ಬಾಲಿವುಡ್ ಅಂಗಳದ ಸ್ಫುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇಡೀ ಭಾರತೀಯ ಚಿತ್ರರಂಗವನ್ನೇ ಕಂಗೆಡಿಸಿ ಬಿಟ್ಟಿದೆ. ಅದಾಗಲೇ ಹನ್ನೊಂದು ಸಿನೆಮಾಗಳಲ್ಲಿ ನಟಿಸಿ ಬಾಲಿವುಡ್ ನ ಖಾನ್, ಬಚ್ಚನ್, ಕಪೂರ್ ಗಳ ಮುಂದೆ ತನ್ನದೇ ಆದ ಹೆಸರು ಮಾಡಿಕೊಂಡ ನಟ. ತನ್ನ ವಿಭಿನ್ನ ಶೈಲಿಯ ನಟನೆ, ನೃತ್ಯದ ಮೂಲಕವೂ ಗಮನಸೆಳೆದಿದ್ದ Handsome Hero.. ಆದರೆ ಜೂನ್ 14 ರ ಭಾನುವಾರ ಮಧ್ಯಾಹ್ನ ಏಕಾಏಕಿ ತನ್ನ ಮುಂಬೈಯ ಬಾಂದ್ರಾದ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಅಷ್ಟಾಗುತ್ತಲೇ ಇಡೀ ಬಾಲಿವುಡ್ ಮಾತ್ರವಲ್ಲದೇ, ಭಾರತೀಯ ಚಿತ್ರರಂಗವೇ ಆಘಾತ ವ್ಯಕ್ತಪಡಿಸಿದೆ. ಇನ್ನೂ 34 ರ ಹರೆಯದ ನಟ ಸುಶಾಂತ್ ಯಾವ ಕಾರಣಕ್ಕಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡರು ಅನ್ನೋದು ಚರ್ಚೆಗೆ ಕಾರಣವಾಗಿದೆ.. ಆತನ ಮಾಜಿ ಮೆನೇಜರ್ ಆಗಿದ್ದ ಕರ್ನಾಟಕದ ಉಡುಪಿ ಮೂಲದ ದಿಶಾ ಸಾಲಿಯಾನ್ ಕೂಡಾ ಕೆಲವೇ ದಿನಗಳ ಹಿಂದಷ್ಟೇ ಮುಂಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸುಶಾಂತ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದಕ್ಕೊಂದು ತಾಳೆ ಹಾಕುವ, ಸಂಬಂಧ ಕಲ್ಪಿಸುವ ಕೆಲಸ ನಡೆಯುತ್ತಿದೆ. ಆದರೆ ಅದೆಲ್ಲ ಎಷ್ಟರ ಮಟ್ಟಿಗೆ ಸರಿ ಅನ್ನೋದು ತನಿಖೆಗೆ ಬಿಟ್ಟ ವಿಚಾರ.
ಆದರೆ ಸುಶಾಂತ್ ಸ್ನೇಹಿತರು ತಿಳಿಸಿದಂತೆ ಸುಶಾಂತ್ ಕಳೆದ ಕೆಲವು ಸಮಯದಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಅದಕ್ಕೂ ಇದೀಗ ಬಾಲಿವುಡ್ ಅಂಗಳದಲ್ಲಿ ವಿಭಿನ್ನ ಚರ್ಚೆಗಳು ಆರಂಭವಾಗಿದೆ. ಮೂಲತಃ ಬಿಹಾರ ರಾಜ್ಯದಿಂದ ಮುಂಬೈಗೆ ಬಂದ ಸುಶಾಂತ್ ನನ್ನ ʼಬಾಲಿವುಡ್ ಫ್ಯಾಮಿಲಿʼ ಒಪ್ಪಿಕೊಂಡಿರಲಿಲ್ಲ ಅನ್ನೋದಾಗಿ ಚರ್ಚೆಗಳು ಆರಂಭವಾಗಿದೆ. ಟ್ವಿಟ್ಟರ್ ನಲ್ಲಿ #boycottbollywood ಎಂಬ ಹ್ಯಾಷ್ ಟ್ಯಾಗ್ ಮೂಲಕ ಹರಿಹಾಯ್ದಿದ್ದಾರೆ. ಟಾಪ್ ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡ ಈ ಟ್ವಿಟ್ಟರ್ ನಲ್ಲಿ ಸುಶಾಂತ್ ಸಾವಿನ ಸುದ್ದಿ ತಿಳಿದೂ ಕೇವಲ ಟ್ವೀಟ್ ನಲ್ಲಷ್ಟೇ ಸಂತಾಪ ಸೂಚಿಸಲು ಸೀಮಿತರಾದ ಖ್ಯಾತ ನಟರ ವಿರುದ್ಧವೂ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ “ಸುಶಾಂತ್‌ನನ್ನ ಬಾಲಿವುಡ್ ತಮ್ಮ ಕುಟುಂಬದ ಸದಸ್ಯನಂತೆ ಸ್ವೀಕರಿಸಿಯೇ ಇರಲಿಲ್ಲ” ಅನ್ನೋದು ಕೂಡಾ ಟ್ವಿಟ್ಟಿಗರ ವಾದ. ಅಲ್ಲದೇ ಸ್ವತಃ ಈ ಹಿಂದೆ ಸುಶಾಂತ್ ಸಿಂಗ್ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭ ಸೂಚ್ಯವಾಗಿ “ಪ್ರತಿಭೆಗಳನ್ನ ದೂರ ತಳ್ಳುವ ಬಗ್ಗೆ” ಉಲ್ಲೇಖಿಸಿದ್ದು ತೆರೆ ಮೇಲೆ ಮತ್ತೆ ಬರುವಂತಾಗಿದೆ.

