ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತಂತೆ ಸೆಪ್ಟೆಂಬರ್ 30 ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಸೆಪ್ಟಂಬರ್ 30 ರೊಳಗೆ ಪ್ರಕರಣದ ಕುರಿತಂತೆ ಸಂಪೂರ್ಣ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಹಾಗೂ ತೀರ್ಪು ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಗಡುವು ವಿಧಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಪ್ರಕರಣ ಸಂಬಂಧಿತ ಎಲ್ಲಾ 32 ಆರೋಪಿಗಳೂ ವಿಚಾರಣೆಯ ಸಂಧರ್ಭ ಹಾಜರಿರುವಂತೆ ನ್ಯಾಯಾಲಯ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಿಬಿಐನ ವಕೀಲ ಲಲಿತ್ ಸಿಂಗ್ ಅವರು ಸೆಪ್ಟೆಂಬರ್ 1 ರಂದು ರಕ್ಷಣಾ ಮತ್ತು ಕಾನೂನು ಕ್ರಮಗಳ ವಾದಗಳನ್ನು ಮುಕ್ತಾಯಗೊಳಿಸಿದ್ದು, ನಂಬಳಿಕ ವಿಶೇಷ ನ್ಯಾಯಾಧೀಶರು ತೀರ್ಪು ಬರೆಯಲು ಪ್ರಾರಂಭಿಸಿದರು ಎಂದು ಪಿಟಿಐ ತಿಳಿಸಿದೆ. ಪ್ರಕರಣದ ಕುರಿತಂತೆ ಸಿಬಿಐ ಈವರೆಗೆ ಸುಮಾರು 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
Also Read: ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಅವರ ವರದಿಯ ಪ್ರಕಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯು ಅಂತಿಮ ಘಟ್ಟ ತಲುಪಿರುವುದರಿಂದ ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವ ಸಂಬಂಧ ಸೆಪ್ಟೆಂಬರ್ 30ರ ಕಾಲಾವಕಾಶ ವಿಸ್ತರಿಸಲಾಗುವುದು.
ಸುಪ್ರೀಂ ಕೋರ್ಟ್‌ನ 2019ರ ಜುಲೈ ಆದೇಶದ ಪ್ರಕಾರ ನಿಗದಿತ ಸಮಯದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಬೇಕಿತ್ತು. ಕಳೆದ ವರ್ಷದ ಜುಲೈ 19ರ ಆದೇಶದ ಪ್ರಕಾರ ಮುಂದಿನ ಒಂಭತ್ತು ತಿಂಗಳಲ್ಲಿ ಪ್ರಕರಣದ ತೀರ್ಪು ಪ್ರಕಟವಾಗಬೇಕಿತ್ತು.
ಕಳೆದ ಮೇ 6ರಂದು ನ್ಯಾ. ಯಾದವ್ ಅವರು ಸಾಕ್ಷ್ಯಾಧಾರಗಳ ವಿಚಾರಣೆ ನಡೆಯುತ್ತಿದ್ದು, ಉಳಿದಂತೆ ಪ್ರಕರಣ ವಿಚಾರಣೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು. ಪರಿಸ್ಥಿತಿ ಅವಲೋಕಿಸಿದ ಸುಪ್ರೀಂ ಕೋರ್ಟ್ ನ್ಯಾ. ಯಾದವ್ ಅವರಿಗೆ ಆಗಸ್ಟ್ 31ರ ವರೆಗೆ ಗಡುವು ವಿಸ್ತರಿಸಿತ್ತು.
Also Read: ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.
