ರಾಜ್ಯದಲ್ಲಿ ಬಳ್ಳಾರಿ (Bellary) ಮತ್ತು ಬೆಳಗಾವಿ (Belagavi) ಜಿಲ್ಲೆಗಳ ಬಾಣಂತಿಯರ ಸಾವಿನ ಬೆನ್ನಲ್ಲೇ ಬೆಂಗಳೂರಲ್ಲೂ (Bangalore) ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ,ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದ್ರೆ ಇದೀಗ ನಾಗರಾಬಾವಿ ಫೊರ್ಟಿಸ್ ಆಸ್ಪತ್ರೆಯಲ್ಲಿ (Fortis Hospital) ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಅನುಷಾ ಸಾವಾಗಿದೆ ಎಂದು ಆರೋಪ ಮಾಡಿದ್ದಾರೆ.ಅನುಷ ಮೂಲತ: ಕಡೂರು ತಾಲೂಕಿನ ಗರ್ಜೆ ಗ್ರಾಮದವರು.ಅವರಿಗೆ ತರೀಕೆರೆ ರಾಜ್ ನರ್ಸಿಂಗ್ ಹೋಮ್ನಲ್ಲಿ ನಾರ್ಮಲ್ ಡೆಲಿವರಿಯಾಗಿತ್ತು.
ಆದ್ರೆ ಫ್ರಿ ಡೆಲಿವರಿ ಸ್ಕ್ಯಾನಿಂಗ್ ಮಾಡಿದಾಗ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದ್ದು, ಅದೇ ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಆಪರೇಷನ್ ಮಾಡಲಾಗಿದೆ.ಅನುಷಾಗೆ ಡೆಲಿವರಿಯಾದ ಒಂದೇ ತಿಂಗಳಿಗೆ ಆಪರೇಷನ್ ಮಾಡಲಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ.
ಈ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಅನುಷಾಗೆ ಆಪರೇಷನ್ ಮಾಡುವ ವೇಳೆ ಕರುಳಿಗೆ ಡ್ಯಾಮೇಜ್ ಆಗಿದ್ದು, ಈ ವಿಚಾರವನ್ನ ವೈದ್ಯರು ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಆ ನಂತರ ಮನೆಗೆ ತೆರಳಿದ ಮೇಲೆ ಬಾಣಂತಿಯ ಕೈ ಕಾಲಿನಲ್ಲಿ ಊತ ಕಾಣಿಸಿಕಿಂಡಿದೆ.ಇದರಿಂದ ಕುಟುಂಬಸ್ಥರು ಅನುಷಾರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಎಲ್ಲಾ ನಾರ್ಮಲ್ ಇದೆ ,ಏನೂ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾಗಿ ಗೊತ್ತಾಗಿದೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಕುಟುಂಬಸ್ಥರು ಮತ್ತೆ ಸ್ಥಳೀಯ ಆಸ್ಪತ್ರೆಗೆ ಅನುಷಾ ಅವರನ್ನು ಕರೆದೊಯ್ದಿದ್ದಾರೆ.
ಈ ವೇಳೆ ಅನುಷಾ ಅವರಿಗೆ ಜಾಂಡಿಸ್ ಇದೆ ಎಂದು ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.ಇದರಿಂದ ಅನುಷರನ್ನು ಕುಟುಂಬಸ್ಥರು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ವೇಳೆ ಅನುಷಾಗೆ ಎರಡೆರಡು ಆಪರೇಷನ್ ಮಾಡಲಾಗಿದೆ. ಶಿವಮೊಗ್ಗದಲ್ಲಿ ಮೊದಲ ಆಪರೇಷನ್, ನಂತರ ಫೋರ್ಟಿಸ್ ಆಸ್ಪತ್ರೆಯಲ್ಲಿ ಎರಡನೇ ಅಪರೇಷನ್. ಆಪರೇಷನ್ ಆದ್ಮೇಲೆ ಇದುವರೆಗೆ ಅನುಷಾ ಕಣ್ಣು ಬಿಟ್ಟಿಲ್ಲ. ಇವತ್ತು ಅನುಷಾ ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಫೋರ್ಟಿಸ್ ನವರು ಸರಿಯಾಗಿ ನೋಡ್ಕೊಂಡಿಲ್ಲವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.