ಇದು ಕೇವಲ ಜನರ ಅಭಿಪ್ರಾಯಕ್ಕಷ್ಟೇ ಸೀಮಿತವಾಗಿಲ್ಲ. ಬಾಲಿವುಡ್ ನಟಿ ಕಂಗನಾ ರಣಾವುತ್, ನಟ ಗುಲ್ಶನ್ ದೇವಯ್ಯ ಅವರ ಹೇಳಿಕೆಯಿಂದ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಮೊದಲಿಗೆ ನಟಿ ಮೀರಾ ಚೋಪ್ರಾ, ಸುಶಾಂತ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದ ಬರಹ ಸಾಕಷ್ಟು ಚರ್ಚೆಗೆ ಬಂತು. ಅವರು ಉಲ್ಲೇಖಿಸಿದ್ದ ಅಂಶಗಳು ಬಾಲಿವುಡ್ ನ ಇನ್ನೊಂದು ಮುಖವನ್ನ ಬಯಲು ಮಾಡುವಂತಿತ್ತು. ಬಾಲಿವುಡ್ ದಿಗ್ಗಜ ಕುಟುಂಬಗಳು ಅದ್ಯಾವ ಪರಿಯಾಗಿ ಸುಶಾಂತ್ ನನ್ನ ದೂರವಿಟ್ಟಿತ್ತು ಅನ್ನೋದನ್ನು ಅವರು ಟ್ವೀಟ್ ನಲ್ಲಿ ಸೂಚ್ಯವಾಗಿ ತಿಳಿಸಿದ್ದರು. ಮಾತ್ರವಲ್ಲದೇ “ಯುವ ನಟರ ಒಂದು ಸಿನೆಮಾ ಫ್ಲಾಪ್ ಆದರೂ ಅವರನ್ನ ಅಸೃಶ್ಯರಂತೆ ಕಾಣಲು ಆರಂಭಿಸುತ್ತಾರೆ” ಎಂದು ಬರೆಯುವ ಮೂಲಕ ಮೀರಾ ಚೋಪ್ರಾ ಬಾಲಿವುಡ್ ನಲ್ಲಿರುವ ಪಕ್ಷಪಾತವನ್ನ ತೆರೆದಿಟ್ಟಿದ್ದರು. ಅಲ್ಲದೇ ಇಲ್ಲಿ “ಹೊರಗಿನವರು ಹೊರಗಿನಂತೆಯೇ ಇರಬೇಕಾಗುತ್ತದೆ” ಎಂದೂ ಬರೆದಿದ್ದರು. ಕೊನೆಯದಾಗಿ ಟ್ವೀಟ್ ನಲ್ಲಿ ಪೋಸ್ಟ್ ಮಾಡುವ ಹೊತ್ತಿಗೆ ಅದಕ್ಕೊಂದು ಒಕ್ಕಣೆಯನ್ನೂ ನೀಡಿದ್ದರು. “ಇಡೀ ಸಿನೆಮಾ ಇಂಡಸ್ಟ್ರಿ ಪರವಾಗಿ ನಾನು ಕ್ಷಮೆಯಾಚಿಸುವುದಾಗಿ” ತಿಳಿಸಿದ್ದರು.
