ಎಲೆಕ್ಟೊರಲ್ ಬಾಂಡ್ ವಿಚಾರದಲ್ಲಿ ಬಿಜೆಪಿ ಮತ್ತು SBI ಪರಸ್ಪರ ಒಪ್ಪಂದದ ಮೇಲೆ ಡೀಲ್ ಮಾಡಿಕೊಂಡು ದೇಶದ ಜನರ ಕಣ್ಣಿಗೆ ಮಣ್ಣೆರೆಚಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಫೆಬ್ರವರಿ ೧೫ ರಂದು ಎಲೆಕ್ಟೊರಲ್ ಬಾಂಡ್ ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಹತದ್ವದ ಆದೇಶ ಹೊರಡಿಸಿತ್ತು. ಎಲೆಕ್ಟೊರಲ್ ಬಾಂಡ್ಸ್ ಸಾಂವಿಧಾನಿಕವಲ್ಲ. ರಾಜಕೀಯ ಪಕ್ಷಗಳು ಇನ್ಮುಂದೆ ಎಲೆಕ್ಟೊರಲ್ ಬಾಂಡ್ ಗಳ ಮೂಲಕ ದೇಣಿಗೆ ಸ್ವೀಕಾರ ಮಾಡುವಂತಿಲ್ಲ ಮತ್ತು ೨೦೧೯ ರ ಏಪ್ರಿಲ್ ನಂತರ ಯಾರೆಲ್ಲಾ ಬಾಂಡ್ ಗಳನ್ನ ಖರೀದಿಸೋದ್ದಾರೆ ಅವರ ವಿವರ ಮತ್ತು ಖರೀದಿ ವೆಚ್ಚವನ್ನ SBI ಮಾರ್ಚ್ ೬ರ ಒಳಗಾಗಿ ಚುನಾವಣಾ ಆಯೋಗಕ್ಕೆ ನೀಡಬೇಕು ಮತ್ತು ಒಂದು ವಾರದೊಳಗೆ ಚುನಾವಣಾ ಆಯೋಗ ಈ ಮಾಹಿತಿಯನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತ್ತು.
ಆದ್ರೆ ಇದೀಗ ಸದ್ಯಕ್ಕೆ ಈ ಯಾವುದೇ ಮಾಹಿತಿಯನ್ನ ಒದಗಿಸದ SBI ಜೂನ್ ೩೦ರ ವರೆಗೆ ಸಮಯಾವಕಾಶ ಕೋರಿ ಅರ್ಜಿ ಹಾಕಿದೆ. ಕಳೆದ ೫ ವರ್ಷಗಳಲ್ಲಿ ಸರಿ ಸುಮಾರು ೨೨ ಸಾವಿರಕ್ಕೂ ಅಧಿಕ ಬಾಂಡ್ ಗಳು ಖರೀದಿಯಾಗಿದ್ದು ಆ ಪೈಕಿ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿತ್ತು. ಈಗ ಅಷ್ಟೂ ದತ್ತಾಂಶ ಒದಗಿಸಬೇಕಿರೋದ್ರಿಂದ ಹೆಚ್ಚಿನ ಸಮಯಾವಕಾಶ ಬೇಕು ಎಂದು ಬ್ಯಾಂಕ್ ಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ. ಆದ್ರೆ ಇಲ್ಲಿ ಕಾಂಗ್ರೆಸ್ ಮಾಡ್ತಿರೋ ಆರೋಪವೇ ಬೇರೆ !
ಈ ಎಲೆಕ್ಟೊರಲ್ ಬಾಂಡ್ ಗಳ ಅತಿ ದೊಡ್ಡ ಫಲಾನುಭವಿ ಅಂದ್ರೆ ಅದು ಬಿಜೆಪಿ ಪಕ್ಷ ! ಒಟ್ಟಾರೆ ಬಾಂಡ್ ಖರೀದಿ ಮೊತ್ತದ ಶೇಕಡಾ ೫೫ ರಷ್ಟು ದೇಣಿಗೆ ಬಿಜೆಪಿ ಪಕ್ಷಕ್ಕೆ ಸೇರಿದೆ. ಈ ಪರಿಪ್ರಮಾಣದ ಹಣ ನೀಡಿದವರು ಯಾರು ? ಈ ಹಣದ ಮೂಲ ಏನು ? ಮತ್ತು ಎಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿರುವ ಹಿಂದಿನ ಹಿತಾಸಕ್ತಿ ಏನು ? ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಮುಂದಿನ ಉತ್ತರಿಸಬೇಕಿದೆ. ಕಾಂಗ್ರೆಸ್ ಆರೋಪದ ಪ್ರಕಾರ ಬಿಜೆಪಿ ತನ್ನೆಲ್ಲಾ ಈ ಅವ್ಯವಹಾರಗಳಿಗೆ SBI ಬ್ಯಾಂಕ್ ನ ಬಳಕೆ ಮಾಡಿಕೊಂಡಿದೆ ಅನ್ನೋದು.ದೇಣಿಗೆ ಪಡೆಯುವ ನೆಪದಲ್ಲಿ ಬಿಜೆಪಿ ಎಸಿಗಿರುವ ಅಕ್ರಮದಲ್ಲಿ SBI ಕೂಡ ಪಾಲುದಾರ ಅನ್ನೋದು ಕಾಂಗ್ರೆಸ್ ನ ಆರೋಪ .ಹಾಗಾಗಿ ಯಾವುದೇ ಮಾಹಿತಿ ನೀಡದೆ ಕಾಲಾವಕಾಶ ಕೇಳಿ ಸುಮ್ಮನೆ ಕಾಲಹರಣ ಮಾಡುವ ಉದ್ದೇಶ SBI ಬ್ಯಾಂಕ್ ನದ್ದು ಎಂದು ಕಾಂಗ್ರೆಸ್ ಆರೋಪಿಸಿದೆ.
ಒಟ್ನಲ್ಲಿ ೨೦೨೪ರ ಚುನಾವಣೆಗೂ ಮೊದಲು ಈ ಎಲ್ಲಾ ಮಾಹಿತಿಯೂ ದೇಶದ ಜನರ ಮುಂದೆ ಬರಬೇಕಿದ್ದು , ತಪ್ಪಿತಸ್ಥರು ಯಾರು , ಭ್ರಷ್ಟರು ಯಾರು ಎಂದು ಬಯಲು ಮಾಡೋದಾಗಿ ಕಾಂಗ್ರೆಸ್ ಹೇಳಿದೆ. SBI ಕೋರಿರುವ ಸಮಯಾವಕಾಶಕ್ಕೆ ಸುಪ್ರೀಂ ಕೋರ್ಟ್ ಯಾವ ರೀತಿ ಸ್ಪಂದಿಸಲಿದೆ..ಮುಂದಿನ ದಿನಗಳಲ್ಲಿ ಯಾವೆಲ್ಲಾ ಮಾಹಿತಿ ಹೊರಬರತ್ತೋ ಎಂಬ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ !