Also Read: ಬೆಂಗಳೂರು ಗಲಭೆ ಸುತ್ತ ಮುತ್ತ…
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್, ಕಾಂಗ್ರೆಸ್ ಕಾರ್ಪೋರೇಟರ್ ಆರ್.ಸಂಪತ್ ರಾಜ್ ಅವರು ಕೋವಿಡ್ -19 ಗೆ ಚಿಕಿತ್ಸೆ ಪಡೆದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ‘ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Also Read: ಸದನದಲ್ಲಿ ಕಾವೇರಿದ ಬೆಂಗಳೂರು ಗಲಭೆ ಚರ್ಚೆ
ಆಗಸ್ಟ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಂಪತ್ ರಾಜ್ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿರುವುದನ್ನು ಅರಿತ ಪೊಲೀಸರು, ಆಸ್ಪತ್ರೆಗೆ ನೀಡಿದಾಗ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ ವೇಣುಗೋಪಾಲ್ ಅವರು ಇದನ್ನು ಧೃಡೀಕರಿಸಿದ್ದು, ನಾವು ಅವರನ್ನು ಹುಡುಕುತ್ತಿದ್ದೇವೆ ಎಂದು ಪಿಟಿಐಗೆ ತಿಳಿಸಿದ್ದಾರೆ.
Also Read: ಬೆಂಗಳೂರು ಗಲಭೆ ಮತ್ತು ಉತ್ತರವಿಲ್ಲದ ಸಾಲುಸಾಲು ಪ್ರಶ್ನೆಗಳು!
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಪತ್ ರಾಜ್ ಅವರನ್ನು ಡಿಸ್‌ಚಾರ್ಜ್ ಮಾಡುವ ಮೊದಲು ಪೊಲೀಸರಿಗೆ ಮಾಹಿತಿ ನೀಡುವಂತೆ ವೇಣುಗೋಪಾಲ್ ಅಕ್ಟೋಬರ್ 7 ರಂದು ಆಸ್ಪತ್ರೆ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯು ಪೊಲೀಸರಿಗೆ ಮಾಹಿತಿ ನೀಡದೆ ಸಂಪತ್ ರನ್ನು ಬಿಡುಗಡೆ ಮಾಡಿದೆ, ಅದರ ಬಳಿಕ ಆಸ್ಪತ್ರೆ ಅಧಿಕಾರಿಗಳಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Also Read: ಬೆಂಗಳೂರು ಗಲಭೆ: ತನಿಖೆಗೆ ಕಾಂಗ್ರೆಸ್ ಹಿಂಜರಿಯುತ್ತಿದೆಯಾ?
Also Read: ಬೆಂಗಳೂರು ಗಲಭೆ: ರಾಜಕೀಯ ನಾಯಕರು ಏನನ್ನುತ್ತಾರೆ?
ಆಗಸ್ಟ್ 11 ರಂದು ಕಾಂಗ್ರೆಸ್ ಶಾಸಕ ಆರ್.ಅಖಂಡ ಶ್ರೀನಿವಾಸ ಮೂರ್ತಿ, ಅವರ ಸಹೋದರಿ ನಿವಾಸಗಳಿಗೆ, ಹಾಗೂ ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿತ್ತು. ಶಾಸಕರ ಸಂಬಂಧಿಕ ನವೀನ್ ಎಂಬಾತನ ಸಾಮಾಜಿಕ ಮಾಧ್ಯಮ ಪೋಸ್ಟ್ ವಿರುದ್ಧ ನಡೆಸಿದ ಪ್ರತಿಭಟನೆ ಗಲಭೆ ರೂಪ ತಾಳಿ ಹಲವಾರು ವಾಹನ, ಆಸ್ತಿ ಹಾನಿಯಾಗಿದ್ದವು. ಗಲಭೆ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು.
ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯನ್ನು ರಾಜಕೀಯವಾಗಿ ಮುಗಿಸಲು ಶಾಸಕರ ವಿರುದ್ಧ ಸಂಪತ್ ರಾಜ್ ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ.
Also Read: ಬೆಂಗಳೂರು ಗಲಭೆ: ಸರ್ಕಾರಕ್ಕೆ 13 ಅಂಶಗಳ ಪತ್ರ ಬರೆದ ಸಿದ್ದರಾಮಯ್ಯ..!
Also Read: ಬೆಂಗಳೂರು ಗಲಭೆ: ದಲಿತ vs ಮುಸ್ಲಿಂ ಆಯಾಮ ನೀಡಿದ ಬಿಎಲ್ ಸಂತೋಷ್‌ಗೆ ಜ಼ಮೀರ್ ಕ್ಲಾಸ್