My apology to #sushant on behalf of the entire industry and a humble request to my industry folks!! pic.twitter.com/PJHhet6V6I
— meera chopra (@MeerraChopra) June 15, 2020
ಇದೇ ಟ್ವೀಟ್ ಅನ್ನು ಉಲ್ಲೇಖಿಸಿ ಬೆಂಗಳೂರು ಮೂಲದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಕೂಡಾ ಟ್ವೀಟ್ ಮಾಡಿದ್ದು ಗಮನಸೆಳೆಯುವಂತಿದೆ. “ಬಾಲಿವುಡ್ ಅನ್ನೋದು ಒಂದು ಕುಟುಂಬವೇ ಅಲ್ಲ. ಹಾಗೇನಾದರೂ ಅಂದುಕೊಂಡರೆ ಅದೇ ಒಂದು ಸಮಸ್ಯೆ. ʼಬಾಲಿವುಡ್ʼ ಅನ್ನೋದು ಕೇವಲ ನಮ್ಮ ಕರ್ಮಭೂಮಿಯಷ್ಟೇ” ಎಂದು ಬರೆದುಕೊಂಡಿದ್ದಾರೆ. #boycottbollywood ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಈ ಟ್ವೀಟ್ ನೂರಾರು ಬಾರಿ ರೀಟ್ವೀಟ್ ಆಗಿದೆ.
Really sorry to be doing this but Bollywood is not a family , it never was and never will be . If one thinks it’s a family .. there is the problem. Bollywood is an imaginary name for a place of work that’s it . I am really not trying to put anybody down here & sorry if it seems https://t.co/hoz30WiEOJ
— Gulshan Devaiah (@gulshandevaiah) June 15, 2020
ಇನ್ನು ವೀಡಿಯೋ ಮೂಲಕ ಸುಶಾಂತ್ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವುತ್, ಇದೊಂದು ಪೂರ್ವನಿಯೋಜಿತ ಕೊಲೆ ಎಂದೇ ಆರೋಪಿಸಿದ್ದಾರೆ. ಸುಶಾಂತ್ ತನ್ನ ಚಿತ್ರದ ಪ್ರಚಾರ ಸಮಯದಲ್ಲಿ ನೀಡಿದ್ದ ಹೇಳಿಕೆಯನ್ನೇ ಉಲ್ಲೇಖಿಸಿ ಮಾತನಾಡಿರುವ ಕಂಗನಾ, “ಅವರ ಸಿನೆಮಾಗಳು ಪ್ರಶಸ್ತಿ ಪಡೆದಿದ್ದರೂ, ಅವರಿಗೆ ಹೆಚ್ಚಿನ ಮನ್ನಣೆ ನೀಡಲಿಲ್ಲ. ಸಿನೆಮಾ ಇಂಡಸ್ಟ್ರಿ ಅವರನ್ನ ಎಂದೂ ನಮ್ಮವರು ಅನ್ನೋ ಹಾಗೆ ಸ್ವೀಕರಿಸಿದ್ದಿಲ್ಲ” ಎಂದಿದ್ದಾರೆ. “ಅಲ್ಲದೇ ಪತ್ರಕರ್ತರೂ ಆತನನ್ನು ತುಚ್ಛವಾಗಿ ಬರೆದು, ಆತನನ್ನು ಮಾನಸಿಕ ರೋಗಿ, ವ್ಯಸನಿ ಎಂದೆಲ್ಲಾ ಬರೆದಿತ್ತು. ಆದರೆ ಸಂಜಯ್ ದತ್ ವ್ಯಸನಗಳು ನಿಮಗೆ ಇಷ್ಟವಾಗುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
#KanganaRanaut exposes the propaganda by industry arnd #SushantSinghRajput's tragic death &how the narrative is spun to hide how their actions pushed #Sushant to the edge.Why it’s imp to give talent their due &when celebs struggle with personal issues media to practice restraint pic.twitter.com/PI70xJgUVL
— Team Kangana Ranaut (@KanganaTeam) June 15, 2020
ಇನ್ನೂ ಸೆಲೆಬ್ರಿಟಿಗಳ ಹೇರ್ ಸ್ಟೈಲಿಸ್ಟ್ ಸಪ್ನಾ ಭವಾನಿ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಸುಶಾಂತ್ ಸಿಂಗ್ ಜೊತೆ ಬಾಲಿವುಡ್ ಇಂಡಸ್ಟ್ರಿ ನಿಲ್ಲದೇ ಇರೋ ಕುರಿತು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ “ಇಲ್ಲಿ ಯಾರೊಬ್ಬರೂ ನಿನ್ನ ಗೆಳೆಯರಿಲ್ಲ.. ಸುಶಾಂತ್” ಅಂತಾ ಬರೆದುಕೊಂಡಿದ್ದಾರೆ. ನಟ ಅನುಭವ್ ಸಿನ್ಹಾ, ನಿರ್ಮಾಪಕ ನಿಖಿಲ್ ದ್ವಿವೇದಿ ಕೂಡಾ ಬಾಲಿವುಡ್ ನೊಳಗೆ ನಡೆಯುತ್ತಿರುವ ತಾರತಮ್ಯದ ಕುರಿತು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದ್ದಾರೆ.
