ಕರೋನಾ ಸೋಂಕು ಲೆಕ್ಕಾಚಾರ ಭಾರತ ಸರ್ಕಾರದ ಅಂದಾಜನ್ನು ಮೀರಿ ಹೋಗುತ್ತಿದೆ. ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಭಾರತ ದಾಪುಗಾಲು ಹಾಕಲಿದ್ಯಾ ಎನ್ನುವ ಅನುಮಾನ ಎಲ್ಲಾ ಭಾರತೀಯರನ್ನೂ ಕಾಡಲು ಶುರುವಾಗಿದೆ. ಭಾರತದಲ್ಲಿ ಸೋಂಕು ಹರಡುತ್ತಿರುವ ವೇಗ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಮಾಹಿತಿಯನ್ನು ತಜ್ಞರು ಕೊಟ್ಟಿದ್ದಾರೆ. ಚೀನಾದ ವಿಶ್ವವಿದ್ಯಾಲಯ ಅಧ್ಯಯನಕಾರರು ಜೂನ್ ಮಧ್ಯಂತರದಲ್ಲಿ ಪ್ರತಿದಿನ 16 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಲಿದ್ದಾರೆ ಎಂದಿದೆ. ಇನ್ನೂ ವಿಶ್ವದಲ್ಲೇ ಅತ್ಯಧಿಕ ಸೋಂಕು ಹೊಂದಿರುವ ಅಮೆರಿಕ ಭಾರತ ಮತ್ತು ಚೀನಾದಲ್ಲಿ ನಮಗಿಂತಲೂ ಹೆಚ್ಚು ಸೋಂಕಿತರಿದ್ದಾರೆ. ಆದರೆ ತಪಾಸಣೆ ನಡೆಸುತ್ತಿಲ್ಲ. ಹಾಗಾಗಿ ಸೋಂಕಿತರು ಹೆಚ್ಚಾಗಿ ಪತ್ತೆಯಾಗುತ್ತಿಲ್ಲ. ಅನುಮಾನವಿದ್ದರೆ ನಾವು ತಪಾಸಣೆ ಮಾಡಿದ ರೀತಿಯಲ್ಲಿ ನೀವೂ ಕೂಡ ಸಾಮೂಹಿಕವಾಗಿ ತಪಾಸಣೆ ಮಾಡಿ ನೋಡಿ ಎಂದಿದ್ದಾರೆ.
ವಿಶ್ವದ ಸೋಂಕಿತರ ಅಂಕಿಅಂಶದ ಲೆಕ್ಕಾಚಾರದಲ್ಲಿ ಭಾರತ ಅತ್ಯಂತ ವೇಗವಾಗಿ 5ನೇ ಸ್ಥಾನಕ್ಕೇರಿದೆ. ಒಂದು ತಿಂಗಳ ಹಿಂದೆ ನೂರಾರು ಜನರ ಸಾವಿನಿಂದ ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿದ್ದ ಇಟಲಿ ದೇಶವನ್ನು ಹಿಂದಿಕ್ಕಿದೆ. ಇಟಲಿಯಲ್ಲಿ ದಿನವೊಂದಕ್ಕೆ ನೂರಿನ್ನೂರು ಹೊಸ ಕರೋನಾ ಕೇಸ್ಗಳು ಪತ್ತೆಯಾಗುತ್ತಿವೆ. 70 ರಿಂದ 80ರ ಆಸುಪಾಸಿನಲ್ಲೇ ಸಾವುಗಳ ಸಂಖ್ಯೆ ಸಾಗುತ್ತಿದೆ. ಅದೇ ರೀತಿ ಸೋಂಕಿತರ ಸಂಖ್ಯೆ 2,34,998 ಆಗಿದೆ. ಇನ್ನು 2,57,161 ಕರೋನಾ ಸೋಂಕಿತರನ್ನು ಹೊಂದಿರುವ ಭಾರತದಲ್ಲಿ ಶನಿವಾರದಂದು 10,539 ಪ್ರಕರಣಗಳು ಪತ್ತೆಯಾಗಿವೆ. ಇಡೀ ವಿಶ್ವದಲ್ಲೇ ಸಾವಿನ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಸರಾಸರಿ ಹೊಂದಿದ್ದೇವೆ ಎಂದು ಬೀಗುತ್ತಿದ್ದ ಭಾರತದಲ್ಲಿ ಇದೀಗ ಸಾವಿನ ಪ್ರಮಾಣವೂ ಅಧಿಕವಾಗಿದೆ. ದಿನವೊಂದಕ್ಕೆ ವಿಶ್ವದಲ್ಲಿ ಭಾರತದಲ್ಲೇ 250ಕ್ಕೂ ಹೆಚ್ಚು ಮಂದಿ ಮರಣ ಹೊಂದುತ್ತಿದ್ದು, ಕೆಲವೇ ಕೆಲವು ದಿನಗಳಲ್ಲಿ ಸಾವಿನ ಸರಾಸರಿಯೂ ಶೇಕಡ 6 ರಿಂದ ಏರಿಕೆಯಾಗುವ ಸಂಭವವಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪುತ್ತಿದ್ದರೂ ಭಾರತ ಸರ್ಕಾರ ಮಾತ್ರ ಜನರ ಬಗ್ಗೆ ನಿಷ್ಕಾಳಜಿ ಪ್ರದರ್ಶನ ತೋರಿಸುತ್ತಲೇ ಇದೆ. ಅವೈಜ್ಞಾನಿ ಲಾಕ್‌ಡೌನ್ ಮಾಡಿದ ಬಳಿಕ ವಲಸೆ ಕಾರ್ಮಿಕರನ್ನು ರವಾನೆ ಮಾಡಿ ಬೆನ್ನು ತಟ್ಟಿಕೊಳ್ಳಲು ಮುಂದಾಗಿತ್ತು. ವಲಸೆ ಕಾರ್ಮಿಕರನ್ನು ಹುಟ್ಟೂರಿಗೆ ಕಳುಹಿಸಿ ಕೊಡುವಲ್ಲಿ ಆದಂತ ಅತಾಚುರ್ಯದಿಂದ ಇಷ್ಟೆಲ್ಲಾ ಸೋಂಕಿತರು ಹೆಚ್ಚಾಗಲು ಕಾರಣವಾಯ್ತು. ಇದೀಗ ಇಂದಿನಿಂದ ಅನ್ಲಾಕ್ ಶುರುವಾಗುತ್ತಿದೆ. ಮಾಲ್ಗಳು, ಹೋಟೆಲ್ಗಳು, ರೆಸ್ಟೋರೆಂಟ್, ದೇವಸ್ಥಾನಗಳು, ಪ್ರಾಣಿ ಸಂಗ್ರಹಾಲಯಗಳನ್ನು ತೆರೆಯುವುದಕ್ಕೆ ಒಪ್ಪಿಗೆ ಸೂಚಿಸಿದೆ. ಎಲ್ಲದರಲ್ಲೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ, ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡಬೇಕು ಎಂದಿದೆ. ಇದೇ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಹುಟ್ಟೂರಿಗೆ ಕಳುಹಿಸಿ ಕೊಡುವ ಸಂದರ್ಭದಲ್ಲೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸೇವಾ ಸಿಂಧು ಮೂಲಕ ಕಾರ್ಮಿಕರ ದಾಖಲೆಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡೇ ಈ ಮಟ್ಟದಲ್ಲಿ ಸೋಂಕು ಹರಡುತ್ತಿದೆ.
ಆದರೆ ಇದೀಗ ಯಾರು ಎಲ್ಲಿ ಹೋದರು..! ಯಾರು ಎಲ್ಲಿ ಬಂದರು ಎನ್ನುವುದನ್ನೇ ಪತ್ತೆ ಮಾಡಲು ಸಾಧ್ಯವಾಗದಂತೆ ಎಲ್ಲವೂ ಖುಲ್ಲಂ ಖುಲ್ಲ ಆಗುತ್ತಿದೆ. ಇನ್ನೂ ಮುಂದಿನ ಭಾರತದ ಪರಿಸ್ಥಿತಿ ನೀವೇ ಊಹೇ ಮಾಡಿಕೊಂಡರೆ ಒಳಿತು. ಭಾರತ ಸರ್ಕಾರಕ್ಕೆ ತನ್ನ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಕೇಂದ್ರ ಸಚಿವರ ಹೇಳಿಕೆಯೊಂದೇ ಸಾಕ್ಷಿ. ಭಾರತ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಕ್ಕೆ ತಯಾರಿ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಯಾವ ದೇಶ ವಿಮಾನ ಸಂಚಾರಕ್ಕೆ ಅವಕಾಶ ನೀಡುತ್ತದೆಯೋ ಆ ರಾಷ್ಟ್ರಗಳಿಗೆ ವಿಮಾನ ಸಂಚಾರ ಆರಂಭ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಒಂದೆರಡು ಸೋಂಕು ಪತ್ತೆಯಾಗುತ್ತಿದ್ದ ಕೂಡಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದು ಮಾಡಿ, ಭಾರತದಲ್ಲಿ ಪತ್ತೆಯಾಗಿರುವ ಸೋಂಕಿತರನ್ನು ಚಿಕಿತ್ಸೆ ಕೊಟ್ಟು ಗುಣಮುಖರನ್ನಾಗಿ ಮಾಡಿದ್ದರೆ, ಇಷ್ಟೆಲ್ಲಾ ಕರೋನಾ ರಾಮಾಯಣ ಇರುತ್ತಲೇ ಇರಲಿಲ್ಲ. ಆದರೆ ಆಗ ಜಾಣ ನಿದ್ರೆಗೆ ಜಾರಿದ್ದ ಭಾರತ ಸರ್ಕಾರ ಇದೀಗ ಮತ್ತೊಂದು ಎಡವಟ್ಟು ಮಾಡಲು ಮುಂದಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಸಾವಿನ ಸರಾಸರಿ ಎಲ್ಲಿದೆ..?
ಭಾರತದಲ್ಲಿ ಭಾನುವಾರದ ರಾತ್ರಿ ಲೆಕ್ಕಾಚಾರದಂತೆ 2,57,161 ಜನರಿಗೆ ಸೋಂಕು ತಗುಲಿದ್ದು, 7,206 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ. ಆದರೆ ವಿಷಯ ಇದಲ್ಲ, ಭಾರತದಲ್ಲಿ ಸೋಂಕಿತರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 85975 ಜನರಲ್ಲಿ ಸೋಂಕು ಕಾಣೀಸಿಕೊಂಡಿದೆ. 3060 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಎರಡನೇ ಸ್ಥಾನದಲ್ಲಿ ತಮಿಳುನಾಡು ಬಂದು ನಿಂತಿದ್ದು 31, 687 ಜನ ಸೋಂಕಿತರು ಇದ್ದು, 272 ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 28,936 ಜನ ಸೋಂಕಿತರಿದ್ದು 812 ಜನ ಸಾವನ್ನಪ್ಪಿದ್ದಾರೆ. ಗುಜರಾತ್‌ನಲ್ಲಿ 20,097 ಸೋಂಕಿತರಿದ್ದು, ಸಾವಿನ 1249 ಆಗಿದೆ, ರಾಜಸ್ಥಾನದಲ್ಲಿ 10599 ಜನರಿಗೆ ಸೋಂಕು ಹರಡಿದ್ದು, 240 ಜನರು ಅಸುನೀಗಿದ್ದಾರೆ. ಕರ್ನಾಟಕದಲ್ಲಿ 5452 ಜನರಿಗೆ ಸೋಂಕು ಬಂದಿದ್ದು, 61 ಜನರು ಸಾವನ್ನಪ್ಪಿದ್ದು ದೇಶದೊಳಗಿನ ಸೋಂಕಿತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ ಕರ್ನಾಟಕ.
ಇನ್ನೊಂದು ವಿಶೇಷ ಎಂದರೆ, ಇಡೀ ಭಾರತದ ಮೆಟ್ರೋ ನಗರಗಳ ಪೈಕಿ, ಗುಜರಾತ್‌ನ ಅಹ್ಮದಾಬಾದ್ ನಗರ ಸೋಂಕಿತರು ಹಾಗೂ ಸಾವಿನ ಸಾರಾಸರಿಯಲ್ಲಿ ಉಳಿದ ಮೆಟ್ರೋ ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಮೆಟ್ರೋ ಸಿಟಿಗಳ ಪೈಕಿ ಸದ್ಯಲ್ಲೆ ಬೆಂಗಳೂರು ಸೇಫ್ ಆಗಿದೆ. ಇಡೀ ದೇಶದ ಮೆಟ್ರೋ ನಗರಗಳ ಪೈಕಿ ಕಡಿಮೆ ಸೋಂಕಿತರು ಇರುವುದು ಬೆಂಗಳೂರಿನಲ್ಲಿ. ಸಾವಿನ ಸರಾಸರಿಯೂ ತುಂಬಾ ಕಡಿಮೆ ಇದೆ.