ಪ್ರಕರಣ ವಿಳಂಬವಾಗದಂತೆ ತಡೆಯುವ ಉದ್ದೇಶದಿಂದ ವಿಡಿಯೋ ಕಾನ್ಫೆರೆನ್ಸ್ ವ್ಯವಸ್ಥೆ ಸಿದ್ಧವಿದ್ದು, ನ್ಯಾ. ಯಾದವ್ ಅವರನ್ನು ಅದನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಸುಪ್ರೀಂ ಕೋರ್ಟ್‌ನ ಮೇ ತಿಂಗಳ ಆದೇಶದ ಪ್ರಕಾರ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಹಾಗೂ ಉಮಾ ಭಾರತಿ ವಿರುದ್ಧದ ಪ್ರಕರಣ ಆಗಸ್ಟ್ 31ರೊಳಗೆ ಪೂರ್ಣಗೊಳ್ಳಬೇಕಿತ್ತು. ಆಗಸ್ಟ್ 31ರವರೆಗೆ ಸಮಯ ನೀಡುವ ಮೂಲಕ ಗಡುವು ವಿಸ್ತರಿಸಿದ್ದ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಒಂದು ತಿಂಗಳು ಗಡುವು ವಿಸ್ತರಿಸುವ ಮೂಲಕ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರಿಗೆ ಪ್ರಕರಣದ ವಿಚಾರಣೆ ಹಾಗೂ ತೀರ್ಪು ನೀಡಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಮಾಡಿಕೊಟ್ಟಿತ್ತು.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 2017ರ ಏಪ್ರಿಲ್ ನಲ್ಲಿ ಅಡ್ವಾಣಿ, ಜೋಶಿ, ಉಮಾ ಭಾರತಿ ಹಾಗೂ ಮತ್ತಿತರ ನಾಯಕರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
ರಾಮಜನ್ಮಭೂಮಿಯ ಮೇಲೆ ಮಂದಿರ ಉರುಳಿಸಿ ಬಾಬರಿ ಮಸೀದಿ ನಿರ್ಮಿಸಲಾಗಿದೆಯೆಂದು ಆರೋಪಿಸಿ 1992 ರಲ್ಲಿ ಕರಸೇವಕರು ಮಸೀದಿ ಧ್ವಂಸಗೊಳಿಸಿದ್ದರು. ಜಮೀನು ವ್ಯಾಜ್ಯವನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ಪರಿಹರಿಸಿತ್ತು. ಮಸೀದಿ ಉರುಳಿಸಿದ ಪ್ರದೇಶವನ್ನು ರಾಮ ಮಂದಿರ ನಿರ್ಮಿಸಲು ಸುಪ್ರೀಂ ತೀರ್ಪು ಕೊಟ್ಟಿದ್ದು ಮಸೀದಿಗೆ ಬೇರೆಯೇ 5 ಎಕರೆ ಜಮೀನು ನೀಡಿತ್ತು. ಅದಾಗ್ಯೂ ತೀರ್ಪಿನಲ್ಲಿ ಮಸೀದಿ ಉರುಳಿಸಿದ್ದು ತಪ್ಪೆಂದು ಉಲ್ಲೇಖಿಸಿತ್ತು.
ರಾಮಮಂದಿರ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಿಸುವುದೆಂದು ತೀರ್ಮಾನಿಸಿ, ಆಗಸ್ಟ್ 5 ರಂದು ಭೂಮಿಪೂಜೆಯನ್ನೂ ನೆರವೇರಿಸಲಾಗಿತ್ತು. ಅದಕ್ಕೂ ಮುಂಚಿತವಾಗಿ ಮಾತನಾಡಿದ್ದ ಅಡ್ವಾಣಿ ಇದೊಂದು ಐತಿಹಾಸಿಕ ಹಾಗೂ ಭಾವನಾತ್ಮಕ ಕ್ಷಣವೆಂದು ಕರೆದಿದ್ದರು. ಅಲ್ಲದೆ ರಾಮ ರಥ ಯಾತ್ರ ನಡೆಸಲು ತಾನು ಪ್ರಮುಖ ಪಾತ್ರವಾದುದಕ್ಕೆ ವಿನಮ್ರತೆ ವ್ಯಕ್ತಪಡಿಸಿದ್ದರು.
ಜುಲೈ 25 ರಂದು ಉಮಾಭಾರತಿ ಧ್ವಂಸ ಪ್ರಕರಣದ ನೀಡುವ ತೀರ್ಪು ಕುರಿತಂತೆ ನೀಡಿದ ಹೇಳಿಕೆಯಲ್ಲಿ, ಈ ಪ್ರಕರಣದಲ್ಲಿ ನನಗೆ ಗಲ್ಲು ಶಿಕ್ಷೆ ಕೊಟ್ಟರೂ ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಹೇಳಿದ್ದರು.