At times our movie industry's hypocrisy gets to me. High &mighty announcing they shud ve kept in touch wth Sushant..
Cmon u didn't! &thts coz his career dipped. So STFU! R u in touch with Imran Khan, Abhay Deol &others? No!
But u were, whn they were doing well#SushantSinghRajput— Nikhil Dwivedi (@Nikhil_Dwivedi) June 14, 2020
The Bollywood Privilege Club must sit down and think hard tonight.
PS- Now don't ask me to elaborate any further.
— Anubhav Sinha (@anubhavsinha) June 14, 2020
ಇನ್ನು ಸಿನೆಮಾ ಸೆಟ್ ನಲ್ಲಿ ಸುಶಾಂತ್ ಸಿಟ್ಟಿಗೇರುತ್ತಿದ್ದರು ಹಾಗೂ ದುರ್ವರ್ತನೆ ಬಗ್ಗೆ ಸಲ್ಮಾನ್ ಖಾನ್ ನಂತಹ ನಾಯಕ ನಟರೂ ದೂರಿದ್ದರು. ಆದ್ದರಿಂದ ಬಾಲಿವುಡ್ ನ್ನು ಆಳುವ ದೊಡ್ಡ ದೊಡ್ಡ ಬ್ಯಾನರ್ ಗಳಡಿ ಸುಶಾಂತ್ ಗೆ ಅವಕಾಶವಿಲ್ಲ ಅನ್ನೋ ಸುದ್ದಿಯೂ ಈ ವರುಷದಾರಂಭದಲ್ಲಿ ಹರಿದಾಡಿತ್ತು. ಆದರೆ ಜನಸಾಮಾನ್ಯರ ಹಾಗು ಅಭಿಮಾನಿಗಳ ಜೊತೆ ಬೇರೆ ನಟರಂತೆ ಭಾರೀ ಅಂತರ ಕಾಯ್ದುಕೊಳ್ಳದೆ, ತುಂಬಾ ಆತ್ಮೀಯತೆಯಿಂದ ವರ್ತಿಸುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ನಿಜಕ್ಕೂ ಸಿನೆಮಾ ಇಂಡಸ್ಟ್ರಿಯಲ್ಲಿ ಹಾಗೆ ಇದ್ದರೇ ಅನ್ನೋದು ಗೊತ್ತಾಗಿಲ್ಲ. ಈ ಮಧ್ಯೆ ಸಾವಿನ ಕುರಿತು ಸುಶಾಂತ್ ಹುಟ್ಟೂರು ನಿವಾಸಿಗಳಾದ ಬಿಹಾರ ರಾಜ್ಯದ ಮಂದಿ ತನಿಖೆಯನ್ನ ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
The Bollywood Privilege Club must sit down and think hard tonight.
PS- Now don't ask me to elaborate any further.
— Anubhav Sinha (@anubhavsinha) June 14, 2020
ಒಟ್ಟಿನಲ್ಲಿ ʼಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿʼ, ʼಪಿಕೆʼ ಸಿನೆಮಾಗಳಲ್ಲಿನ ಅವರ ನಟನೆ ಯಾವತ್ತೂ ಮರೆಯುವಂತದ್ದಲ್ಲ. ʼಧೋನಿ…ʼ ಸಿನೆಮಾವಂತೂ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿತ್ತು. ಈ ಮೂಲಕ ಭರವಸೆಯ ಹಾಗೂ ಭವಿಷ್ಯದ ನಾಯಕನಾಗಿ ಬೆಳೆಯುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್ ‘ಮಾಫಿಯಾ’ ಪ್ರೇರಿತವೇ ಅನ್ನೋದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಅಷ್ಟೇ..
			
                                
                                
                                