ಕರೋನಾ ಸೋಂಕು ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಬಾರಿ ನಗರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ಪಂತ್ ಮಾರ್ಗಸೂಚಿ ಹೊರಡಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಡಿ31 2020 ರಿಂದ ಜ1 2021ರ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇದಾಜ್ಞೆ ಸಂದರ್ಭದಲ್ಲಿರುವ ನಿರ್ಬಂಧಗಳು
1. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ಹಾಗು ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂದ ಹೇರಲಾಗಿದೆ.
2. ಸಾರ್ವಜನಿಕ ಸ್ಥಳಗಳ್ಲಲಿ, ರಸ್ತೆಗಳಲ್ಲಿ, ಮೈದಾನ ಸೇರಿದಂತೆ ಖಾಲಿಯಿರುವ ಸ್ಥಳಗಳಲ್ಲಿ ಹೊಸವರ್ಷಾಚರಣೆ ಆಚರಿಸಲು ಗುಂಪು ಸೇರುವಂತಿಲ್ಲ.
3. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ, ಖಾಸಗಿ ಹೋಟೆಲ್ ಕಬ್ಲ್ಗಳಲ್ಲಿ ಸಂಭ್ರಮಾಚರಣೆಗೆ ಅಡ್ಡಿ ಇರುವುದಿಲ್ಲ, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶವಿರುವುದಿಲ್ಲ, ಉದ್ಯಾನವನ, ಮೈದಾನಗಳಲ್ಲಿ ಜನ ಗುಂಪು ಸೇರುವಂತಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
4. ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್ ಹೌಸ್ಗಳಲ್ಲಿ ಡಿಜೆ, ಸಂಗೀತ ಕಾರ್ಯಕ್ರಮ, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ, ಆದರೆ ಎಂದಿನಂತೆ ವ್ಯವಹಾರಕ್ಕೆ ಅವಕಾಶವಿರುತ್ತದೆ.
5. ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್ ಇತರೆ ಸಂಸ್ಥೆಗಳಲ್ಲಿ ಮುಂಚಿತವಾಗಿ ಬಕ್ಕಿಂಗ್ ಮಾಡಿದವರಿಗೆ ಮಾತ್ರಾ ಅವಕಾಶನೀಡಬೇಕು. ಬುಕ್ಕಿಂಗ್ ದಾಖಲೆ ಇರುವುದು ಕಡ್ಡಾಯ.
6. ನಿರ್ಬಂಧಿಸಲಾದ ಪ್ರದೇಶಗಳ ಮೇಲೆ ಪೊಲೀಸ್ ಉಪ ಆಯುಕ್ತರು ಸೇರಿದಂತೆ ಸಿಬ್ಬಂದಿಗಳು ಕಣ್ಣಿಟ್ಟಿರುತ್ತಾರೆ.
7. ಸೂಚಿಸಲಾದ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳ ಮುಂದೆ ಜನಜಂಗುಳಿ ಇರುವಂತಿಲ್ಲ, ಪ್ರವೇಶಕ್ಕಾಗಿ ಹೆಚ್ಚು ಸಮಯ ಹೊರಗೆಯೇ ಕಾಯುವಂತೆಯೂ ಇಲ್ಲ,
8. ಈ ಮಾರ್ಗ ಸೂಚಿಯನ್ನು ನಗರದ ಎಲ್ಲಾ ಮಾಲ್, ರೆಸ್ಟೋರೆಂಟ್, ಪಬ್, ಹೋಟೆಲ್ಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇಬೇಕು.
9. ಸಂಚಾರ ನಿಯಮದಲ್ಲಿಯೂ ನಿರ್ಬಂಧ ಹೇರಲಾಗುತ್ತಿದ್ದು, ಇದಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.

ಬ್ರಿಟನ್ನಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಪ್ರಭೇದದ ಕರೋನಾ ಹಿನ್ನಲೆ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೊಸ ವರ್ಷದ ವೇಳೆ ಈ ಮೇಲಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.