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು, ಜನಸಂಖ್ಯಾ ಆಧಾರದಲ್ಲಿ ಲೆಕ್ಕಾ ಹಾಕಿದಾಗ ಉಳಿದ ನಗರಕ್ಕಿಂತಾ ತುಂಬಾ ಅಪಾಯಕಾರಿ ಮಟ್ಟದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಸಾವಿನ ಸರಾಸರಿಯಲ್ಲೂ ಅಹ್ಮದಾಬಾದ್ ನಂಬರ್ ಒನ್ ಸ್ಥಾನದಲ್ಲಿದೆ. ಪ್ರತೀ 10 ಲಕ್ಷ ಜನರಿಗೆ ಲೆಕ್ಕಾ ಹಾಕಿದಾಗ ಅಹ್ಮದಾಬಾದ್‌ನಲ್ಲಿ 115 ಜನರ ಸಾವನ್ನಪ್ಪುತ್ತಿದ್ದಾರೆ. 2ನೇ ಸ್ಥಾನಲ್ಲಿರುವ ಮುಂಬೈನಲ್ಲಿ 80 ಜನರ ಸಾವು ಆದರೆ ಬೆಂಗಳೂರು ಕಡೆ ಸ್ಥಾನದಲ್ಲಿದ್ದು, ಪ್ರತೀ 10 ಲಕ್ಷಕ್ಕೆ 1 ಸಾವು ಅಷ್ಟೇ ಆಗುತ್ತಿದೆ. ಅದೇ ರೀತಿ ಸಾವಿನ ಸರಾಸರಿಯಲ್ಲೂ ಅಹ್ಮದಾಬಾದ್‌ಗೆ ಮೊದಲ ಸ್ಥಾನ ಲಭಿಸಿದ್ದು, ಶೇಕಡ 6.9 ರಷ್ಟು ಇದೆ.
ಮಹಾರಾಷ್ಟ್ರದಲ್ಲಿ ಶೇಕಡ 3.1 ಇದ್ದರೆ, ಪುಣೆಯಲ್ಲಿ 4.4ರಷ್ಟಿದೆ. ದೆಹಲಿಯಲ್ಲಿ 2.6 ಕೊಲ್ಕತ್ತಾದಲ್ಲಿ ಶೇಕಡ 6.4 ರಷ್ಟಿದೆ. ಸೂರತ್‌ನಲ್ಲಿ ಶೇಕಡ 3.9 ಇದ್ದರೆ, ಹೈದ್ರಾಬಾದ್‌ನಲ್ಲಿ ಶೇಕಡ 1.3, ಬೆಂಗಳೂರು ಶೇಕಡ 3.3 ಇದೆ. ಆದರೆ ಚೆನ್ನೈ ಸಾವಿನ ಸಂಖ್ಯೆಯಲ್ಲಿ ಶೇಕಡ 0.9ರಷ್ಟಿದೆ ಎಂದು ಅಂಕಿ ಅಂಶಗಳು ಸಾಬೀತು ಮಾಡಿವೆ. 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 9 ಮೆಟ್ರೋ ನಗರಗಳ ಪೈಕಿ ಅಂಕಿಸಂಖ್ಯೆ ವರದಿ ಸಿದ್ದ ಮಾಡಲಾಗಿದ್ದು, ಬೆಂಗಳೂರು ಹೆಚ್ಚು ಸೇಫ್ ಎನ್ನಲಾಗಿದ್ದು, ಮೋದಿ ತವರು ಗುಜರಾತ್‌ನ ಅಹ್ಮದಾಬಾದ್ ನಗರ ಅಪಾಯ ಮಟ್ಟದಲ್ಲಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮೊಂಡುತನ ಮುಂದುವರಿದೆ.