿದೆ ಎಂದು ಹೇಳಿದೆ.
ಆಮ್ನೆಸ್ಟಿಯು ಮೊದಲ ಬಾರಿಗೆ 2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ ಸಿಬ್ಬಂದಿಗಳು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾದವರು ಎಂಬ ವರದಿಯನ್ನು ಆಧರಿಸಿದ ಅಭಿಯಾನದ ಸಂದರ್ಭದಲ್ಲಿ, ಬಲಪಂಥೀಯ ವಿದ್ಯಾರ್ಥಿಗಳು ಗುಂಪಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನೆ ಮಾಡಿತು. ಮರುದಿನ ಆಮ್ನೆಸ್ಟಿ ಇಂಡಿಯಾ ವಿರುದ್ಧ ದೇಶದ್ರೋಹ ಆರೋಪ ಸೇರಿದಂತೆ ಎಫ್ಐಆರ್ ದಾಖಲಾಗಿದ್ದು, ಧಾಳಿ ನಡೆಯುವ ಭೀತಿಯಿಂದ ಸಂಘಟನೆಯು ತನ್ನ ಬೆಂಗಳೂರು ಮತ್ತು ದೆಹಲಿ ಕಚೇರಿಯನ್ನು ಕೆಲವು ದಿನಗಳವರೆಗೆ ಮುಚ್ಚಿಡಬೇಕಾಯಿತು.
ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯುವುದು ಬಿಜೆಪಿ ನೇತೃತ್ವದ ಸರ್ಕಾರದ ಕೋಪಕ್ಕೆ ಕಾರಣವಾಯಿತು. ಕಳೆದ ನವೆಂಬರ್ 15, 2019 ರಂದು, ಸಾಕ್ಷ್ಯ ಹೇಳಿದ ಎರಡು ವಾರಗಳ ನಂತರ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಕಚೇರಿಗಳು ಮತ್ತು ಅದರ ನಿರ್ದೇಶಕರೊಬ್ಬರ ನಿವಾಸದ ಮೇಲೆ ಸಿಬಿಐ ಮತ್ತೆ ಧಾಳಿ ನಡೆಸಿತು.. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯ ಶಂಕಿತ ಆರೋಪಗಳ ಬಗ್ಗೆ ಗೃಹ ಸಚಿವಾಲಯ ಸಲ್ಲಿಸಿದ ಮೊದಲ ಮಾಹಿತಿ ವರದಿಯ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯಂತಹ ಇತರ ಕಾನೂನುಗಳ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲು ಅದು ಸೂಚಿಸಿದೆ. ಅಮ್ನೆಸ್ಟಿ ಇಂಟರ್ನ್ಯಾಷನಲ್‌ನ ಆಕ್ಟಿಂಗ್ ಸೆಕ್ರೆಟರಿ ಜನರಲ್ ಉಲೀ ವೆರ್ಹಾರ್ ಅವರು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಇದು ಭಾರತ ಸರ್ಕಾರದ ಅತಿರೇಕದ ಮತ್ತು ನಾಚಿಕೆಗೇಡಿನ ಕಾರ್ಯವಾಗಿದೆ, ಇದು ಸದ್ಯಕ್ಕೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾನವ ಹಕ್ಕುಗಳ ಕೆಲಸವನ್ನು ನಿಲ್ಲಿಸುವಂತೆ ಒತ್ತಡ ಹೇರಿದೆ. ಅದರೆ, ಇದು ಭಾರತದಲ್ಲಿ ಮಾನವ ಹಕ್ಕುಗಳ ಹೋರಾಟಕ್ಕೆ ನಮ್ಮ ದೃಢವಾದ ಬದ್ಧತೆ ಮತ್ತು ಕಾರ್ಯದ ಅಂತ್ಯವಲ್ಲ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿನ ಮಾನವ ಹಕ್ಕುಗಳ ಆಂದೋಲನದಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನಮ್ಮ ಪಾತ್ರವನ್ನು ಹೇಗೆ ಮುಂದುವರಿಸಬಹುದು ಎಂಬುದನ್ನು ನಿರ್ಧರಿಸಲು ಕಾರ್ಯ ಯೋಜನೆ ಹಾಕಿಕೊಳ್ಳುತ್ತೇವೆ ಎಂದಿದ್ದಾರೆ.
ಈ ನಡುವೆ ರಾಜ್ಯದ ಕನ್ನಡ ಮತ್ತು ಸಂಸ್ಕ್ರೃತಿ ಇಲಾಖೆಯ ಸಚಿವ ಸಿಟಿ ರವಿ ಅವರು ಟ್ವೀಟ್ ಮೂಲಕ ಅಮ್ನೆಸ್ಟಿ ಇಂಟರ್ನ್ಯಾಷನಲ್ ಗೆ ವಿದಾಯ ಎಂದು ಬರೆದುಕೊಂಡಿದ್ದು, ಭಾರತ ವಿರೋಧಿಗಳಾದ ಭಯೋತ್ಪಾದಕರು, ತುಕ್ಡೆ ತುಕ್ಡೆ ಗ್ಯಾಂಗ್, ರಕ್ತ ಗಾಹಿ ಕಮ್ಯುನಿಸ್ಟರು, ಮತಾಂತರ ಮಾಫಿಯಾ, ನಗರ ನಕ್ಸಲ್ಸ್ ಗಳನ್ನು ನೀವು ಮಿಸ್ ಮಾಡಿಕೊಳ್ಳುತ್ತೀರ. ನಿಮ್ಮ ಭಾರತ ದ್ವೇಷದ ಅಂಗಡಿಯನ್ನು ನೀವು ಮತ್ತೆ ತೆರೆಯಲು ಆಗುವುದಿಲ್ಲ ಎಂದು ಭಾವಿಸುತ್ತೇನೆ.ಎಂದು ಹೇಳಿದ್ದಾರೆ.
ಇದರಿಂದಾಗಿ ಬಿಜೆಪಿ ಸರ್ಕಾರವು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಬಗ್ಗೆ ಹೊಂದಿರುವ ದ್ವೇಷ ಭಾವನೆ ಬಹಿರಂಗಗೊಂಡಂತಾಗಿದೆ.